𝟭𝟬𝟬 ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ತಿರುಪತಿ ವೆಂಕಟೇಶ್ವರ ಮಂದಿರ

WhatsApp
Telegram
Facebook
Twitter
LinkedIn

ಬೆಳಗಾವಿ‌: ಗಡಿಜಿಲ್ಲೆ ಬೆಳಗಾವಿ ನಗರದ ಹೊರವಲಯದಲ್ಲಿರುವ ಕೋಳಿಕೊಪ್ಪ ಗ್ರಾಮದ ಬೆಟ್ಟದ ಮೇಲೆ ಬರೋಬ್ಬರಿ 𝟭𝟬𝟬 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ತಿರುಪತಿ ವೆಂಕಟೇಶ್ವರ ದೇವಸ್ಥಾನ ತಲೆ ಎತ್ತಲಿದೆ. ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಗೆ 𝟳 ಎಕರೆ ಭೂಮಿಯನ್ನು ಅಧಿಕೃತವಾಗಿ ಮಂಗಳವಾರ ಹಸ್ತಾಂತರಿಸಲಾಗಿದೆ.

ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ರೆಡ್ಡಿ ಹಾಗೂ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಅವರುಗಳು ಜಮೀನಿನ ದಾಖಲೆಗಳನ್ನು ಹಸ್ತಾಂತರಿಸಿದರು. ಇಂದರೊಂದಿಗೆ ಮುಂದಿನ 𝟮 ವರ್ಷಗಳಲ್ಲಿ ತಿರುಮಲ ತಿರುಪತಿ ಮಾದರಿಯಲ್ಲೇ ಈ ಭವ್ಯ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ದೇವಸ್ಥಾನದ ಜೊತೆಗೆ ತಿರುಪತಿಯಂತೆಯೇ ಭಕ್ತರಿಗೆ ವಸತಿ ಸೌಲಭ್ಯ ಹಾಗೂ ನಿರಂತರ ಅನ್ನಪ್ರಸಾದ ವಿತರಣೆಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಈ ಕುರಿತು ಮಾತನಾಡಿರುವ ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ರೆಡ್ಡಿ, ನಮ್ಮ ಬೆಳಗಾವಿ ಭಾಗದ ಭಕ್ತರಿಗೆ ವೆಂಕಟೇಶ್ವರನ ದರ್ಶನ ಭಾಗ್ಯವನ್ನು ಸ್ಥಳೀಯವಾಗಿಯೇ ಕಲ್ಪಿಸುವ ಉದ್ದೇಶದಿಂದ 𝟳 ಎಕರೆ ಭೂಮಿಯನ್ನು ನೀಡಿದ್ದೇವೆ. ಇದು ನಮ್ಮೆಲ್ಲರ ಸೌಭಾಗ್ಯ ಎಂದಿದ್ದಾರೆ.

ಯೋಜನೆಯ ವೆಚ್ಚ ಮತ್ತು ಅನುದಾನದ ವಿವರ:

ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನಕ್ಕಾಗಿ ಟಿಟಿಡಿ ಹಣ ಮೀಸಲಿಟ್ಟಿದೆ. ಬೆಳಗಾವಿಯ ಈ ನೂತನ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಯಿಂದ ಶೇ. 𝟴𝟬 ರಷ್ಟು ಅನುದಾನ ನೀಡಲಾಗಲಿದೆ. ಉಳಿದಂತೆ ಬೆಳಗಾವಿ ರೆಡ್ಡಿ ಸಂಘದಿಂದ ಮತ್ತು ದಾನಿಗಳಿಂದ ಶೇ. 𝟭𝟬 ರಷ್ಟು ದೇಣಿಗೆ ಸಂಗ್ರಹಿಸಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪೂರ್ಣಗೊಳಿಸಲಾಗಲಿದೆ.

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon