ರಂಗೋತ್ಸವ ಸಂವಿಧಾನ ಶಿಲ್ಪಿಗೆ, ಹಸಿರು ಕ್ರಾಂತಿಯ ಹರಿಕಾರರಿಗೆ ನೀಡಿದ ಅಪೂರ್ವ ಗೌರವ: ಡಾ. ಸಿ. ಸೋಮಶೇಖರ್

WhatsApp
Telegram
Facebook
Twitter
LinkedIn

ಬೆಂಗಳೂರು: ಕಳೆದ ನಾಲ್ಕೂವರೆ ದಶಕಗಳಿಂದ ಡಿ.ಕೆ.ಎಂ ಕಲಾವಿದರು ಸಂಸ್ಥೆಯಿಂದ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಸ್ಮಾರಕ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾಮೇಳವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇದು ಸಂವಿಧಾನ ಶಿಲ್ಪಿ ಹಾಗೂ ಹಸಿರು ಕ್ರಾಂತಿಯ ಹರಿಕಾರರಿಬ್ಬರಿಗೂ ನೀಡಿದ ಅಪೂರ್ವ ಗೌರವಾಗಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಸಿ ಸೋಮಶೇಖರ್ ಅಭಿಪ್ರಾಯಪಟ್ಟರು.

ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಿರತರ 45 ನೇ ವರ್ಷದ ರಂಗೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ಪ್ರದರ್ಶನ ಕಂಡ ಸಂಗ್ಯಾ ಬಾಳ್ಯಾ ಮತ್ತು ಕಾಕನ ಕೋಟೆ ನಾಟಕಗಳು ಇಬ್ಬರು ಮಹಾನ್ ಚೇತನಗಳಿಗೆ ಅರ್ಪಿಸಲಾಗಿದ್ದು, ಎರಡೂ ನಾಟಕಗಳಿಗೆ ಮತ್ತು ಅದರಲ್ಲಿ ಭಾಗವಸಿದ ಕಲಾವಿದರಿಗೆ ಹೆಮ್ಮೆಯ ವಿಚಾರವಾಗಿದೆ ಎಂದರು.

ಇನ್ನು ಸಮಾರೋಪದ ದಿನ ವಿದೂಷಿ ಶ್ರೀದೇವಿ, ಕುಮಾರಿ ಅದಿತಿ ಹಾಗೂ ಅನಿಷಿ ಮತ್ತವರ ತಂಡಗಳ ಭರತನಾಟ್ಯ ಪ್ರದರ್ಶನ ಇಡೀ ರಂಗೋತ್ಸವಕ್ಕೆ ಮೆರುಗನ್ನು ನೀಡಿದೆ. ಉತ್ಸವದ ಅಂಗವಾಗಿ ನೀಡಲಾದ ರಂಗಗೌರವ ಪ್ರಶಸ್ತಿ ಡಾ. ಬಿಆರ್ ಅಂಬೇಡ್ಕರ್ ಪ್ರಶಸ್ತಿ ಮತ್ತು ಸಿದ್ದಾರ್ಥ ಪ್ರಶಸ್ತಿ ಗಳಿಗೆ ಭಾಜನರಾದ ಸಕಲ ಪುರಸ್ಕೃತರೂ ಸಂಪೂರ್ವಾಗಿ ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿಕೆಎಂ ಕಲಾವಿದರು ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿಎಂ ತಿಮ್ಮಯ್ಯ, ಎಷ್ಟೇ ಕಷ್ಟಗಳು ಬಂದರೂ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಪ್ರತಿ ವರ್ಷವೂ ರಂಗೋತ್ಸವವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಹೊರರಾಜ್ಯದ ಕನ್ನಡಿಗರಿಂದಲೂ ಶ್ಲಾಘನೆಯನ್ನು ಸ್ವೀಕರಿಸಿದ್ದೇವೆ. ಇದಕ್ಕೆ ನನ್ನ ಸ್ನೇಹಿತರ ಮತ್ತು ಕಲಾವಿದರ ಸಹಕಾರ ಸಾಕಷ್ಟಿದೆ ಎಂದು ಹೇಳಿದರು.

ಕಲಾ ಸೇವೆಯನ್ನು ಕೊನೆಯ ಉಸಿರಿನವರೆಗೂ ಮುಂದುವರಿಸುವ ಇಚ್ಛೆ ನನ್ನದು. ಕಲೆಗಳ ಕುರಿತು ಸಾಕಷ್ಟು ಸಂಶೋಧನೆ ಮತ್ತು ಪ್ರದರ್ಶನಗಳನ್ನು ನಾನು ನಡೆಸಿದ್ದು, ಇದಕ್ಕಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬಸವ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಹೊರರಾಜ್ಯದ ಕನ್ನಡಿಗರು ಸಹ ನನ್ನನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಕಲಾವಿದರಾದ ಸಂಪತ್ ಕುಮಾರ್ ಮಾತನಾಡಿ, ವಿ.ಕೆ.ಎಂ ಕಲಾವಿದರು ತಂಡದಿಂದ ಕರ್ನಾಟಕ ರಾಜ್ಯದಲ್ಲಿ, ಸಾಕಷ್ಟು ಹೊರರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ಸಹ ಕಲಾ ಪ್ರದರ್ಶನಗಳನ್ನು ನೀಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜಾನಪದ ನೃತ್ಯರೂಪಗಳ ಪ್ರದರ್ಶನ ಕಡಿಮೆಯಾಗಿದೆ. ಜನರ ಆಸಕ್ತಿಯೂ ಸದಾ ಮೊಬೈಲ್ ಬಳಸುವದರ ಕಡೆಗೆ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಸಿದರು.

ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಗ್ರಾಮಾಂತರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಗಿನ್ನಿಸ್ ದಾಖಲೆ ಮಾಡಿರುವ ರಕ್ತದಾನಿ ಮಧುರ ಅಶೋಕ್ ಕುಮಾರ್ ಉಪಸ್ಥಿತರಿದ್ದರು. ಈ ವೇಳೆ ಮೂರು ಭಾಗಗಳ ಪ್ರಶಸ್ತಿಗಳನ್ನು ಪ್ರಧಾನ ಮಾಡುವುದರ ಜೊತೆಗೆ ವಿಶೇಷವಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಶಿವರಾಮ ಕಾಸರಗೋಡು ಅವರಿಗೆ ಗಡಿನಾಡು ಸಂಘಟನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon