ಸಾಗರ ಕೃಷ್ಣಾ ಕೋಳೆಕರ, ಸಂಪಾದಕರು
ಬೆಳಗಾವಿ ಜಿಲ್ಲೆಯ ಒಬ್ಬ ಭ್ರಷ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ 3 ಪಂಚಾಯಿತಿಗಳ ಉಸ್ತುವಾರಿಯನ್ನು ನೀಡಲಾಗಿದ್ದು, ಇದರ ಹಿಂದೆ ಕಾಣದ ಕೈಗಳು ಕೆಲಸನ ಮಾಡುತ್ತಿವೆಯಾ ಎನ್ನುವ ಅನುಮಾನಗಳು ಕಾಡುತ್ತಿವೆ ಜೊತೆಗೆ ಈ ಪಿಡಿಒ ಹೆಸರು ನಾಮವಂತನಾಗಿದ್ದು, ಜನರಿಗೆ ಮೂರು ನಾಮ ಹಾಕುವುದರಲ್ಲಿ ನಿಸ್ಸೀಮನಾಗಿರುವುದು ಕೂಡ ಹಿರಿಯ ಅಧಿಕಾರಿಗಳ ಹೆಚ್ಚಿನ ಪ್ರೀತಿಗೆ ಪಾತ್ರವಾದಂತೆ ತೋರುತ್ತಿದೆ.
ಈ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಭ್ರಷ್ಟಾಚಾರವನ್ನು ಮಾಡಿದ್ದಾನೆ ಎಂದು ಆತ ಈಗಾಗಲೇ ಕೆಲಸ ನಿರ್ವಹಿಸಿದ ಗ್ರಾಮ ಪಂಚಾಯಿತಿ ಜನರು ಮಾತನಾಡಿಕೊಳ್ಳುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಇದು ಕಳ್ಳನ ಕೈಯಲ್ಲಿ ಕಿಲಿಕೈ ನೀಡಿದ ಹಾಗಾಗಿದೆ. ಇವನ ಹಿಂದೆ ಪಂಚಾಯತ್ ರಾಜ್ ಇಲಾಖೆಯ ಮೇಲಾಧಿಕಾರಿಗಳ ಕೃಪಾಕಟಾಕ್ಷವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದಂತೂ ಸತ್ಯ.
ಸಾಕಷ್ಟು ಅಕ್ರಮ ಆಸ್ತಿಗಳ ವಾರಸುದಾರನಾಗಿರುವ ನಾಮವಂತನಿಗೆ ಮೂರು ಗ್ರಾಮ ಪಂಚಾಯಿತಿಗಳ ಮೇಲುಸ್ತುವಾರಿಯನ್ನು ನೀಡಿರುವುದು ಕೂಡ ಹಲವು ಅನುಮಾನಕ್ಕೆ ಕಾರಣವಾಗಿ. ಒಂದು ಗ್ರಾಮ ಪಂಚಾಯಿತಿಯನ್ನೇ ಸರಿಯಾಗಿ ನಿರ್ವಹಿಸದೆ ಸುಲಿಗೆ ಮಾಡುವ ವ್ಯಕ್ತಿಗೆ ಹೆಚ್ಚಿನ ಅಧಿಕಾರ ವ್ಯಾಪ್ತಿಯನ್ನು ನೀಡಿರುವುದು ಬೆಳಗಾವಿ ತಾಲೂಕಿನ ಜನರಿಗಂತೂ ಶಾಪವಾಗಿದೆ.
ಮಾನ್ಯ ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕರ್ ಖರ್ಗೆ ಮತ್ತು ಇಲಾಖೆಯ ಕಾರ್ಯದರ್ಶಿಯಾದ ಡಿ ರಣದೀಪ್ ಅವರೇ ನಿಮ್ಮ ಇಲಾಖೆಯ ವ್ಯಾಪ್ತಿಯಲ್ಲಿರುವ ಭ್ರಷ್ಟ ಹಾಗೂ ಬೇಜವಾಬ್ದಾರ ಅಧಿಕಾರಿಗಳ ಬಗ್ಗೆ ಮಾಹಿತಿ ನಿಮಗೆ ಇಲ್ಲವೇ? ನಿಮ್ಮ ಅಧಿಕಾರಿಗಳಿಗೆ ಶಿಸ್ತಿನ ಪಾಠ ಕಲಿಸುವ ಶಕ್ತಿ ನಿಮ್ಮಗೆ ಇಲ್ಲವಾಯಿತೇ? ಹೇಳುವರು ಇಲ್ಲ ಕೇಳುವರು ಇಲ್ಲ ಎಂದು ಮನಬಂದಂತೆ ಅಧಿಕಾರಿಗಳು ವರ್ತಿಸುತ್ತಿದಾರೆ ಅದಕ್ಕೆ ಕಡಿವಾಣ ಹಾಕುವರು ಯಾರು? ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತಿದರೂ, ಭ್ರಷ್ಟಾಚಾರ ನಡೆಯುತ್ತಿದರೂ ತಾವುಗಳು ಕಣ್ಣುಮುಚ್ಚಿ ಕುಳಿತಿರುವುದು ಏಕೆ? ಈ ಭ್ರಷ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಹಲವು ಪೀಡಿಒಗಳ ಭ್ರಷ್ಟಾಚಾರದ ಕರ್ಮಕಾಂಡಗಳು ನಿಮ್ಮ ಮುಂದೆ ಇದ್ದರೂ ಮೌನವಾಗಿರುವುದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀವೇ ನೀಡಬೇಕಿದೆ.















