ನವದೆಹಲಿ/ಬೆಂಗಳೂರು: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ 2026ರ ಜುಲೈ 16ರಂದು ನೀಟ್ 2026ರ ಫಲಿತಾಂಶಗಳನ್ನು ಪ್ರಕಟಿಸಿದ್ದು, ಮತ್ತೊಮ್ಮೆ ಕರ್ನಾಟಕದ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳು ರಾಷ್ಟ್ರಮಟ್ಟದಲ್ಲಿ ಉನ್ನತ ಶ್ರೇಯಾಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿವೆ.
ವಿದ್ಯಾರ್ಥಿಗಳಾದ ವೈಷ್ಣವಿ ದಾಸ್ ಅವರು ಅಖಿಲ ಭಾರತ ಮಟ್ಟದ ಶ್ರೇಯಾಂಕ 20 ಅನ್ನು ಗಳಿಸಿದ್ದು, ಸುಚಿತಾ ಮನ್ನೆ 48 ಮತ್ತು ರವಿಕಿರಣ್ ಕಿನಿ 62 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಇದರೊಂದಿಗೆ, ಸಂಸ್ಥೆಯು ಆಲ್ ಇಂಡಿಯಾ ಓಪನ್ ಕ್ಯಾಟಗರಿಯಲ್ಲಿ ಅಗ್ರ 100ರೊಳಗೆ ಮೂರು ಸ್ಥಾನಗಳನ್ನು ಗಳಿಸಿದಂತಾಗಿದೆ.
ಜೊತೆಗೆ, ಅಭಿರಾಮ್ ಎಂ 118, ಉನ್ನತಿ ಜೊನ್ನಾಲ 159, ರಘುರಾಮ್ ಎಂ 167, ಹೃಷಿಕೇಶ್ ವೆಂಕಟೇಶ್ ಎಸ್ 244, ಅವನೀಶ್ ಸಿ ಚಿನಿವಾಲ್ 368, ಲಿಖಿತ್ ಪಿ ಗೌಡ 436, ಸಗನ್ ಜೆ ಎಸ್ 472, ಸೂರ್ಯ ಎಸ್ 864 ಮತ್ತು ದಯಾನಿತಾ ಪಿ 959 ಶ್ರೇಯಾಂಕಗಳನ್ನು ಪಡೆದಿದ್ದಾರೆ.
ಈ ಗಮನಾರ್ಹ ಸಾಧನೆಗಳೊಂದಿಗೆ ಶ್ರೀ ಚೈತನ್ಯ ಸಂಸ್ಥೆಯು ಆಲ್ ಇಂಡಿಯಾ ಓಪನ್ ಕ್ಯಾಟಗರಿಯ ಅಗ್ರ 1000 ಶ್ರೇಯಾಂಕಗಳ ಪೈಕಿ ಒಟ್ಟು 12 ಸ್ಥಾನಗಳನ್ನು ಪಡೆದುಕೊಂಡಿದೆ. ಇದರಲ್ಲಿ ಅಗ್ರ 100 ರೊಳಗಿನ 3 ಸ್ಥಾನಗಳೂ ಸೇರಿವೆ.
ಈ ಸಂತೋಷದ ಸಂದರ್ಭದಲ್ಲಿ, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಎಲ್ಲಾ ಯಶಸ್ವಿ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಸಮರ್ಪಿತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಇವರ ಅಚಲ ಬೆಂಬಲ, ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದಲೇ ಈ ಗಮನಾರ್ಹ ಸಾಧನೆ ಸಾಧ್ಯವಾಗಿದೆ ಎಂದಿದೆ.
ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಸುಷ್ಮಾ ಬೊಪ್ಪನ ಈ ಕುರಿತು ಮಾತನಾಡಿದ್ದು, ನೀಟ್ 2026ರಲ್ಲಿ ಸಂಸ್ಥೆಯ ಯಶಸ್ಸಿಗೆ ಅಸಾಧಾರಣ ಕೊಡುಗೆ ನೀಡಿದ ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು, ಬೋಧಕರು ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಪ್ರಯತ್ನಗಳಲ್ಲಿಯೂ ನಿರಂತರ ಯಶಸ್ಸನ್ನು ಕಾಣಲಿ ಎಂದು ಸಂತಸ ಹಂಚಿಕೊಂಡಿದ್ದಾರೆ.















