ಬಿಎಂಟಿಸಿ ನೌಕರರ ಪತ್ತಿನ ಸಹಕಾರ ಸಂಘದಿಂದ ಸರ್ವಸದಸ್ಯರ ಸಭೆ, ಪ್ರತಿಭಾ ಪುರಸ್ಕಾರ

WhatsApp
Telegram
Facebook
Twitter
LinkedIn

ಬೆಂಗಳೂರು: ಬಿಎಂಟಿಸಿ ನೌಕರರ ಪತ್ತಿನ ಸಹಕಾರ ಸಂಘ 26ನೇ ವರ್ಷ ಪೂರೈಸಿ, 27ನೇ ವರ್ಷಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಗರದ ಮೈಸೂರು ಬ್ಯಾಂಕ್ ವೃತ್ತದ ಶಿಕ್ಷಕರ ಸದನದಲ್ಲಿ ಯಶಸ್ವಿಯಾಗಿ ಜರುಗಿತು.

ಈ ವೇಳೆ ಮಾದ್ಯಮಗಳ ಜೊತೆ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್. ತಿಪ್ಪೇಸ್ವಾಮಿ 1999ರಲ್ಲಿ ಪ್ರಾರಂಭಗೊಂಡ ಈ ಸಂಘವು ಯಾವುದೇ ಸರ್ಕಾರದ ಅನುದಾನವಿಲ್ಲದೆ ಸಂಪೂರ್ಣವಾಗಿ ನೌಕರರ ಸ್ವಂತ ವಂತಿಗೆ ಹಾಗೂ ಶೇರ್ ಬಂಡವಾಳದ ಆಧಾರದಲ್ಲೇ ಬೆಳೆದು ನಿಂತಿದ್ದು, ಇಂದು 100 ಕೋಟಿ ರೂಪಾಯಿ ವಹಿವಾಟಿನತ್ತ ದಾಪುಗಾಲು ಇಡುತ್ತಿದೆ ಎಂದು ಹೇಳಿದರು.

ಪ್ರಸ್ತುತ ಸಂಘದಲ್ಲಿ 12,500ಕ್ಕೂ ಹೆಚ್ಚು ನೌಕರರು ಸಕ್ರಿಯ ಸದಸ್ಯರಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಳೆದ 17 ವರ್ಷಗಳಿಂದ ನೌಕರರ ಪ್ರತಿಭಾವಂತ ಮಕ್ಕಳನ್ನು ಸಂಘ ಪ್ರೋತ್ಸಾಹಿಸುತ್ತಾ ಬಂದಿದೆ. ಈ ಬಾರಿಯೂ ಶೇಕಡಾ 60ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಕೆ.ಪಿ.ಎಸ್.ಸಿ ಪ್ರಾಥಮಿಕ ಪರೀಕ್ಷೆ ತೇರ್ಗಡೆಯಾದ 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಮಾರು 50 ಲಕ್ಷ ರೂಪಾಯಿ ಮೊತ್ತದ ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನವನ್ನು ವಿತರಿಸಲಾಗುತ್ತಿದೆ. ಸದಸ್ಯರಿಂದ ತಿಂಗಳಿಗೆ ಸಂಗ್ರಹಿಸುವ ಸಣ್ಣ ಮೊತ್ತದ ವಂತಿಗೆಯ ಹಣದಲ್ಲೇ ಈ ಬೃಹತ್ ಶೈಕ್ಷಣಿಕ ಪ್ರೋತ್ಸಾಹಕ ಕಾರ್ಯಕ್ರಮವನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಉಪಾಧ್ಯಕ್ಷ ದೇವರಾಜ್ ವಿ ಮಾತನಾಡಿ, ರಾಜ್ಯದಲ್ಲೇ ಅತ್ಯಂತ ಕಡಿಮೆ ಅಂದರೆ ಶೇಕಡಾ 7ರ ಬಡ್ಡಿದರದಲ್ಲಿ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನೌಕರರ ಮನೆ ಹಾಗೂ ಸೈಟ್ ಕನಸನ್ನು ನನಸು ಮಾಡಲು ಗರಿಷ್ಠ 25 ಲಕ್ಷ ರೂಪಾಯಿಗಳವರೆಗೆ ಮೈಕ್ರೋ ಸಾಲ ನೀಡಲು ಸರ್ವಸದಸ್ಯರ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗುತ್ತಿದೆ. ಇದರ ಜೊತೆಗೆ ಸದಸ್ಯರ ಮಕ್ಕಳಿಗೆ ಐಎಎಸ್ ಹಾಗೂ ಕೆಎಎಸ್ ತರಬೇತಿಗೆ ಸಹಕಾರ, ನೌಕರರು ಮತ್ತು ಅವರ ಕುಟುಂಬಕ್ಕೆ ಸಮಗ್ರ ಆರೋಗ್ಯ ವಿಮೆ ಯೋಜನೆ, ಹಾಗೂ ಬಂಗಾರದ ಸಾಲದಂತಹ ಹೊಸ ಸೌಲಭ್ಯಗಳನ್ನು ತರಲು ಉದ್ದೇಶಿಸಲಾಗಿದೆ ಎಂದರು.

ಗೌರವಾಧ್ಯಕ್ಷ ಕೃಷ್ಣಕುಮಾರ್ ಸದಸ್ಯರ ಉಳಿತಾಯದ ಹಣದ ಭದ್ರತೆಗಾಗಿ ಕಾನೂನು ನಿಯಮಗಳು ಹಾಗೂ ಬೈಲಾ ಪ್ರಕಾರ ಸೂಕ್ತ ಜಾಮೀನುದಾರರ ಭದ್ರತೆ ಹಾಗೂ ವೇತನ ಆದಾಯವನ್ನು ಸಂಘದ ವತಿಯಿಂದ ಪರಿಶೀಲಿಸಿ ಕಟ್ಟುನಿಟ್ಟಾಗಿ ಸಾಲ ಮಂಜೂರು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon