ಚಿತ್ರದುರ್ಗದಲ್ಲಿ ರಾಜವೀರ ಮದಕರಿನಾಯಕರ ಜಯಂತ್ಯೋತ್ಸವ: ಪ್ರಸನ್ನಾನಂದಪುರಿ ಸ್ವಾಮೀಜಿ

WhatsApp
Telegram
Facebook
Twitter
LinkedIn

ಬೆಂಗಳೂರು: ಕನ್ನಡ ನಾಡಿನ ಸ್ವಾಭಿಮಾನ, ಧೈರ್ಯ, ಶೌರ್ಯ, ಸಾಹಸ, ಪರಾಕ್ರಮ, ತ್ಯಾಗದ ಪ್ರತೀಕವಾಗಿರುವ ನಾಡದೊರೆ ರಾಜವೀರ ಮದಕರಿನಾಯಕರ ಜಯಂತ್ಯೋತ್ಸವವನ್ನು ಅ.13 ರಂದು ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ತಿಳಿಸಿದರು.

ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಉತ್ಸವದ ಮುಖ್ಯ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಚಿತ್ರದುರ್ಗ ನಾಯಕ ಸಮಿತಿ ಈ ಕಾರ್ಯಕ್ರಮವನ್ನು ಹೊಳಲ್ಕೆರೆ ರಸ್ತೆಯ ಕನಕ ಸರ್ಕಲ್ ಬಳಿ ಆಯೋಜಿಸಿದೆ ಎಂದರು.

ಅಂದು ಬೆಳಗ್ಗೆ 11.30ಕ್ಕೆ ರಾಜವೀರ ಮದಕರಿ ನಾಯಕ, ಒನಕೆ ಓಬವ್ವ, ಡಾ. ಬಿ.ಆರ್. ಅಂಬೇಡ್ಕರ್, ಕನಕದಾಸ, ಜಗಜ್ಯೋತಿ ಬಸವೇಶ್ವರ, ಶ್ರೀಕೃಷ್ಣ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುವುದು. ಮಧ್ಯಾಹ್ನ 1.30ಕ್ಕೆ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಕನಕ ಸರ್ಕಲ್‌ನಲ್ಲಿ ವೇದಿಕೆ ಕಾರ್ಯಕ್ರಮಗಳು ನಡೆಯಲಿದೆ. ಬಳಿಕ ರಾಜವೀರ ಮದಕರಿ ನಾಯಕ ಅವರ ನೂತನ ಪ್ರತಿಮೆಯೊಂದಿಗೆ ಮೆರವಣಿಗೆ ಹೊರಡಲಿದ್ದು, ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ. ಶ್ರೀ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ರಾತ್ರಿ 7.30ಕ್ಕೆ ಮದಕರಿ ಸರ್ಕಲ್‌ನಲ್ಲಿ ಧ್ವನಿ-ಬೆಳಕಿನ ಪ್ರದರ್ಶನ, ಪಟಾಕಿ ಶೋ ಹಾಗೂ ಲೇಸರ್ ಶೋ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಎಲ್ಲರೂ ಸಹಕಾರ ಮತ್ತು ಸಕ್ರಿಯ ಸಹಭಾಗಿತ್ವದೊಂದಿಗೆ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುವ ಸಂಕಲ್ಪ ಮಾಡಬೇಕು. ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಮದಕರಿ ನಾಯಕರ ಅಭಿಮಾನಿಗಳು, ಇತಿಹಾಸ ಪ್ರಿಯರು, ಕಲಾಸಕ್ತರು, ಯುವಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪ್ರಸನ್ನಾನಂದ ಮಹಾಸ್ವಾಮಿಗಳು ಮನವಿ ಮಾಡಿದರು.

ಸಮಿತಿಯ ಮುಖಂಡರುಗಳಾದ ಶ್ರೀನಿವಾಸ್ ನಾಯಕ, ವೆಂಕಟೇಶ್, ರವಿಮದಕರಿ ನಾಯಕ, ಮಂಜುನಾಥ್, ದಯಾನಂದ, ಕೃಷ್ಣಮೂರ್ತಿ ಸೇರಿದಂತೆ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon