ಬೆಳಗಾವಿ: ಬೆಳಗಾವಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅವ್ಯವಹಾರ ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಬೆಳಗಾವಿ ಭೂದಾಖಲೆಗಳ ಉಪನಿರ್ದೇಶಕರ ಕಚೇರಿಯಿಂದ ಬೆಳಗಾವಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಅಜಯ ಹಾದಿಮನಿ ಅವರಿಗೆ ಆರೋಪಗಳ ವಿವರಣೆ ನೀಡುವಂತೆ ಸೂಚಿಸಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ಈ ಬಗ್ಗೆ ಪ್ರಜಾನೆರಳು ದಿನಪತ್ರಿಕೆಯಲ್ಲಿ 03.02.2026 ಹಾಗೂ 11.02.2026 ರಂದು ಪ್ರಕಟವಾದ ವರದಿಗಳನ್ನು ಆಧರಿಸಿ ಅಧಿಕಾರಿ ಹಾದಿಮನಿ ಅವರಿಗೆ ಈ ನೋಟಿಸ್ ಜಾರಿಯಾಗಿದೆ. ದಿನಾಂಕ 11.02.2026 ರಂದೇ ನೋಟಿಸ್ ಜಾರಿ ಮಾಡಲಾಗಿದ್ದು, ನೋಟಿಸ್ ತಲುಪಿದ ತಕ್ಷಣ ಉತ್ತರಿಸುವಂತೆ ಸೂಚಿಸಲಾಗಿದೆ.

ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಜಿಪಿ ಮಾಡಲು ಲಂಚ ಪಡೆಯುತ್ತಿರುವ ಬಗೆಗಿನ ಆರೋಪಗಳ ಮತ್ತು ಬೆಳಗಾವಿ ತಾಲೂಕಿನ ಸರ್ವೆ ನಂಬರ್ ಗಳಾದ ನಂಬರ್ 90/2, 11, 594, 1197, 236 ಈ ನಕ್ಷೆಗಳನ್ನು ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪಗಳ ಬಗ್ಗೆ ಪ್ರಜಾನೆರಳು ದಿನಪತ್ರಿಕೆ ವರದಿ ಮಾಡಿತ್ತು. ಸದ್ಯ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಸದರಿ ಆರೋಪಿ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.














