ಬೆಳಗಾವಿ ಜಿಲ್ಲಾ ಕಲೇಸಂ ನಿಂದ ಚರಿತ್ರೆಯೊಂದಿಗೆ ಮುಖಾಮುಖಿ ಕಾರ್ಯಕ್ರಮ

WhatsApp
Telegram
Facebook
Twitter
LinkedIn

ಬೆಳಗಾವಿ: ಚರಿತ್ರೆಯೊಂದಿಗೆ ಮುಖಾಮುಖಿ ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ಜಿಲ್ಲಾ ಶಾಖೆಯ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಇದೇ 26 ನವೆಂಬರ್ ರಂದು ಸಂಜೆ ಗಂಟೆಗೆ ಬೆಳಗಾವಿಯ ಕೋಟೆಯಲ್ಲಿರುವ ಕಮಲ ಬಸದಿ ಸಂದರ್ಶನ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಕುರಿತು ಸಂಘದ ಅಧ್ಯಕ್ಷೆ ಸಿದ್ದಗಂಗಮ್ಮ ಮಾತನಾಡಿ, ವಿಶ್ವ ಪಾರಂಪರಿಕ ಸಪ್ತಾಹದ ಅಂಗವಾಗಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ಬೆಳಗಾವಿಯಿಂದ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಅರಸರು, ರಾಜರು ರಾಜ್ಯಭಾರ ಮಾಡುವುದರ ಜೊತೆಗೆ ಭಾರತೀಯ ಶಿಲ್ಪಕಲೆ, ಸಂಗೀತ, ನೃತ್ಯಗಳನ್ನು   ಗೌರವಿಸುತ್ತಿದ್ದರು ಎಂದಿದ್ದಾರೆ.

ಆಧ್ಯಾತ್ಮ, ದೈವಿಕ ನಂಬಿಕೆ, ಮತ್ತು ಆರಾಧನೆ  ಅವರ ಸಹಜ ಗುಣವಾಗಿತ್ತು ಅದರ ದ್ಯೋತಕವಾಗಿ ಎಷ್ಟೋ ಶತಮಾನಗಳ ಹಿಂದೆ  ದೇವಸ್ಥಾನಗಳ ರೂಪದಲ್ಲಿ ತಮ್ಮ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. 12 ನೇ ಶತಮಾನದ ಹೆಜ್ಜೆ ಗುರುತುಗಳು ನಮ್ಮ ಬೆಳಗಾವಿಯಲ್ಲೂ ಇವೆ ಎಂದು ಹೇಳಿದ್ದಾರೆ.

ಇನ್ನು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಇತಿಹಾಸ ತಜ್ಞೆ, ಸಂಶೋಧಕಿ ಡಾ. ಮೀನಾ ಮೋಹಿತೆ ಅವರು ಆಗಮಿಸಿದ್ದರು. ಕಮಲ ಬಸದಿಯ ಕಲೆ ವಾಸ್ತು ಶೈಲಿಯ ಬಗೆಗೆ ಮಾಹಿತಿ ನೀಡಿದರು. ಬಸದಿಯ ನಿರ್ಮಾಣ ಕಾಲ ಅದರ ರಕ್ಷಣೆ ಮತ್ತು ನಿರಂತರವಾಗಿ ಪೂಜೆಗೊಳ್ಳುವ ತೀರ್ಥಂಕರ ಬಗ್ಗೆ ತಿಳಿಸುತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಬಸದಿ ವೀಕ್ಷಣೆ ಮಾಡಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತ ವಾಸ್ತು ಶಿಲ್ಪದ ಕುರಿತು ಕುತೂಹಲಕಾರಿಯಾದ ಅಂಶಗಳು ಹೇಳುತ್ತಾ ಕೇಳುಗರಲ್ಲಿ ಇತಿಹಾಸದ ಕುರಿತು ಆಸಕ್ತಿ ಅಭಿಮಾನ ಉಂಟುಮಾಡಿದರು.

ಕಾರ್ಯದರ್ಶಿ ನಿರ್ಮಲಾ ಬಟ್ಟಲ ಸ್ವಾಗತಿಸಿದರು. ನೀತಾ ರಾವ್ ವಂದಿಸಿದರು. ಅನ್ನಪೂರ್ಣ ಅಗಡಿ, ನೀಲಗಂಗಾ ಚರಂತಿಮಠ ಜ್ಯೋತಿ ಬಾದಾಮಿ ಸುಧಾ ಪಾಟೀಲ್ ಶಾಲಿನಿ ಚಿಲಿವಾಲರ ಸುನಿತಾ ನಂದೇನ್ನವರ ಶಶಿಧರ ಹೊಸಕೋಟೆ, ಪ್ರೊ.ಮುನವಳ್ಳಿ, ಶರಣಯ್ಯ ಮಠಪತಿ, ಬಸವರಾಜ ಕುಂಬಾರ ಮಂಜುನಾಥ ಕಲಾಲ ಮತ್ತು ಕಲೇಸಂ ಜಿಲ್ಲಾ ಶಾಖೆಯ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon