ಕೆಪಿಟಿಸಿಎಲ್ ಸಬ್ ಡಿವಿಷನ್ ಸ್ಟೋರ್ ನಲ್ಲಿ ದಸರಾ ಹಬ್ಬ ಆಚರಣೆ

WhatsApp
Telegram
Facebook
Twitter
LinkedIn

ಬೆಂಗಳೂರು: ಗಾಂಧಿನಗರದ ಆನಂದ್ ರಾವ್ ವೃತ್ತದ ಕೆಪಿಟಿಸಿಎಲ್ ಡಬ್ಲೂ-4 ಸಬ್ ಡಿವಿಷನ್ ಸ್ಟೋರ್ ನಲ್ಲಿ ಸಂಭ್ರಮದಿಂದ ಆಯುಧ ಪೂಜೆ ಆಚರಣೆ ಮತ್ತು ವಿಜಯದಶಮಿಯನ್ನು ಆಚರಿಸಲಾಯಿತು.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನಾಸೌಧ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ಅವರು, ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಡಬ್ಲೂ-4 ಸಬ್ ಡಿವಿಷನ್ ಸ್ಟೋರ್ ನಲ್ಲಿ ಆಚರಿಸಲಾಗುತ್ತಿದೆ. ರಜೆಗಳು ಇರುವುದರಿಂದ ಮುಂಚಿತವಾಗಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಬೆಸ್ಕಾಂ ನ ಎಲ್ಲಾ ಕಚೇರಿ ಮತ್ತು ಸ್ಟೋರ್ ಗಳಲ್ಲಿ ಸರಳವಾಗಿ ಪೂಜೆ ಸಲ್ಲಿಸಿ ಎಲ್ಲರಿಗೂ ಪ್ರಸಾದ ವಿತರಿಸಲಾಗಿದೆ. ನಿಗಮದ ಮುಖ್ಯ ಕಚೇರಿ ಹಾಗೂ ಡಿವಿಷನ್ ಕಚೇರಿಗಳಲ್ಲಿ ಸಹ  ಆಚರಿಸಲಾಗಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಕಚೇರಿಗಳಲ್ಲಿ ರಜಾ ದಿನಗಳಲ್ಲಿ ಕೂಡ ಸಾಂಪ್ರದಾಯಿಕವಾಗಿ ಪೂಜೆ ನಡೆಯಲಿದೆ.

ಸಾಕಷ್ಟು ಅಪಾಯಕಾರಿ ಪರಿಸರದಲ್ಲಿ ಕೆಲಸ ಮಾಡುವ ಬೆಸ್ಕಾಂ ಸಿಬ್ಬಂದಿಗೆ ಈ ಆಯುಧ ಪೂಜೆ ಅತ್ಯಂತ ಮುಖ್ಯವಾಗಿದೆ. ಪ್ರತಿ ಸ್ಟೇಷನ್‌ನಿಂದ ಹಿಡಿದು ಜನಸಾಮಾನ್ಯರಿಗೆ ವಿದ್ಯುತ್ ತಲುಪಿಸುವ ಲೈನ್ ಕೆಲಸದವರೆಗೂ ಪ್ರತಿಯೊಬ್ಬ ಲೈನ್ಮನ್ ಹಾಗೂ ಪವರ್ಮನ್‌ಗಳು ಬಹಳ ವಿಶಿಷ್ಟವಾಗಿ ಮತ್ತು ನಂಬಿಕೆಯಿಂದ ಆಯುಧ ಪೂಜೆಯನ್ನು ಆಚರಿಸುತ್ತಾ ಬಂದಿದ್ದಾರೆ ಎಂದರು.

ಈ ಬಾರಿ ಕೆಲ ದಿನಗಳು ಹೆಚ್ಚಿನ ಮಳೆಯಾಗಿದ್ದರೂ ಸಹ ಯಾವುದೇ ರೀತಿಯ ದೊಡ್ಡ ಅನಾಹುತಗಳು ಸಂಭವಿಸದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ನಮ್ಮ ಇಲಾಖೆಯ ವತಿಯಿಂದ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಕಡೆಯಿಂದ ಸಿಬ್ಬಂದಿಯ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದ್ದು, ಪ್ರತಿಯೊಬ್ಬ ಲೈನ್ಮನ್ ಸುರಕ್ಷತೆಗೂ ಹಾಗೂ ಸೇಫ್ಟಿ ಮೆಟೀರಿಯಲ್ಸ್‌ಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅಧಿಕಾರಿಗಳು ಸಹ ನೌಕರರ ಸುರಕ್ಷತೆಯ ಬಗ್ಗೆ ಅಷ್ಟೇ ಜಾಗರೂಕತೆಯಿಂದ ಗಮನಹರಿಸುತ್ತಿದ್ದಾರೆ ಎಂದು ಮೋಹನ್ ಹೇಳಿದರು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon