ಶಿವಮೊಗ್ಗಕ್ಕೆ ತೆರಳಲು ನಗರದಿಂದ ಹೊರಟ್ಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬೆಂಕಿ

WhatsApp
Telegram
Facebook
Twitter
LinkedIn

ಬೆಂಗಳೂರು: ನಗರದಿಂದ ಶಿವಮೊಗ್ಗ ತೆರಳುತ್ತಿದ್ದ ಕೆಎಸ್ ಆರ್ ಟಿಸ್ ಬಸ್ ಬೆಂಕಿ ಹೊತ್ತಿ ಉರಿದಿದೆ. ದುರಂತದಲ್ಲಿ ಸಿಲುಕಿದ್ದ, ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆ.

ಗುರುವಾರ ರಾತ್ರಿ 10.15ರ ಸುಮಾರಿಗೆ ಮೆಜೆಸ್ಟಿಕ್ ನಿಂದ  ಶಿವಮೊಗ್ಗಕ್ಕೆ ತೆರಳಲು ಹೊರಟ್ಟಿದ್ದ ಬಸ್  ಲುಲು ಮಾಲ್ ಮುಂಭಾಗ ಬರುತ್ತಿದ್ದಂತೆ ಏಕಾಏಕಿ ಬಸ್ ನಿಂತಿದೆ. ಚಾಲಕ ಪರಿಶೀಲನೆ ನಡೆಸುವಷ್ಟರಲ್ಲೇ ಬಸ್ ನ ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಬಸ್ ನಲ್ಲಿ ಎಲ್ಲಾ ಪ್ರಯಾಣಿಕರನ್ನ ಕೆಳಗಿಳಿಸಲಾಗಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಧಗಧಗನೆ ಉರಿದು ಬಸ್ ಗೆ ಆವರಿಸಿಕೊಂಡಿದೆ. ಅಗ್ನಿಶಾಮಕದಳ ಸಿಬ್ಬಂದಿ ಬರುವಷ್ಟರಲ್ಲೇ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಬಳಿಕ ಬೆಂಕಿ ಮಂಡಿಸಲಾಗಿದೆ.

ಬಸ್ ಗೆ ಬೆಂಕಿ ಸಂಬಂಧ ಓಕಳೀಪುರ, ಸಿರ್ಸಿ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಹೆಚ್ಚಾಗಿದ್ದು ಕಂಡು ಬಂದಿತ್ತು. ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon