ಡಿಜಿಟಲ್ ಅರೆಸ್ಟ್ ಸಂಬಂಧ ವಾಟ್ಸಾಪ್‌ ಸಂಸ್ಥೆಗೆ ಸೂಚನೆಗಳನ್ನು ನೀಡಿದ ಗೃಹ ಇಲಾಖೆ

WhatsApp
Telegram
Facebook
Twitter
LinkedIn

ನವದೆಹಲಿ: ಕೇಂದ್ರ ಗೃಹ ಇಲಾಖೆ ಡಿಜಿಟಲ್ ಅರೆಸ್ಟ್ ವಂಚನೆ ತಡೆಯಲು ವಾಟ್ಸಾಪ್‌ ಕಂಪನಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದ್ದು, ವಂಚಕರ ಮೊಬೈಲ್ ಡಿವೈಸ್‌ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸಬೇಕು, ಅಕೌಂಟ್ ಗಳಿಗೆ ಸಿಮ್‌ಗೆ ಲಿಂಕ್ ಮಾಡಬೇಕು ಮತ್ತು ಫೇಕ್ ಪ್ರೊಫೈಲ್‌ಗಳನ್ನು ಪತ್ತೆಹಚ್ಚಲು ಎಐ ಬಳಸಬೇಕು ಎನ್ನುವುದಾಗಿದೆ.

ವಂಚನೆಗೆ ಬಳಕೆಯಾಗುವ ಮೊಬೈಲ್ ಡಿವೈಸ್‌ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸಿ. ವಂಚನೆ ಎಸಗುವ ವ್ಯಕ್ತಿ ಅಥವಾ ಜಾಲವನ್ನು ಗುರುತಿಸಿದ ತಕ್ಷಣ ಅದಕ್ಕೆ ಬಳಸಿದ ಮೊಬೈಲ್‌ನ ಡಿವೈಸ್‌ ಐಡಿಯನ್ನು ಬ್ಲಾಕ್ ಮಾಡಿ. ಇದರಿಂದ ವಂಚಕರು ಅದೇ ಫೋನ್ ಬಳಸಿ ಮತ್ತೊಂದು ಅಕೌಂಟ್ ತೆರೆಯಲು ಸಾಧ್ಯವಾಗುವದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಡಿಲೀಟ್ ಆದ ಅಕೌಂಟ್‌ಗಳ ಮಾಹಿತಿಯನ್ನು ಕನಿಷ್ಠ 180 ದಿನಗಳ ಕಾಲ ಉಳಿಸಿಕೊಳ್ಳಿ. ವಾಟ್ಸಾಪ್ ಅಕೌಂಟ್‌ಗಳನ್ನು ಸಕ್ರಿಯ ಮೊಬೈಲ್ ಸಿಮ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಿ. ಅನಾಮಧೇಯವಾಗಿ ವಾಟ್ಸಾಪ್ ಬಳಸುವುದನ್ನು ತಡೆಯಲು ಈ ಕ್ರಮಗಳು ಅಗತ್ಯವಾಗಿದೆ ಎಂದಿದೆ.

ಪೊಲೀಸ್‌ ಅಥವಾ ಸಿಬಿಐ ಲೋಗೋಗಳನ್ನು ಪ್ರೊಫೈಲ್ ಪಿಕ್ಚರ್ ಬಳಸಿ ಜನರನ್ನು ಹೆದರಿಸುವ ವಂಚಕರನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಬಳಸಿ. ಅಂತಹ ಫೇಕ್ ಪ್ರೊಫೈಲ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಿ. ಮ್ಯಾಲಿಶಿಯಸ್ ಎಪಿಕೆ ಫೈಲ್‌ಗಳ ವರ್ಗಾವಣೆಯನ್ನು ಪತ್ತೆಹಚ್ಚಿ ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಬಲಪಡಿಸಿ ಎಂದು ಗೃಹ ಇಲಾಖೆ ಕಟ್ಟುನಿಟ್ಟಾದ ಸೂಚನೆಗಳನ್ನು ರವಾನಿಸಿದೆ.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon