ರಾಕಾ ಲುಕ್ ಗಾಗಿ ಅಲ್ಲು ಅರ್ಜುನ್ ಹಾಕಿದ ಶ್ರಮ ಎಷ್ಟು ಗೊತ್ತಾ?

WhatsApp
Telegram
Facebook
Twitter
LinkedIn

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸರಣಿ ಸಿನಿಮಾಗಳ ಬಳಿಕ ಮತ್ತೊಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ತಮಿಳು ನಿರ್ದೇಶಕ ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ. ಒಂದಷ್ಟು ಸ್ಯಾಂಪಲ್ ಮೂಲಕ ಕುತೂಹಲ ಹೆಚ್ಚಿಸಿದ್ದ ರಾಕಾ ಸಿನಿಮಾದ ಫಸ್ಟ್ ಲುಕ್ ಅಲ್ಲು ಅರ್ಜುನ್ ಬರ್ತಡೇಗೆ ರಿವೀಲ್ ಮಾಡಲಾಗಿತ್ತು. ಅರ್ಧ ಮೃಗ, ಅರ್ಧ ಮನುಷ್ಯನ ಅವತಾರದಲ್ಲಿ ಸ್ಟೈಲಿಶ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.

ಅಲ್ಲು ಅರ್ಜುನ್ ರಾಕಾ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಲುಕ್ ಗಾಗಿ ದಿನಕ್ಕೆ 3 ರಿಂದ 4 ಗಂಟೆ ಶ್ರಮ ಹಾಕಿದ್ದಾರೆ. ಇದು ಐಕಾನ್ ಸ್ಟಾರ್ ಗೆ ಸಿನಿಮಾ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಪ್ರತಿ ಪಾತ್ರಕ್ಕೂ ಅಲ್ಲು ಅರ್ಜುನ್ ಹಾಕುವ ಪರಿಶ್ರಮ ಹೇಗೆ ಇರಲಿದೆ ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ರಾಕಾ ಪೋಸ್ಟರ್ ನಲ್ಲಿ ಕೈ ಎತ್ತಿ ಅಲ್ಲು ಗೆಸ್ಚರ್ ಒಂದನ್ನು ಮಾಡಿದ್ದು, ಅದನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ರೀ ಕ್ರಿಯೇಟ್ ಮಾಡಿದ್ದಾರೆ. ಆರ್.ಸಿ.ಬಿ ವರ್ಸಸ್ ಮುಂಬೈ ಇಂಡಿಯನ್ಸ್ ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರಾಕಾ ಚಿತ್ರದ ಸಿಗ್ನೇಚರ್ ಹ್ಯಾಂಡ್ ಗೆಸ್ಚರ್ ಮಾಡಿದ್ದಾರೆ.

ರಾಕಾ ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡುತ್ತಿದೆ. ಹಾಲಿವುಡ್ ಗ್ರಾಫಿಕ್ಸ್ ಸ್ಟುಡಿಯೋ ಕೈ ಜೋಡಿಸಿದೆ. ಈ ಚಿತ್ರ ಫ್ಯಾಂಟಸಿ ಕತೆಯನ್ನು ಒಳಗೊಂಡಿದೆ. ಭಾರಿ ಬಜೆಟ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon