ಬೆಂಗಳೂರು: ಜಂಗಲ್ ಬೂಗಿ ಹೊಸ ರಿಯಾಲಿಟಿ ಶೋ ಆಗಿದೆ. ಟೈಟಲ್ ಹೇಳುವಂತೆ ಕಾಡಿನಲ್ಲಿ ನಡೆಯುವ ಕಾರ್ಯಕ್ರಮದ ಇದಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ. ಒಂದು ಟೀಂನಲ್ಲಿ 12 ಜನ ಭಾಗಿಯಾಗಲಿದ್ದು, ಇವರು ಕಾಡಿನಲ್ಲಿ 60 ದಿನ ಕಳೆಯಬೇಕಿದೆ. ಈ ವಿಭಿನ್ನ ಬಗೆಯ ರಿಯಾಲಿಟಿ ಶೋ ಅನ್ನು ವಿನೋದ್ ಪಾರ್ಥ ಸಾರಥಿ ನಿರ್ಮಾಣ ಮಾಡುತ್ತಿದ್ದಾರೆ.
ಈ ಶೋನ ನಿರ್ದೇಶಕರಾಗಿ ಯಶೋಧರ ವಿಕ್ರಮ್ ಕಾರ್ಯನಿರ್ವಹಿಸಲಿದ್ದಾರೆ. ಪಾಲ್ಸ್ ನಾಗ ಹಾಗೂ ಸಂದೀಪ್ ತೀರ್ಥಹಳ್ಳಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಾಥ್ ಕೊಡುತ್ತಿದ್ದಾರೆ. ಆಡಿ ನಾಗಾರ್ಜುನ್ ಕ್ಯಾಮೆರಾ ಹಿಡಿಯಲಿದ್ದಾರೆ.
ಎಲ್ಲಿ ಯಾವಾಗ ಶೋ ಪ್ರಸಾರ ?
ಜಂಗಲ್ ಬೂಗಿ ರಿಯಾಲಿಟಿ ಶೋ ಅನ್ನು ಝೀ ಕನ್ನಡ ವಾಹಿನಿ ಪ್ರಸಾರ ಮಾಡಲಿದೆ. ಇದೇ ತಿಂಗಳ 15ರಿಂದ ಆಡಿಷನ್ ಶುರುವಾಗಲಿದ್ದು, ಮೇ ಕೊನೆಯಲ್ಲಿ ಶೂಟಿಂಗ್ ಆರಂಭವಾಗಲಿದೆ. ಜೂನ್ 10 ರಿಂದ ಶೋ ಪ್ರಸಾರವಾಗಲಿದೆ.
ಯಾರು ಭಾಗಿಯಾಗಬಹುದು?
ಜಂಗಲ್ ಬೂಗಿ ರಿಯಾಲಿಟಿ ಶೋನಲ್ಲಿ ಸಾಮಾನ್ಯರು ಭಾಗಿಯಾಗುವ ಅವಕಾಶವಿದೆ. ಆದರೆ ವಯಸ್ಸು 18 ರಿಂದ 28 ಮೀರಬಾರದು. ಜಂಗಲ್ ಬೂಗಿ ಶೋ ಗೆದ್ದವರಿಗೆ 80 ಲಕ್ಷ ಹಣ ಸಿಗಲಿದೆ.
ಮೆಂಟರ್ ಯಾರು ಯಾರು?
ಜಂಗಲ್ ಬೂಗಿಯ 5 ತಂಡಗಳಲ್ಲಿ ಕನ್ನಡ ಪ್ಯಾಂಥರ್ಸ್ ತಂಡಕ್ಕೆ ಕನ್ನಡದ ಖ್ಯಾತ ನಾಯಕ ರಮೇಶ್ ಅರವಿಂದ್ ಮೆಂಟರ್ ಆಗಿರುತ್ತಾರೆ. ತೆಲುಗು ಲಯನ್ಸ್ ಗೆ ತೆಲುಗಿನ ಖ್ಯಾತ ನಾಯಕ ನಟರಾದಂಥ ಮೇಕಾ ಶ್ರೀಕಾಂತ್ ಮೆಂಟರ್ ಆಗಿರುತ್ತಾರೆ. ತಮಿಳು ಟೈಗರ್ಸ್ ಗೆ ತಮಿಳಿನ ಖ್ಯಾತ ನಟ, ನಿರ್ಮಾಪಕ , ನಿರ್ದೇಶಕ ಅರ್ಜುನ್ ಸರ್ಜಾ ಮೆಂಟರ್ ಆಗಲಿದ್ದಾರೆ. ಹಿಂದಿ ಹಾಕ್ಸ್ ಗೆ ಹಿಂದಿಯ ಖ್ಯಾತ ನಟ , ನಿರ್ಮಾಪಕ, ಮಾಡೆಲ್ ಹಾಗೂ ಸಮಾಜ ಸೇವಕ ಸೋನು ಸೂದ್ ಮೆಂಟರ್ ಆಗಿರುತ್ತಾರೆ. ಮಳಯಾಳಂ ಮೇವರಿಕ್ಸ್ ಗೆ ಮಳಯಾಳಂನ ಖ್ಯಾತ ನಟ, ಗಾಯಕ , ನಿರ್ಮಾಪಕ ದುಲ್ಕರ್ ಸಲ್ಮಾನ್ ಮೆಂಟರ್ ಆಗಿರುತ್ತಾರೆ
ಸಂಪರ್ಕಿಸುವುದು ಹೇಗೆ?
ಜಂಗಲ್ ಬೂಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಸಕ್ತಿ ಇದ್ದವರು, ಇ ಮೇಲ್ ಐಡಿ [email protected] ಅಥವಾ 9844500081 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ















