ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರನ್ನು ಹೆಚ್ಚಿಸುವ ಸಂಕಲ್ಪ: ಈಶ್ವರ್ ಖಂಡ್ರೆ

WhatsApp
Telegram
Facebook
Twitter
LinkedIn

ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರ ಸಂಖ್ಯೆಯನ್ನು 10 ಲಕ್ಷಕ್ಕೆ ಹೆಚ್ಚಿಸುವ ಸಂಕಲ್ಪ ಮಾಡಲಾಗಿದೆ ಎಂದು ಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಮಹಾಸಭಾದ ಅಧಿಕೃತ ಅಂತರ್ಜಾಲ ತಾಣ www.aivlm.orgಗೆ ಚಾಲನೆ ನೀಡಿ ಮಾತನಾಡಿದ ಅವರು, 1904ರಲ್ಲಿ ಶ್ರೀ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಮಹಾಸಭಾದಲ್ಲಿ ಕೇವಲ ಸಾವಿರದ ಸಂಖ್ಯೆಯಲ್ಲಿ ಸದಸ್ಯರಿದ್ದರು, ತಮ್ಮ ಪೂಜ್ಯ ತಂದೆ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ ಅವರು ಸದಸ್ಯರ ಸಂಖ್ಯೆಯನ್ನು ಲಕ್ಷ ದಾಟಿಸಿದರು ಎಂದರು.

ಈಗ ಸದಸ್ಯತ್ವವನ್ನು 10 ಲಕ್ಷ ಮಾಡಲು ನಿರ್ಣಯಿಸಲಾಗಿದ್ದು, ಇಂದಿನ ಯುಗಮಾನದ ಅಗತ್ಯಕ್ಕೆ ಅನುಗುಣವಾಗಿ ಅಂತರ್ಜಾಲ ತಾಣ ಅಭಿವೃದ್ಧಿಪಡಿಸಲಾಗಿದೆ. ಸಮುದಾಯದ ಯುವಜನರು ಹೆಚ್ಚು ಹೆಚ್ಚಾಗಿ ಸದಸ್ಯರಾಗುವಂತೆ ಪೋತ್ಸಾಹಿಸಲು, ಆನ್ ಲೈನ್ ಮೂಲಕವೂ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ವಚನಗಳ ಸಂಗ್ರಹವನ್ನು ಯಜ್ಞದಂತೆ ಮಾಡಿದ ಫ.ಗು. ಹಳಕಟ್ಟಿಯವರು, ನಡೆದಾಡುವ ದೇವರು ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಂತಹ ಮಹಾಮಹಿಮರು ಅಧ್ಯಕ್ಷರಾಗಿ ಮುನ್ನಡೆಸಿದ ಮಹಾಸಭಾದ ಸದಸ್ಯತ್ವ ಸಂಖ್ಯೆಯನ್ನು 10 ಲಕ್ಷ ಮಾಡಲು ಮಹಾಸಭಾದ ಪ್ರತಿಯೊಬ್ಬ ಸದಸ್ಯರೂ, ಸಮಾಜದ ಮುಖಂಡರು ಸಂಕಲ್ಪ ಮಾಡಬೇಕು ಎಂದು ಈಶ್ವರ ಖಂಡ್ರೆ ಕರೆ ನೀಡಿದರು.

ಸಂಘಟನೆಯಲ್ಲಿ ಬಲವಿದೆ. ವಿಘಟನೆಯಲ್ಲಿ ದೌರ್ಬಲ್ಯವಿದೆ. ವೀರಶೈವ ಲಿಂಗಾಯತರನ್ನು ಬೇರೆ ಮಾಡಲು ಹಲವು ಶಕ್ತಿಗಳು ಪ್ರಯತ್ನಿಸುತ್ತಿದ್ದು, ನಾವು ಎಚ್ಚರದಿಂದ ಇರಬೇಕು. ವೀರಶೈವ ಲಿಂಗಾಯತರು ಎಂದೆಂದೂ ಒಂದೇ ಎಂದು ಸಾರಬೇಕು. ವಿಭಜಿಸುವ ಶಕ್ತಿಗಳನ್ನು ಮಣಿಸಬೇಕು ಎಂದರು.

ಶಿವಾನಂದ ಕೌಜಲಗಿ ಅವರಿಗೆ ಶ್ರದ್ಧಾಂಜಲಿ:

ಇದೇ ಸಂದರ್ಭದಲ್ಲಿ ಲಿಂಗೈಕ್ಯರಾದ ಮಾಜಿ ಸಚಿವ, ಮಾಜಿ ಸಂಸದ ಶಿವಾನಂದ ಕೌಜಲಗಿ ಅವರಿಗೆ ಮಹಾಸಭಾ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಕುರಿತು ಈಶ್ವರ ಖಂಡ್ರೆ ಮಾತನಾಡಿ, ಶಾಸಕರಾಗಿ, ಸಂಸದರಾಗಿ, ಲೋಕೋಪಯೋಗಿ ಇಲಾಖೆಯ ಸಚಿವರಾಗಿ, ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕೌಜಲಗಿ ಅವರು ನೀಡಿರುವ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಗಣೇಶ್ ಹುಕ್ಕೇರಿ, ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಯುವ ಘಟಕದ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon