ಬೆಂಗಳೂರು: ರೋಟರಿ ಕ್ಲಬ್ ಆಪ್ ಗ್ರೇಟರ್ ವಿದ್ಯಾರಣ್ಯಪುರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆಂಚುರಿ ಕ್ಲಬ್ ನಲ್ಲಿ ನಡೆಯಿತು. 2026-27ರ ನೂತನ ಚಾರ್ಟರ್ ಅಧ್ಯಕ್ಷರಾಗಿ ಅಪರ್ಣ ಕನ್ನಮಪಲ್ಲಿ, 2026-27ರ ಚಾರ್ಟರ್ ನೂತನ ಕಾರ್ಯದರ್ಶಿಯಾಗಿ ಡಾ.ಆಶಾ ರವಿಕಿರಣ್ ಪದಗ್ರಹಣ ಮಾಡಿದರು.
3192ರೋಟರಿ ಡಿಸ್ಟ್ರಿಕ್ಟ್ ನ ಬಿ.ಎಸ್.ವಿನೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಮಾಣ ವಚನ ಬೋದಿಸಿದರು. ರೋಟರಿ ವಿದ್ಯಾರಣ್ಯಪುರದಿಂದ ಕೈಗೊಳ್ಳಬೇಕಾದ ಮುಂದಿನ ಯೋಜನೆಗಳ ಕುರಿತು ಘೋಷಣೆ ಮಾಡಲಾಯಿತು.
2026-27ರ ವಲಯ ರಾಯಭಾರಿ ನಾಗೇಶ್ ಎಸ್, ಸಹಾಯಕ ಗವರ್ನರ್ ಪವನ್ ಟಿ.ಎಸ್.ಜಿಲ್ಲಾ ಕಾರ್ಯದರ್ಶಿ ರಶ್ಮಿ ಟಂಕಸಾಲಿ ಮತ್ತಿತರರು ಭಾಗವಹಿಸಿದ್ದರು.















