ಕನ್ನಡ ಪ್ರೇಕ್ಷಕರ ಕಣ್ಮನಕ್ಕೆ ತಂಪೆರೆಯಲು ಸಜ್ಜಾದ ಪೀಟರ್ ಸಿನೆಮಾ

WhatsApp
Telegram
Facebook
Twitter
LinkedIn

ಬೆಂಗಳೂರು: ಪೀಟರ್ ಸಿನೆಮಾ ಈ ಬಿರುಬೇಸಿಗೆಯಲ್ಲಿ ಕನ್ನಡ ಪ್ರೇಕ್ಷಕರ ಕಣ್ಮನಕ್ಕೆ ತಂಪೆರೆಯಲು ಬರುತ್ತಿದ್ದು, ಇಂದೊಂದು ಮ್ಯೂಸಿಕಲ್ ಲವ್ ಮಿಸ್ಟರಿ ಆಗಿದೆ. ಈಗಾಗಲೇ ಮೂರು ವಿಶಿಷ್ಠ ಹಾಡುಗಳಿಂದ ಗಮನ ಸೆಳೆದಿರುವ ಪೀಟರ್ ಟೀಸರ್ ನಿಂದ ಕನ್ನಡ ಸಿನಿಪ್ರಿಯರಲ್ಲಿ ವಿಶೇಷವಾದ ಕುತೂಹಲವನ್ನು ಮೂಡಿಸಿದೆ. ಈ ಸಂಬಂಧ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹಾಡುಗಳ ಬಿಡುಗಡೆ ಹಾಗೂ ಪ್ರೀ ರಿಲೀಸ್ ಕಾರ್ಯಕ್ರಮ ಜರುಗಿದ್ದು, ಈ ವೇಳೆ ಇಡೀ ತಂಡ ಹಾಜರಾಗಿ ಸಂಭ್ರಮ ಹಂಚಿಕೊಂಡಿತು.

ಈ ಸಂದರ್ಭದಲ್ಲಿ ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, ಪೀಟರ್ ಸಿನಿಮಾದ ಪ್ರತಿ ಹಂತದಲ್ಲಿ, ಪ್ರತಿ ಕಂಟೆಂಟ್ ನಲ್ಲಿಯೂ ಹೊಸತನ ಕೊಟ್ಟಿದ್ದೇವೆ. ನೋಡುಗರು ಥಿಯೇಟರ್ ನಲ್ಲಿ ಕೂತು ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ಅನುಭವಿಸಲಿದ್ದಾರೆ. ಅದಕ್ಕೆ ತಕ್ಕಂತೆ ಕಥೆ ಹೆಣೆಯಲಾಗಿದ್ದು, ಶಬ್ಧ ವಿನ್ಯಾಸ, ಪರಿಸರ ಇದೆಲ್ಲದರಿಂದ ಪ್ರೇಕ್ಷಕ ಹೊಸ ಅನುಭವೆ ಪಡೆಯುವುದು ಗ್ಯಾರೆಂಟಿಯಾಗಿದೆ. ನಾಲ್ಕು ಜಾನರ್ ನಲ್ಲಿ ಮ್ಯೂಸಿಕ್ ಮಾಡಿದ್ದೇವೆ. ಪೀಟರ್ ಸಿನಿಮಾದ ಪ್ರತಿ ಕಂಟೆಂಟ್, ಹಾಡು, ಟೀಸರ್ ಎಲ್ಲವೂ ಕೂಡ ಆಡಿಯನ್ಸ್ ಗೆ ಹತ್ತಿರವಾಗಲೂ ಇದೇ ಕಾರಣವಾಗಿದೆ ಎಂದರು.

ಈ ಚಿತ್ರದಲ್ಲಿ ಬಿನ್ನವಾದ ಕಂಟೆಂಟ್ ಪ್ರೆಸೆಂಟ್ ಮಾಡುತ್ತಾ ಬಂದಿದ್ದೇವೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದ್ರಾಬಾದ್ ನಲ್ಲಿಯೂ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ. ಏಪ್ರಿಲ್ 10ಕ್ಕೆ ರಾಜ್ಯದಲ್ಲಿ ಬಿಡುಗಡೆಯಾದರೇ, ಇನ್ನೂ ಎರಡು ವಾರದ ಬಳಿಕ ಆಯಾಯಾ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದೇವೆ. ಪೀಟರ್ ಒಂದುವರೆ ವರ್ಷದ ಜರ್ನಿಯಾಗಿದೆ ಎಂದು ಹೇಳಿದರು.

ನಾಯಕ ರಾಜೇಶ್ ಧ್ರುವ ಮಾತನಾಡಿ, ಪೀಟರ್ ನನ್ನ ಎರಡನೇ ಸಿನಿಮಾ ಆಗಿದೆ. ಎಮೋಷನಲ್ ಜರ್ನಿ ಜೊತೆಗೆ ಒಂದೊಳ್ಳೆ ಕಲಾವಿದರು ಹಾಗೂ ಒಳ್ಳೆ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು. ಸುಕೇಶ್ ಶೆಟ್ಟಿ ಅವರು ಮುಂದೆ ಕನ್ನಡ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಡೈರೆಕ್ಟರ್ ಆಗುತ್ತಾರೆ. ಮೂರು ವರ್ಷ ಈ ಚಿತ್ರಕ್ಕಾಗಿ ಕೆಲಸ ಮಾಡಿ ಅಚ್ಚುಕಟ್ಟಾಗಿ ಔಟ್ ಫುಟ್ ತಂದಿದ್ದಾರೆ. ರವಿ ಹಾಗೂ ರಾಕೇಶ್ ಇಬ್ಬರು ಫ್ಯಾಷನೇಟೆಡ್ ಪ್ರೊಡ್ಯೂಸರ್ ಆಗಿದ್ದಾರೆ. ಇವರಿಬ್ಬರೂ ಚಿತ್ರಕ್ಕೆ ಯಾವುದಕ್ಕೂ ಕಮ್ಮಿ ಮಾಡದೇ ಎಲ್ಲವನ್ನೂ ಸಿನಿಮಾಗೆ ನೀಡಿದ್ದಾರೆ. ಪೀಟರ್ ರಾಕ್ಷಸನೋ ಹೌದು, ರಕ್ಷಕನೂ ಹೌದು. ಅವನ ಜೀವನದಲ್ಲಿ ಚೆಂಡೆ ತುಂಬಾ ಮುಖ್ಯವಾಗಿರುತ್ತದೆ. ಅದರ ರಕ್ಷಣೆಗೆ ಹೇಗೆ ಮುಂದಾಗುತ್ತಾನೆ,  ಅವನ ವೈಯಕ್ತಿಕ ಜೀವನದ ರಕ್ಷಣೆಗೆ ರಾಕ್ಷಸ ಆಗುತ್ತಾನೆ. ಅದನ್ನು‌ ನೀವು ಥಿಯೇಟರ್ ನಲ್ಲಿ ನೋಡಿ ಆನಂದಿಸಬಹುದು ಎಂದರು.

ರೋಚಕ ಸಸ್ಪೆನ್ಸ್ ಇರುವ ಪ್ರೇಮಕಥೆ:

ಪೀಟರ್ ಚಿತ್ರದಲ್ಲಿ ರಾಜೇಶ್ ಧ್ರುವಾ, ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ಇನ್ನುಳಿದಂತೆ ರವೀಕ್ಷಾ ಶೆಟ್ಟಿ , ರಘು ಪಾಂಡೇಶ್ವರ್, ಪ್ರತಿಮಾ ನಾಯಕ್, ರಾಮನಾಡಗೌಡ, ವರುಣ್ ಪಟೇಲ್, ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ ತಾರಾಗಣದಲ್ಲಿದ್ದಾರೆ. ದೂರದರ್ಶನ ಸಿನಿಮಾ ನಿರ್ದೇಶಿಸಿದ್ದ ಸುಕೇಶ್ ಶೆಟ್ಟಿ ಪೀಟರ್ ಚಿತ್ರದ ಡೈರೆಕ್ಟರ್ ಆಗಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ಪ್ರಶಂಸೆ ಗಳಿಸಿದ್ದ ಸುಕೇಶ್, ಈ ಸಲ ಮತ್ತೊಂದು ಮಣ್ಣಿನ ಸೊಗಡಿನ ಕಥೆಯನ್ನ ಎಳೆಯನ್ನಾಗಿಸಿಕೊಂಡು, ಕೌತುಕತೆ ತುಂಬಿದ ರೋಚಕ ಸಸ್ಪೆನ್ಸ್ ಇರುವ ಪ್ರೇಮಕಥೆಯನ್ನ ಪ್ರಸ್ತುತ ಪಡಿಸುವ ಪ್ರಯತ್ನ ಮಾಡಿದಂತಿದೆ.

ಪ್ರೇಕ್ಷಕರ ನಾಡಿಮಿಡಿತವನ್ನು ಮಿಡಿಸಿವೆ ಹಾಡುಗಳು:

ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಸಿನಿಪ್ರಿಯರನ್ನು ಆಕರ್ಷಿಸುತ್ತಿದೆ. ರಿತ್ವಿಕ್ ಮುರಳಿಧರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಉದ್ಯಮದಲ್ಲಿ ಭರವಸೆಯ ಸಂಗೀತ  ನಿರ್ದೇಶಕರಲ್ಲೊಬ್ಬರಾಗಿ ಗುರುತಿಸಿಕೊಳ್ಳುತ್ತಿರುವ ರಿತ್ವಿಕ್, ಪೀಟರ್ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸುವ ಸೂಚನೆ ಕೊಟ್ಟಿದ್ದಾರೆ. ಪೀಟರ್ ಸಿನಿಮಾದಲ್ಲಿ ಈವರೆಗೂ ರಿಲೀಸ್ ಆಗಿರುವ ಮೂರು ಹಾಡುಗಳು ವಿಶಿಷ್ಠವಾಗಿ ಪ್ರೇಕ್ಷಕರ ನಾಡಿಮಿಡಿತವನ್ನು ಮಿಡಿಸಿವೆ. ಅದರಲ್ಲೂ ವಿಶೇಷವಾಗಿ ಸುಂದರಿ ಸುಂದರಿ ರೊಮ್ಯಾಂಟಿಕ್ ಹಾಡು ಟ್ರೆಂಡ್ ನಲ್ಲಿದೆ. ಸೈರಾಟ್ ಖ್ಯಾತಿಯ ಅಜಯ್ ಗೊಗಾವಲೆ ಹಾಡಿರೋ ಜೋಷ್ ಕಿ ಜವಾನಿ ಫ್ರೆಂಡ್ ಶಿಪ್ ಹಾಡು ಗಮನ ಸೆಳೆಯುತ್ತಿದೆ. ಇನ್ನು ತಾಯಿಯಾದೆಯಾ ಹಾಡು ಭಾವುಕರನಾಗಿಸುತ್ತಿದೆ.

ತಾಂತ್ರಿಕವಾಗಿ ಸತ್ವಯುತ ಪ್ರಯತ್ನ:

ಕರ್ನಾಟಕ ಕೇರಳ ಗಡಿ ಭಾಗದಲ್ಲಿ ನಡೆಯುವ ಈ ಕಥೆಯನ್ನ ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣದಲ್ಲಿ ಸೆರೆಹಿಡಿಯಲಾಗಿದ್ದು, ನವೀನ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಪೀಟರ್ ತಾಂತ್ರಿಕವಾಗಿ ತುಂಬಾ ಸತ್ವಯುತ ಪ್ರಯತ್ನವಾಗಿದೆ. ಈ ಸಿನಿಮಾವನ್ನು ಬಹುತೇಕ ಉದ್ಯಮದ ಯುವ ತಂತ್ರಜ್ಞರೇ ಕೂಡಿ ಮಾಡಿರುವುದು ವಿಶೇಷವಾಗಿದೆ. ವೃದ್ಧಿ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಿಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿರುವ ರವಿ ಹೀರೇಮಠ್ ಮತ್ತು ರಾಕೇಶ್ ಹೆಗ್ಗಡೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ನಿಂದ ವಿತರಣೆ:

ಪೀಟರ್ ಸಿನಿಮಾದ ಕಂಟೆಂಟ್ ನೋಡಿದ ಇಷ್ಟಪಟ್ಟಿರುವ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನ ವಿತರಿಸಲು ಮುಂದೆ ಬಂದಿದ್ದು, ಏಪ್ರಿಲ್ 10ಕ್ಕೆ ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ. ಇಲ್ಲಿಯವರೆಗೂ ರಿಲೀಸ್ ಆಗಿರೋ ಪೀಟರ್ ಚಿತ್ರದ ಹಾಡು ವಿಡಿಯೋ ತುಣುಕುಗಳು ಚಿತ್ರದ ಗುಣಮಟ್ಟವನ್ನು ಕಥೆಯ ಆಶಯವನ್ನು ಆಕರ್ಷಕವಾಗಿ ಬಣ್ಣಿಸಿದ್ದು, ಕನ್ನಡ ಸಿನಿಪ್ರಿಯರು ಈ ಚಿತ್ರವನ್ನ ಅಪ್ಪಿ ಒಪ್ಪುವ ಸೂಚನೆ ದಟ್ಟವಾಗಿ ಕಾಣುತ್ತಿದೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon