ಕೋಗಿಲು ಪ್ರಕರಣದಲ್ಲಿ ಮನೆ ಕೊಟ್ಟರೆ ನ್ಯಾಯಾಲಯದಲ್ಲಿ ಪ್ರಶ್ನೆ: ಎಸ್.ಆರ್.ವಿಶ್ವನಾಥ್

WhatsApp
Telegram
Facebook
Twitter
LinkedIn

ಬೆಂಗಳೂರು: ಕೋಗಿಲು ಅಕ್ರಮ ಗುಡಿಸಲು- ಮನೆ ತೆರವು ಪ್ರಕರಣದ ಹೊರದೇಶದವರಿಗೆ ಮನೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಇದರ ವಿರುದ್ಧ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಇವತ್ತು ನಿಜವಾದ ಫಲಾನುಭವಿ 10.5 ಲಕ್ಷ ರೂಪಾಯ ದುಡ್ಡು ಕಟ್ಟಬೇಕಾಗುತ್ತದೆ. ಬ್ಯಾಂಕ್ ಸಾಲ; ಇಲ್ಲವೇ ಸ್ವಂತ ಪ್ರಯತ್ನದಿಂದ ಇದನ್ನು ಕಟ್ಟಬೇಕು. ಇವನಿಗೆ ಬಿಬಿಎಂಪಿಯಿಂದ 5 ಲಕ್ಷ ರೂಪಾಯಿ, ಅಲ್ಪಸಂಖ್ಯಾತ ಇಲಾಖೆಯಿಂದ ಎರಡೂವರೆ ಲಕ್ಷ ರೂಪಾಯಿ, ಇವೆಲ್ಲವನ್ನು ಕೊಟ್ಟು ಕೇವಲ ಎರಡೂವರೆ ಲಕ್ಷದಲ್ಲಿ ಮನೆ ಕೊಡಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡಲಾಗಿದೆ. ಇದಕ್ಕೂ ಮೀರಿ ಏನಾದ್ರೂ ಮನೆಗಳನ್ನು ಕೊಟ್ಟರೆ ನ್ಯಾಯಾಲಯಕ್ಕೆ ಹೋಗುತ್ತೇವೆ. ಈಗಾಗಲೇ ದಾಖಲೆಗಳನ್ನು ಕೂಡ ಸಂಗ್ರಹ ಮಾಡುತ್ತಿದ್ದೇವೆ ಎಂದರು.

ನಾಳೆಯೇ ಮನೆಗಳ ಹಂಚಿಕೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದು ಸಾಧ್ಯವೇ ಇಲ್ಲ. ಸುಮ್ನೆ ಅವರು ಹೇಳಿರಬಹುದು ಅಷ್ಟೇ. ಇವತ್ತು ಅವರು ಇಲ್ಲಿ ವಾಸ ಆಗಿರೋದಕ್ಕೆ ಐದು ವರ್ಷ ಇದ್ದಾರೆ ಅನ್ನೋದಕ್ಕೆ ದಾಖಲೆಗಳನ್ನು ಕೊಡಬೇಕು.18 ದಾಖಲೆಗಳನ್ನು ಕೇಳಿದ್ದಾರೆ ಅವನ್ನು ಕೊಡಬೇಕು. ಯಾವ ವಿಶೇಷ ಪ್ರಕಾರದಲ್ಲೂ ಇವನ್ನು ಬದಲು ಮಾಡಲು ಆಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಕೇರಳದ ಮುಖ್ಯಮಂತ್ರಿ ಹೇಳಿದರು. ಪಾಕಿಸ್ತಾನದವರು ಹೇಳಿದರು. ಅಂದ ತಕ್ಷಣ ನೀವು ಮನೆ ಕೊಡಲಾಗುತ್ತಿದೆ. ಪಾಕಿಸ್ತಾನ, ಬಾಂಗ್ಲಾದಿಂದ ಬಂದಿರುವ ಹಿಂದೂ, ಕ್ರಿಶ್ಚಿಯನ್, ಸಿಕ್ಖರು ಸೇರಿ ಅನೇಕ ಅಲ್ಪಸಂಖ್ಯಾತರು ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಅವರಿಗೆ ಕೂಡ ಯಾವ ಸರ್ಕಾರಗಳು ಇಲ್ಲಿವರೆಗೂ ಮನೆ ಕೊಟ್ಟಿಲ್ಲ. ಅವರಿಗೆ ಅವರಿಗೆ ಪೌರತ್ವ ಕೊಡಬೇಕು ಎಂದರೆ ಇದೇ ಕಾಂಗ್ರೆಸ್ ನವರು, ಇದೇ ಕಮ್ಯುನಿಸ್ಟ್ ಪಕ್ಷದವರು ದೊಡ್ಡ ಹೋರಾಟ ಮಾಡುತ್ತಾರೆ. ಆದರೆ ಇವತ್ತು ಬೇರೆ ದೇಶದಿಂದ ಬಂದಿರುವವರಿಗೆ ಮನೆ ಕೊಡುವ ತುರ್ತು ಏನಿದೆ ಎಂದು ಕೇಳಿದರು.

ಇದು ಅಲ್ಪಸಂಖ್ಯಾತರ ವೋಟಿನ ತುಷ್ಟೀಕರಣದ ಮುಂದುವರೆದ ಭಾಗವಾಗಿದೆ. ಈಗೇನು ಕೇರಳ ಎಲೆಕ್ಷನ್ ನಡೀತಾ ಇದೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸರ್ಕಾರಗಳಿಗೆ ಅಲ್ಪಸಂಖ್ಯಾತರ ವೋಟ್ ತಗೊಳೋದಕ್ಕೆ ಇಲ್ಲಿ ನಮ್ಮ ಕರ್ನಾಟಕವನ್ನು ಬಲಿ ಕೊಡುವ ಕೆಲಸ ಮಾಡಿದ್ದಾರೆ ಇದರ ವಿರುದ್ಧ ನಾವು ನ್ಯಾಯಾಲಯದಲ್ಲೂ ಹೋರಾಟ ಮಾಡುತ್ತೇವೆ. ರಾಜ್ಯಪಾಲರ ಬಳಿಯೂ ಹೋಗುತ್ತೇವೆ. ಸ್ಥಳೀಯವಾಗಿ ಕೂಡ ಏನು ಹೋರಾಟ ಮಾಡಬೇಕೋ ಮಾಡುತ್ತೇವೆ ಎಂದು ತಿಳಿಸಿದರು.

ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಹಂತಹಂತವಾಗಿ ಅಕ್ರಮವಾಗಿ ಮನೆ- ಗುಡಿಸಲು ಕಟ್ಟಿಕೊಂಡಿದ್ದಾರೆ. ಬೇರೆ ದೇಶದಿಂದ ಬಂದ ವಲಸಿಗರು ಮತ್ತು ಸ್ಥಳೀಯರಿಂದ ಅಲ್ಲಿನ ಕಾಂಗ್ರೆಸ್ಸಿನ ಅಲ್ಪಸಂಖ್ಯಾತರ ಮುಖಂಡರು ನಾವು ಮನೆ ಕೊಡಿಸುತ್ತೇವೆ ಎಂದು ಹೇಳಿ ಅವರ ಹತ್ತಿರ ದುಡ್ಡನ್ನು ವಸೂಲಿ ಮಾಡಿದ್ದಾರೆ. ಅವರುಗಳು ಅಲ್ಲಿ ಮನೆಗಳನ್ನು ಕಟ್ಟಿಸಿ ಬಾಡಿಗೆಗೆ ಕೊಟ್ಟು ಪ್ರತಿ ತಿಂಗಳು ಬಾಡಿಗೆ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ- ಅಧಿಕಾರಿಗಳು ನೋಟೀಸ್ ಕೊಟ್ಟು ನಿಯಮಾನುಸಾರ ಕಾನೂನು ಬದ್ಧವಾಗಿ ಮನೆಗಳನ್ನು ತೆರವು ಮಾಡಿಸಿದ್ದಾರೆ. ತೆರವು ಮಾಡಿಸಿ ಎರಡು ದಿನ ಕೂಡ ಆಗಿರಲಿಲ್ಲ. ಆದರೆ ಕೇರಳದ ಮುಖ್ಯಮಂತ್ರಿಗಳು ಒಂದು ಹೇಳಿಕೆಯನ್ನು ಕೊಟ್ಟರು ಅಂದ ತಕ್ಷಣನೇ ಅಲ್ಲಿನ ಕಾಂಗ್ರೆಸ್ಸಿನ ವರಿಷ್ಠರು ರಾಷ್ಟ್ರೀಯ ನಾಯಕರು ಮತ್ತು ಬೆಂಗಳೂರಿನ ಕರ್ನಾಟಕದ ಉಸ್ತುವಾರಿಗಳು ವೇಣುಗೋಪಾಲ್ ಹೇಳಿಕೆ ಕೊಟ್ಟರು. ತಕ್ಷಣ ಇಲ್ಲಿನ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಎಲ್ಲಾ ಅಲ್ಪಸಂಖ್ಯಾತ ಸಚಿವರು ಸೇರಿದಂತೆ ಪ್ರತಿಯೊಬ್ಬರು ಕೂಡ ಸ್ಥಳ ಪರಿಶೀಲನೆಯನ್ನು ಮಾಡಿ ಅನ್ಯಾಯ ಆಗಿಬಿಟ್ಟಿದೆ ಅವರಿಗೆಲ್ಲ ಮನೆಗಳನ್ನು ಕೊಡುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳು ತುರ್ತು ಸಭೆ ಮಾಡಿದ್ದಾರೆ. ಪ್ರವಾಹ ಬಂದಾಗ ಕೂಡ ಮಾಡಿರಲಿಲ್ಲ; ಭೂಕಂಪ ಬಂದಾಗ ಆಗಲಿಲ್ಲ. ಐಪಿಎಲ್ ತುಳಿತಕ್ಕೆ ಒಳಗಾದಾಗ ಕೂಡ ಇಷ್ಟು ತುರ್ತು ಸಭೆಯನ್ನು ಮಾಡಿ ಪರಿಹಾರವನ್ನು ಘೋಷಣೆ ಮಾಡಿರಲಿಲ್ಲ. ಆದರೆ ಈಗಾಗಲೇ ದಾಖಲೆಗಳನ್ನು ಸಂಗ್ರಹ ಮಾಡಿ ಬೈಯಪ್ಪನಹಳ್ಳಿಯಲ್ಲಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಬ್ಸಿಡಿಯಲ್ಲಿ ನಿರ್ಮಾಣ ಮಾಡಿರುವ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಅಥವಾ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ತರಾತುರಿಯಲ್ಲಿ ಮನೆಗಳನ್ನು ಕೊಡಬೇಕು ಅಂತ ರಾಜ್ಯ ಸರ್ಕಾರ ಹೊರಟಿದೆ ಎಂದು ಎಸ್.ಆರ್.ವಿಶ್ವನಾಥ್ ಆಕ್ಷೇಪಿಸಿದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon