ಬೆಂಗಳೂರು: ಕಳೆದ ಎರಡು ದಶಕಗಳಲ್ಲಿ ಭಾರತ ಯುವಜನರಿಗೆ ಉನ್ನತ ಶಿಕ್ಷಣದ ಪ್ರವೇಶವನ್ನು ಗಣನೀಯ ಹೆಚ್ಚಿಸಿದ್ದು ಮೆಚ್ಚುವಂಥದ್ದಾಗಿದರೂ, ನಿರುದ್ಯೋಗದ ವಿಚಾರದಲ್ಲಿ 20 ರಿಂದ 29 ವರ್ಷ ವಯಸ್ಸಿನ ಪದವೀಧರರ ಪಾಲು ದ್ವಿಗುಣಗೊಂಡಿದೆ ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ ಹೇಳಲಾಗಿದೆ.
2023 ರಲ್ಲಿ ನಿರುದ್ಯೋಗಿ ಯುವಕರಲ್ಲಿ ಸುಮಾರು 67% (ಸುಮಾರು 1.1 ಕೋಟಿ) ಪದವೀಧರರು ಎಂದು ದತ್ತಾಂಶದ ಮೂಲಕ ತಿಳಿಸಲಾಗಿದೆ, ಇದು 2004 ರಲ್ಲಿ 32% (30 ಲಕ್ಷ) ರಷ್ಟು ಇದದ್ದು ಗಮನಾರ್ಹವಾಗಿದೆ. ಅದೇ ಸಮಯದಲ್ಲಿ ಪದವೀಧರರ ಪಾಲು 2004 ರಲ್ಲಿ 10% (1.9 ಕೋಟಿ) ಇದದ್ದು, 2023 ರಲ್ಲಿ 28% (6.3 ಕೋಟಿ) ಗೆ ಏರಿದೆ. 2004 ಮತ್ತು 2023 ರ ನಡುವೆ, ಪ್ರತಿ ವರ್ಷ ಸರಿಸುಮಾರು 50 ಲಕ್ಷ ಪದವೀಧರರು ಓದು ಪೂರೈಸುತ್ತಿದ್ದಾರೆ, ಆದರೆ ಉದ್ಯೋಗದಲ್ಲಿರುವ ಪದವೀಧರರ ಸಂಖ್ಯೆ ವಾರ್ಷಿಕವಾಗಿ ಸುಮಾರು 28 ಲಕ್ಷದಷ್ಟು ಮಾತ್ರ ಏರಿಕೆಯಾಗಿದೆ, ಅದರಲ್ಲಿ ಕೇವಲ 17 ಲಕ್ಷ ಜನರು ಮಾತ್ರ ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯುವ ಪದವೀಧರರ ಅನುಭವದ ಕೊರತೆ ಅಥವಾ ಕೌಶಲ್ಯದಲ್ಲಿನ ಹೊಂದಾಣಿಕೆ ಸೇರಿದಂತೆ ಹಲವಾರು ಕಾರಣಗಳಿವೆ. ಪದವೀಧರರಲ್ಲದವರಿಗಿಂತ ಯುವ ಪದವೀಧರರು ಹೆಚ್ಚಿನ ಮಾಸಿಕ ಗಳಿಕೆಯನ್ನು ಹೊಂದಿದ್ದಾರೆ. ಯುವಕರಲ್ಲಿ ಪದವಿ ಮತ್ತು ಪದವಿ ಪಡೆಯದವರ ಗಳಿಕೆಯ ನಡುವಿನ ಅಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2017 ದಿಂದ ಶಿಕ್ಷಣದಲ್ಲಿ ಯುವಕರ ಪಾಲು 38% ನಿಂದ 2024 ರಲ್ಲಿ 34% ಕ್ಕೆ ಇಳಿದಿದೆ. ಇನ್ನು ಇಂಜಿನಿಯರಿಂಗ್ ಮತ್ತು ವೈದ್ಯಕೀಯದಂತಹ ವೃತ್ತಿಪರ ಕ್ಷೇತ್ರಗಳಲ್ಲಿ ಪದವಿಗಳನ್ನು ಪಡೆಯುವ ವೆಚ್ಚವು ಬಡ ಕುಟುಂಬಗಳ ವಾರ್ಷಿಕ ತಲಾ ವೆಚ್ಚವನ್ನು ಮೀರುತ್ತದೆ. ಈ ಅಂತರವು 2007 ಮತ್ತು 2017 ರ ನಡುವೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಯುವಕರ ಭಾಗವಹಿಸುವಿಕೆ ಬದಲಾಗಿದೆ. ಒಟ್ಟಿನಲ್ಲಿ ನಾಲ್ಕು ದಶಕಗಳ ಹಿಂದಿನ ಅಧಿಕೃತ ಡೇಟಾಬೇಸ್ಗಳನ್ನು ಆಧರಿಸಿದೆ ವರದಿಯನ್ನು ತಯಾರಿಸಲಾಗಿದೆ.















