ಡೆನ್ಸೊ ಐರಿಸ್ ತಂಡಕ್ಕೆ ಫಿಬಾ ಏಷ್ಯಾ ಡಬ್ಲ್ಯುಬಿಎಲ್ ಕಿರೀಟ

WhatsApp
Telegram
Facebook
Twitter
LinkedIn

ಬೆಂಗಳೂರು: ಸಂಘಟಿತ ನಿರ್ವಹಣೆ ತೋರಿದ ಜಪಾನ್ ನ ಡೆನ್ಸೊ ಐರಿಸ್ ತಂಡ ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆನ್ಸೊ ಐರಿಸ್ ತಂಡ 81-63 ಅಂಕಗಳಿಂದ ಮಾಜಿ ಚಾಂಪಿಯನ್ ಚೀನಾದ ಸಿಚುವಾನ್‌ ಯುಯಾಂದ ಮೀಲೆ ತಂಡವನ್ನು ಸೋಲಿಸಿತು. ಎರಡನೇ ಪ್ರಶಸ್ತಿ ಕನಸಿನಲ್ಲಿದ್ದ ಚೀನಾ ತಂಡ ನಿರಾಸೆ ಕಂಡಿತು. ಆರಂಭಿಕ ನಿಮಿಷಗಳಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸಿದ ಜಪಾನ್ ತಂಡದ ಆಟಗಾರ್ತಿಯರು ಸಂಘಟಿತ ನಿರ್ವಹಣೆ ಮೂಲಕ ಗಮನಸೆಳೆದರು‌. ಮೊದಲ ಅವಧಿಯಾಟದಲ್ಲಿ ಡೆನ್ಸೊ ತಂಡ 24-20 ಅಂಕಗಳಿಂದ ಮುನ್ನಡೆ ಸಾಧಿಸಿತು. ಬಳಿಕ ಚುರುಕಿನ ನಿರ್ವಹಣೆ ತೋರುವ ಮೂಲಕ ಮೊದಲಾರ್ಧದಲ್ಲಿ ಡೆನ್ಸೊ ತಂಡ 43-36 ಅಂಕಗಳಿಂದ ಮುನ್ನಡೆ ಸಾಧಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಮೂರನೇ ಹಾಗೂ ನಾಲ್ಕನೇ ಕ್ವಾರ್ಟರ್ ಹೋರಾಟದಲ್ಲಿ ಸತತವಾಗಿ ಅಂಕಗಳನ್ನು ಕಲೆಹಾಕುವ ಮೂಲಕ ಚೀನಾ ತಂಡಕ್ಕೆ ಆಘಾತ ನೀಡಿತು. ಜೊತೆಗೆ ಚೀನಾದ ಬಲಿಷ್ಠ ಆಟಕ್ಕೂ ಕಡಿವಾಣ ಹೇರಿತು. ಚೀನಾ ತಂಡದ ಸ್ಟಾರ್ ಆಟಗಾರ್ತಿ ಕೆನ್ನೆಡಿ ಕಾರ್ಟರ್ (11 ಅಂಕ) ಮೊದಲ ಅವಧಿ ಆಟದ ಬಳಿಕ ಕಣಕ್ಕಿಳಿಯಲಿಲ್ಲ. ಇದರ ಲಾಭ ಪಡೆದ ಜಪಾನ್ ಆಟಗಾರ್ತಿಯರು ಚೀನಾ ತಂಡಕ್ಕೆ ಕಡಿವಾಣ ಹೇರಲು ಯಶಸ್ವಿಯಾದರು. ವಿಜಯಿ ತಂಡ ಡೆನ್ಸೊ ಐರಿಸ್ ಪರ ಮಾಕಿ ತಕಡ 23 ಅಂಕಗಳ ಕಲೆಹಾಕಿದರೆ, ಹರುಣ ಕಸಗಿ 15 ಅಂಕಗಳನ್ನು ಕಲೆಹಾಕಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕ್ಯಾಥೆ ಲೈಫ್ ಟೈಗರ್ಸ್ ತಂಡಕ್ಕೆ ಮೂರನೇ ಸ್ಥಾನ:

ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ತಂಡ 73-68 ಅಂಕಗಳಿಂದ ಕೊರಿಯಾದ ಕೆ.ಬಿ.ಸ್ಟಾರ್ಸ್ ತಂಡವನ್ನು ಸೋಲಿಸಿತು. ಅಂತಿಮ ಕ್ಷಣದವರೆಗೂ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾದ ಈ ಪಂದ್ಯದಲ್ಲಿ ಚೈನೀಸ್ ತೈಪೆ ಆಟಗಾರ್ತಿಯರು ಮೇಲುಗೈ ಸಾಧಿಸಲು ಯಶಸ್ವಿಯಾದರು.

ಚಾಂಪಿಯನ್ ತಂಡಕ್ಕೆ ಟ್ರೋಫಿ ಪ್ರದಾನ:

ವಿಜೇತ ಡೆನ್ಸೊ ಐರಿಸ್ ತಂಡಕ್ಕೆ ಫಿಬಾ ಏಷ್ಯಾ ಅಧ್ಯಕ್ಷರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಕೆ.ಗೋವಿಂದರಾಜ್ ಟ್ರೋಫಿ ಪ್ರದಾನ ಮಾಡಿದರು‌. ರನ್ನರ್ ಅಪ್ ತಂಡಕ್ಕೆ ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ, ವಿಧಾನ ಪರಿಷತ್ ನ ಸಭಾಪತಿ ಸಲೀಂ ಅಹಮದ್, ತಮಿಳು ನಾಡಿನ ಕ್ರೀಡಾ ಸಚಿವ ಹಾಗೂ ಭಾರತೀಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಆಧವ್ ಅರ್ಜುನ್ ಪದಕ ಟ್ರೋಫಿ ವಿತರಿಸಿದರು. ನಟಿ ರಮ್ಯಾ, ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ ಅಧ್ಯಕ್ಷ ಹಾಗೂ ಡಿಜಿಪಿ ದಯಾನಂದ, ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು, ಫೈನಲ್ ಪಂದ್ಯಕ್ಕೆ ಸಾಕ್ಷಿಯಾದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon