ಮಹಾಲಕ್ಷ್ಮೀ ಲೇಔಟ್ ನಲ್ಲಿ ಸಾವಿರಾರು ಒಂಟಿಕೊಪ್ಪಲ್ ಪಂಚಾಂಗ ಉಚಿತವಾಗಿ ವಿತರಣೆ

WhatsApp
Telegram
Facebook
Twitter
LinkedIn

ಬೆಂಗಳೂರು: ಮಹಾಲಕ್ಷ್ಮೀ ಎಜುಕೇಶನಲ್ ಟ್ರಸ್ಟ್  ಮತ್ತು ಮಹಾಲಕ್ಷ್ಮೀಪುರ ಬ್ರಾಹ್ಮಣ ಸಭಾ ವತಿಯಿಂದ ಭಾನುವಾರ ಹೊಸ ಸಂವತ್ಸರದ ಸಾವಿರಕ್ಕಿಂತ ಹೆಚ್ಚು ಒಂಟಿಕೊಪ್ಪಲ್ ಪಂಚಾಂಗ ಉಚಿತ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಸವೇಶ್ವರ ನಗರದ ಶ್ರೀ ಹುತ್ತದ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದ ಮಹಾ ಗುರುಗಳು ದಿವ್ಯಾ ಸಾನಿಧ್ಯದಲ್ಲಿ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪಂಚಾಂಗದ ಮಹತ್ವವನ್ನು ವಿವರಿಸಿದರು. ಹಾಗೆಯೇ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಎಲ್ಲ ಮನೆಗಳು ಉಚಿತವಾಗಿ ವಿತರಣೆ ಮಾಡಲಾಯಿತು.

ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ ಮಾತಾಡಿ ಈ ವಿಶೇಷ ಕಾರ್ಯಕ್ರಮವನ್ನು ಕಳೆದ 8 ವರ್ಷಗಳಿಂದ  ನಡೆಸಿಕೊಂಡು ಬರಲಾಗುತ್ತಿದೆ. ಹೊಸ ವರ್ಷದ ಆಚರಣೆ ಗೂ ಮೊದಲೇ ಸಾವಿರಾರು ಒಂಟಿಕೊಪ್ಪಲ್ ಪಂಚಾಂಗ ವಿತರಣೆ ಮಾಡಲಾಗುತ್ತಿದೆ ಎಂದು ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಮಹಾಲಕ್ಷ್ಮೀಪುರ ಬ್ರಾಹ್ಮಣ ಸಭಾದ ಅಧ್ಯಕ್ಷ ಬಿ.ಎಸ್.ರಾಘವೇಂದ್ರ ಭಟ್ ಮಾತನಾಡಿ  ಹಿಂದೂ ಧರ್ಮದಲ್ಲಿ ನಮಗೆ ಯುಗಾದಿ ಹಬ್ಬ ಹೊಸ ವರ್ಷ, ಭೂಮಿಯಲ್ಲಿ ಯುಗಾದಿ ಸಮಯದಲ್ಲಿ ಬಹಳಷ್ಟು ನೈಸರ್ಗಿಕ ಬದಲಾವಣೆ ಬಹಳಷ್ಟುಗುತ್ತದೆ. ಈ ಇಲ್ಲ ಮಾಹಿತಿಯನ್ನ ತಿಳಿಯಲು ನಾವು ಒಂಟಿಕೊಪ್ಪಲ್ ಪಂಚಾಂಗ ಅನುಸರಿಸುವುದು ಅಗತ್ಯವಾಗಿದೆ. ಆದ್ದರಿಂದ ನಾವು ನಮ್ಮ ಭಾಗದಲ್ಲಿ ಎಲ್ಲ ಮನೆಗಳುಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon