ವನಲೋಕ್ ಫೌಂಡೇಶನ್ ವತಿಯಿಂದ ಗ್ರೀನ್ ಸ್ಕೂಲ್ ನೆಟ್‌ವರ್ಕಿಂಗ್ ಸಮ್ಮೇಳನ

WhatsApp
Telegram
Facebook
Twitter
LinkedIn

ಬೆಂಗಳೂರು: ವನಲೋಕ್ ಫೌಂಡೇಶನ್, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಸಹಯೋಗದಲ್ಲಿ ಗ್ರೀನ್ ಸ್ಕೂಲ್ಸ್ ಬೆಂಗಳೂರು ಕಾನ್ಫ್ಲೇವ್ 2026 ಬುಧವಾರ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಡಿಟೋರಿಯಂನಲ್ಲಿ ನಡೆಯಿತು.

ಸುಸ್ಥಿರತೆಗಾಗಿ ಶಿಕ್ಷಣದಲ್ಲಿ ಪ್ರಕೃತಿ ಎಂಬ ವಿಷಯದಡಿ ನಡೆದ ಈ ಕಾರ್ಯಕ್ರಮದಲ್ಲಿ 95 ಶಾಲೆಗಳಿಂದ 125 ಪ್ರತಿನಿಧಿಗಳು, ನೀತಿ ನಿರೂಪಕರು ಮತ್ತು ಪರಿಸರ ತಜ್ಞರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರೀನ್ ಸ್ಕೂಲ್ಸ್ ಬೆಂಗಳೂರು ನೆಟ್‌ವರ್ಕಿಂಗ್ ಜಾಲದ ಅಧಿಕೃತ ಘೋಷಣೆ ಮಾಡಲಾಯಿತು.

ಕರ್ನಾಟಕ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖ್ಯ ಆಯುಕ್ತ ಡಾ. ಪಿ.ಜಿ.ಆರ್. ಸಿಂಧಿಯಾ ಉದ್ಘಾಟನಾ ಭಾಷಣ ಮಾಡಿದರು. ವನಲೋಕ್ ಫೌಂಡೇಶನ್ ಹತ್ತು ಮಾದರಿ ಹಸಿರು ಶಾಲೆಗಳನ್ನು ಸ್ಥಾಪಿಸಬೇಕು. ಈ ಶಾಲೆಗಳಲ್ಲಿ ಆಹಾರ ಮತ್ತು ಔಷಧೀಯ ಗಿಡಗಳ ತೋಟ, ತ್ಯಾಜ್ಯ ವಿಂಗಡಣೆ, ಮರುಬಳಕೆ ಮತ್ತು ಅಪ್‌ಸೈಕ್ಲಿಂಗ್, ವೃತ್ತಾಕಾರ ಆರ್ಥಿಕತೆ, ಮಳೆನೀರು ಕೊಯ್ಲು, ಕಂಪೋಸ್ಟ್ ಮತ್ತು ಸೌರಶಕ್ತಿ ಅಳವಡಿಸಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಸ್ವಯಂಸುಸ್ಥಿರವಾಗುವಂತೆ ಮಾಡಬೇಕು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ ಕೂಡ ಎಲ್ಲಾ ಶಾಲೆಗಳಲ್ಲಿ ಗ್ರೀನ್ ಸ್ಕೂಲ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಿದೆ ಎಂದು ಹೇಳಿದರು.

ಪರಿಸರ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಪ್ರಿ ಮಹಾನಿರ್ದೇಶಕ ಶ್ರೀನಿವಾಸುಲು ಮಾತನಾಡಿ, ಐಎಫ್‌ಎಸ್, ಗ್ರೀನ್ ಸ್ಕೂಲ್ಸ್ ಪರಿಕಲ್ಪನೆ ವಿಶಿಷ್ಟವಾಗಿದೆ. ನಗರದ ಮಕ್ಕಳು ಪ್ರಕೃತಿಯಿಂದ ದೂರ ಸರಿಯುತ್ತಿದ್ದು, ಅವರನ್ನು ಪ್ರಕೃತಿಯೊಂದಿಗೆ ಮತ್ತೆ ಜೋಡಿಸುವ ಅಗತ್ಯವಿದೆ. ಕಾರ್ಯಕ್ರಮಕ್ಕೆ ಸರ್ಕಾರದ ಬೆಂಬಲ ಕೂಡ ಇರಲಿದೆ ಎಂದು ತಿಳಿಸಿದರು.

ವನಲೋಕ್ ಫೌಂಡೇಶನ್‌ನ ಸಿಇಒ ಡಾ. ಸಂತೋಷ್ ಸುತಾರ್ ಮಾತನಾಡಿ, ಈ ಜಾಲವು ವಿದ್ಯಾರ್ಥಿಗಳಿಗೆ ಪರಿಸರ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಪ್ರಾಯೋಗಿಕ ಅನುಭವ ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮ ನಿರ್ದೇಶಕಿ ಡಾ. ರೂಪಾ ಡಿ ತಮ್ಮ ಭಾಷಣದಲ್ಲಿ, ಜ್ಞಾನ ನೀಡುವ ಮೂಲಕ ಯುವ ಮನಸ್ಸುಗಳಲ್ಲಿ ಮನೋಭಾವದ ಬದಲಾವಣೆ ತರಬಹುದು. ಈ ಬದಲಾವಣೆ ಅವರ ನಡುವಳಿಕೆಯಲ್ಲಿ ಪ್ರತಿಫಲಿಸುತ್ತದೆ. ವಿದ್ಯಾರ್ಥಿಗಳ ಸಾಮೂಹಿಕ ನಡುವಳಿಕೆಯ ಬದಲಾವಣೆ ಪ್ರಮುಖ ಪರಿಸರ ಕ್ರಿಯೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.

ಗ್ರೀನ್ ಸ್ಕೂಲ್ಸ್ ಬೆಂಗಳೂರು ಜಾಲದ ವೆಬ್‌ಸೈಟ್, ಎಕಾಲಾಜಿಕ್ಸ್ ಟು ಎಕನಾಮಿಕ್ಸ್ ಕ್ರೆಡಿಟ್ ಕೋರ್ಸ ಪುಸ್ತಕವನ್ನು ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon