ಪ್ರಸ್ತುತ ಅಧಿವೇಶನದಲ್ಲೇ ಅಪಾರ್ಟ್‌ಮೆಂಟ್‌ ಮಾಲೀಕತ್ವ, ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸಲು ಆಗ್ರಹ

WhatsApp
Telegram
Facebook
Twitter
LinkedIn

ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆಯನ್ನು ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲೇ ಅಂಗೀಕರಿಸಬೇಕು ಹಾಗೂ ಅಪಾರ್ಟ್‌ಮೆಂಟ್‌ ಸಮುದಾಯಗಳ ಮೇಲೆ ವಿಧಿಸಲಾಗಿರುವ ತಾರತಮ್ಯದಿಂದ ಕೂಡಿದ ಘನತ್ಯಾಜ್ಯ ನಿರ್ವಹಣಾ ಶುಲ್ಕವನ್ನು ತಕ್ಷಣವೇ ಹಿಂಪಡೆಯಬೇಕು ಎಂದು‌ ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡೆರೇಷನ್ ಸರ್ಕಾರವನ್ನು ಮನವಿ ಮಾಡಿದೆ.

ಈ ಕುರಿತು ಮಂಗಳವಾರ ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಫೆಡರೇಷನ್‌ ಅಧ್ಯಕ್ಷ ಸತೀಶ್ ಮಲ್ಯರು ಮಾತನಾಡಿ, ಹಳೆಯ 𝟭𝟵𝟳𝟮 ರ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆಯ ಬದಲಿಗೆ ಹೊಸ ಕಾನೂನನ್ನು ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ಭರವಸೆ ನೀಡಿ ಎರಡು ವರ್ಷಗಳು ಕಳೆದಿದೆ. 2025 ರ ಜುಲೈ 𝟮𝟬𝟮𝟱 ರಿಂದಲೇ ಕರಡು ಸಿದ್ಧವಾಗಿದೆ. ಕಳೆದ ವರ್ಷ ಡಿಸೆಂಬರ್‌ 2 ರಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಯನ್ನು ಅಂಗೀಕರಿಸುವಂತೆ ಒತ್ತಾಯಿಸಲಾಗಿತ್ತು ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಬೆಂಗಳೂರು ನಗರದ ಅಪಾರ್ಟ್‌ಮೆಂಟ್‌ ಫೆಡರೇಷನ್‌ ಸದಸ್ಯರನ್ನು ಆಹ್ವಾನಿಸಿ ಸಾರ್ವಜನಿಕವಾಗಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಸಲಹೆಗಳನ್ನು ನೀಡುವ ಮತ್ತು ಅದನ್ನು ಪರಿಶೀಲಿಸುವ ಕಾರ್ಯ ಮುಗಿದಿದ್ದರೂ ಕೂಡಾ ಈ ಮಸೂದೆಯನ್ನು ಇನ್ನೂ ಮಂಡಿಸುವ ತಯಾರಿ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲಕ್ಷಾಂತರ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ನೀಡಿದ್ದ ಭರವಸೆಗಳ ಬಗ್ಗೆ ಸರ್ಕಾರವನ್ನು ನೆನಪಿಸಲು ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದೇವೆ. ಕಾಯ್ದೆ ಅಂಗೀಕಾರದಲ್ಲಿನ ವಿಳಂಬದಿಂದಾಗಿ, ನಾಗರಿಕರು ತಮ್ಮ ಅಪಾರ್ಟ್‌ಮೆಂಟ್‌ಗಳನ್ನು ನಿರ್ವಹಿಸಲು, ವಿವಾದಗಳನ್ನು ಪರಿಹರಿಸಿಕೊಳ್ಳಲು ಮತ್ತು ಮಾಲೀಕತ್ವದ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಕಾನೂನು ಚೌಕಟ್ಟಿಲ್ಲದೆ ಪರದಾಡುವಂತಾಗಿದೆ. ಕರ್ನಾಟಕದಾದ್ಯಂತ ಲಕ್ಷಾಂತರ ಅಪಾರ್ಟ್‌ಮೆಂಟ್‌ ಮಾಲೀಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಪ್ರಸ್ತುತ ಬಜೆಟ್ ಅಧಿವೇಶನದಲ್ಲೇ ಈ ಕಾಯ್ದೆಯನ್ನು ಅಂಗೀಕರಿಸುವಂತೆ ಉಪಮುಖ್ಯಮಂತ್ರಿಗಳು ಮತ್ತು ಎಲ್ಲಾ ಶಾಸಕರಲ್ಲಿ ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಬಿಎಎಫ್ ಸತೀಶ್ ಮಲ್ಯ ತಿಳಿಸಿದರು.

ಉಪಾಧ್ಯಕ್ಷ ಪ್ರದೀಪ್ ಪೈ ಮಾತನಾಡಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಇತ್ತೀಚೆಗೆ ನೀಡಿರುವ ನೋಟಿಸ್‌ಗಳ ಬಗ್ಗೆಯೂ ಫೆಡೆರೇಷನ್ ತೀವ್ರ ಕಳವಳ ವ್ಯಕ್ತಪಡಿಸುತ್ತದೆ. ಜನವರಿ 𝟮𝟬𝟮𝟲 ರ ಮಧ್ಯಭಾಗದಿಂದ, ಹೊಸ ನಿಯಮಗಳ ಅಡಿಯಲ್ಲಿ 𝟭𝟬𝟬 ಕ್ಕೂ ಹೆಚ್ಚು ಘಟಕಗಳಿರುವ ಅಪಾರ್ಟ್‌ಮೆಂಟ್‌ಗಳಲ್ಲಿನ ಘನತ್ಯಾಜ್ಯದ ಮೇಲಿನ ಬಳಕೆದಾರರ ಶುಲ್ಕವನ್ನು ವಿಧಿಸಲು ಅವುಗಳನ್ನು ಬೃಹತ್ ತ್ಯಾಜ್ಯ ಉತ್ಪಾದಕರು ಎಂದು ಅನ್ಯಾಯವಾಗಿ ವರ್ಗೀಕರಿಸಲಾಗಿದೆ. 𝟮𝟬𝟬𝟬 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಸ್ವತಂತ್ರ ಮನೆಯೊಂದು ಆಸ್ತಿ ತೆರಿಗೆಯ ಮೂಲಕ ತಿಂಗಳಿಗೆ ಕೇವಲ 𝟭𝟬𝟬 ರೂಪಾಯಿಗಳ ನಾಮಮಾತ್ರ ಶುಲ್ಕವನ್ನು ಪಾವತಿಸುತ್ತಿದ್ದರೆ, ಅಪಾರ್ಟ್‌ಮೆಂಟ್‌ ನಿವಾಸಿಗಳ ಮೇಲೆ ಪ್ರತಿ ಕೆಜಿಗೆ 𝟭𝟮 ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದರ ಜೊತೆಗೆ ಶೇ. 𝟭𝟴 ರಷ್ಟು ಜಿ.ಎಸ್.ಟಿ ಹೊರೆಯೂ ಸೇರಿ, ಪ್ರತಿ ಫ್ಲಾಟ್‌ಗೆ ತಿಂಗಳಿಗೆ ಸರಿಸುಮಾರು 𝟯𝟲𝟬 ರೂಪಾಯಿಗಳಷ್ಟು ಶುಲ್ಕ ಬೀಳುತ್ತಿದೆ. ಇದರಿಂದ ತ್ಯಾಜ್ಯ ವಿಲೇವಾರಿ ವೆಚ್ಚದಲ್ಲಿ ಬರೋಬ್ಬರಿ ಶೇ. 𝟲𝟬𝟬 ರಷ್ಟು ಹೆಚ್ಚಳವಾದಂತಾಗಿದೆ. 𝟱𝟬𝟬 ಘಟಕಗಳಿರುವ ಅಪಾರ್ಟ್‌ಮೆಂಟ್‌ಗೆ ಇದು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳ ಹೆಚ್ಚುವರಿ ಹೊರೆಯಾಗಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಎಫ್ ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್, ಆಡಳಿತ ಮಂಡಳಿ ಸದಸ್ಯ ಹಾಗೂ ಲೀಡ್ ಕಮ್ಯುನಿಕೇಷನ್ಸ್ ನ ವಿಶ್ವ ವೆಂಕಟ ರೆಡ್ಡಿ ಉಪಸ್ಥಿತರಿದ್ದರು

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon