ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಏಪ್ರಿಿಲ್ 15ಕ್ಕೆೆ ಮುಂದೂಡಿಕೆಯಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಾಯಾಲಯ ಗುರುವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಆದೇಶ ಪ್ರಕಟವಾಗುವ ಹಿನ್ನೆೆಲೆಯಲ್ಲಿ ಕಾಂಗ್ರೆೆಸ್ ಶಾಸಕ ವಿನಯ್ ಕುಲಕರ್ಣಿಸೇರಿದಂತೆ ಎಲ್ಲಾ 21 ಆರೋಪಿಗಳು ನ್ಯಾಯಾಲಯಕ್ಕೆೆ ಹಾಜರಾಗಿದ್ದರು.
ವಾದ-ಪ್ರತಿವಾದದ ಸಮಯದಲ್ಲಿ ಎರಡೂ ಕಡೆಯ ವಕೀಲರು ಸಾವಿರಾರು ಪುಟಗಳ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ್ದು, ಪ್ರಕರಣದಲ್ಲಿ ಅನೇಕ ದಾಖಲೆಗಳು ಮತ್ತು ಸಾಕ್ಷ್ಯಗಳಿವೆ. ಇವೆಲ್ಲವನ್ನೂ ಪರಿಶೀಲಿಸಿ, ತೀರ್ಪಿನಲ್ಲಿ ಯಾವುದೇ ಗೊಂದಲಗಳಾಗದಂತೆ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ಹೀಗಾಗಿ ಏಪ್ರಿಲ್ 15ರಂದು ವಿನಯ್ ಕುಲಕರ್ಣಿ ದೋಷಿ ಅಥವಾ ನಿರ್ದೋಷಿ ಎಂಬುದು ಸ್ಪಷ್ಟವಾಗಲಿದೆ















