ಏಬಲ್ ಡೆಂಟ್ ಓರಲ್ ಕೇರ್ ಉತ್ಪನ್ನಗಳನ್ನು ವಿಶೇಷಚೇತನರಿಗಾಗಿ ತಯಾರಿಸಲಾಗಿದೆ: ಲುವಿನಾ ರೇಂಜಲ್

WhatsApp
Telegram
Facebook
Twitter
LinkedIn

ಬೆಂಗಳೂರು: ವಿಶೇಷಚೇತನರು, ಹಿರಿಯ ನಾಗರಿಕರು ಮತ್ತು ನರಸಂಬಂಧಿತ ತೊಂದರೆಗಳನ್ನು ಎದುರಿಸುತ್ತಿರುವವರಿಗಾಗಿ ಏಬಲ್ ಡೆಂಟ್ ಸಂಸ್ಥೆ ವಿಶೇಷ ಓರಲ್ ಕೇರ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ ಎಂದು ಸಂಸ್ಥೆಯ ಬ್ರ್ಯಾಂಡಿಂಗ್ ಮತ್ತು ಕಮ್ಯುನಿಕೇಷನ್ ಮಾರ್ಕೆಟಿಂಗ್ ಸ್ಟ್ರಾಟೆಜಿಸ್ಟ್ ಲುವಿನಾ ರೇಂಜಲ್ ಮಾಹಿತಿ ನೀಡಿದರು.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾನ್ಯವಾಗಿ ಎಲ್ಲರಿಗೂ ಲಭ್ಯವಿರುವ ಟೂಥ್‌ಪೇಸ್ಟ್ ಮತ್ತು ಹಲ್ಲಿನ ನೈರ್ಮಲ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಮತ್ತು ಹಿರಿಯರಿಗೆ ಸರಿಹೊಂದುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಗ್ರೂಪ್ ಫಾರ್ಮಾಸ್ಯುಟಿಕಲ್ಸ್‌ನ ಅಂಗಸಂಸ್ಥೆಯಾದ ಏಬಲ್ ಡೆಂಟ್ ವಿಶೇಷವಾದ ಉತ್ಪನ್ನಗಳನ್ನು ಸಿದ್ಧಪಡಿಸಿದೆ ಎಂದು ತಿಳಿಸಿದರು.

ವಿಶೇಷಚೇತನ ಮಕ್ಕಳು ಟೂಥ್‌ಪೇಸ್ಟ್ ಗೊತ್ತಿಲ್ಲದೆ ನುಂಗಿದರೆ ಅದು ಅವರ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಆದರೆ ಏಬಲ್ ಡೆಂಟ್ ಟೂಥ್‌ಪೇಸ್ಟ್‌ಗಳು ನೊರೆ ರಹಿತವಾಗಿದ್ದು, ಆಕಸ್ಮಿಕವಾಗಿ ನುಂಗಿದರೂ ಯಾವುದೇ ಅಪಾಯವಿರುವುದಿಲ್ಲ ಎಂದು ಹೇಳಿದರು.

ದಿನನಿತ್ಯದ ಬಳಕೆಗೆ ಅನುಕೂಲವಾಗುವಂತೆ ಜೆಂಟಲ್ ಕ್ಲೀನ್, ಎನಾಮೆಲ್ ಕೇರ್ ಮತ್ತು ಆಕ್ಟಿವ್ ಕ್ಲೀನ್ ಎಂಬ ಮೂರು ಮಾದರಿಯ ಡೆಂಟಲ್ ವೈಪ್ಸ್ ಗಳನ್ನು ದೇಶದಲ್ಲೇ ಮೊದಲ ಬಾರಿಗೆ ಪರಿಚಯಿಸಲಾಗಿದೆ. ನಮ್ಮ ಎಲ್ಲಾ ವಿಶೇಷ ಉತ್ಪನ್ನಗಳು ಮಾರುಕಟ್ಟೆ ದರದಲ್ಲೇ ಲಭ್ಯವಿದ್ದು, ಸಾರ್ವಜನಿಕರಿಗೆ ಕೈಗೆಟುಕುವ ರೀತಿಯಲ್ಲಿವೆ ಎಂದು ವಿವರಿಸಿದರು.

ವಿಶೇಷ ಅಗತ್ಯವುಳ್ಳ ಪ್ರತಿಯೊಬ್ಬರಿಗೂ ಮತ್ತು ಅವರ ಆರೈಕೆ ಮಾಡುವವರಿಗೆ ಅನುಕೂಲವಾಗುವಂತೆ ಜಾಗೃತಿ ಮೂಡಿಸಲು ಏಬಲ್ ಸ್ಮೈಲ್ ಕಮ್ಯುನಿಟಿ ಎಂಬ ವೇದಿಕೆಯನ್ನು ಕೂಡ ಸಂಸ್ಥೆಯ ವತಿಯಿಂದ ಆರಂಭಿಸಲಾಗಿದೆ ಎಂದು ಲುವಿನಾ ರೇಂಜಲ್ ತಿಳಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon