ಬೆಂಗಳೂರು: ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ಇಡೀ ಭಾರತದಲ್ಲಿ ಉನ್ನತ ಶಿಕ್ಷಣದಲ್ಲಿ ಮುಂಚೂಣಿ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ನ್ಯಾಕ್ ಎ++ ಮಾನ್ಯತೆಯನ್ನು ಹೊಂದಿದೆ. ಇನ್ನಷ್ಟು ಉತ್ತಮ ಕೌಶ್ಯಲ್ಯತೆ, ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ವಿಶ್ವವಿದ್ಯಾಲಯ ಜುಲೈ 2026ರ ಅವಧಿಗೆ ಪದವಿ, ಸ್ನಾತ್ತಕೋತ್ತರ ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳ ಪ್ರವೇಶಕ್ಕೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಕುರಿತು ಬುಧವಾರ ಇಗ್ನೋ ಪ್ರಾದೇಶಿಕ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪ್ರಾದೇಶಿಕ ನಿರ್ದೇಶಕ ಎಂ. ಷಣ್ಮುಗಂ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ನ್ಯಾಕ್ ಎ++ ಮಾನ್ಯತೆಯನ್ನು ಹೊಂದಿದ್ದು, ಈಗ ಜುಲೈ 2026 ರ ಅವಧಿಗೆ ಪ್ರವೇಶಾತಿಯನ್ನು ಘೋಷಿಸಿದೆ. ಪದವಿ, ಸ್ನಾತ್ತಕೋತ್ತರ ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಆನ್ಲೈನ್ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು https://ignouadmission.samarath.edu.in/ ನಲ್ಲಿ ಅಗತ್ಯ ದಾಖಲೆಗಳನ್ನು ಈಗಿನಿಂದಲೇ ಅಪ್ಲೋಡ್ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪ್ರವೇಶಾತಿ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಇಗ್ನೋ ಅಧಿಕೃತ ವೆಬ್ಸೈಟ್ www.ignou.ac.in ಗೆ ಭೇಟಿ ನೀಡಬಹುದಾಗಿದೆ. ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವನ್ನು ಭೇಟಿ ಮಾಡಿ ಕೂಡ ಮಾಹಿತಿಯನ್ನು ಪಡೆಯಬಹುದಾಗಿದೆ. ಪರ್ಯಾಯವಾಗಿ [email protected] ಗೆ ಇಮೇಲ್ ಕಳುಹಿಸಬಹುದಾಗಿದೆ. 9449337272 ಸಂಖ್ಯೆಗೆ ವಾಟ್ಸ್ ಆಪ್ ಸಂದೇಶವನ್ನು ಕಳುಹಿಸಬಹುದು ಅಥವಾ 080-29607272 ಲ್ಯಾಂಡ್ ಲೈನ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ತಮ್ಮ ಸಮೀಪದ ವಿವಿ ಪ್ರಾದೇಶಿಕ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಬೆಂಗಳೂರು ಕೇಂದ್ರದ ವೆಬ್ಸೈಟ್ http://rcbangalore.ignou.ac.in ಅನ್ನು ಪರಿಶೀಲಿಸಬಹುದು ಎಂದು ವಿವರಿಸಿದರು.
ವರ್ಷಕ್ಕೆ ಎರಡು ಬಾರಿ ಪ್ರವೇಶ ಪ್ರಕ್ರಿಯೆ ವಿಶ್ವವಿದ್ಯಾಲಯ ನಡೆಸುತ್ತಿದೆ. ಮನೆ ಬಾಗಿಲಿಗೆ ಉನ್ನತ ಶಿಕ್ಷಣವನ್ನು ತಲುಪಿಸುವ ಉದ್ದೇಶ ನಮ್ಮದಾಗಿದೆ. ಅತಿ ಕಡಿಮೆ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ ನಮಲ್ಲಿ ಪೂರ್ಣಾವಧಿಯ ಎಂ.ಬಿ.ಎ, ಎಂ.ಸಿ.ಎ ಅಂತಹ ವೃತ್ತಿಪರ ಕೋರ್ಸ್ ಗಳಿಂದ ಹಿಡಿದು 6 ತಿಂಗಳ ಸರ್ಟಿಫಿಕೇಟ್ ಕೋರ್ಸುಗಳು ನಮ್ಮಲ್ಲಿ ಇವೆ. ಕಡು ಬಡವರಿಂದ ವೃತ್ತಿಯಲ್ಲಿ ಇದ್ದುಕೊಂಡು ಶಿಕ್ಷಣವನ್ನು ಮುಂದುವರಿಸುವ ಇಚ್ಛೆ ಉಳ್ಳವರಿಗೆ ನಮ್ಮ ಮುಕ್ತ ವಿಶ್ವವಿದ್ಯಾಲಯ ಹೇಳಿಮಾಡಿಸಿದಂತಿದೆ. ಇದಕ್ಕೆ ಎಂದರು.
ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಹೇಮಾಮಾಲಿನಿ ಹೆಚ್. ಸಿ ಅವರು ಮಾತನಾಡಿ ಸೋಶಿಯಲ್ ವರ್ಕ್, ಕಾನೂನು, ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶೇಷ ಸರ್ಟಿಫಿಕೇಟ್ ಕೋರ್ಸ್ ಗಳನ್ನು ವಿಶೇಷವಾಗಿ ವೃತ್ತಿಪರರಿಗೆ ವಿನ್ಯಾಸಗೊಳಿಸಿರುವ ಮೊದಲ ಮುಕ್ತ ವಿಶ್ವವಿದ್ಯಾಲಯ ಇಗ್ನೋ ಆಗಿದೆ. 6 ತಿಂಗಳ ಕೋರ್ಸುಗಳು ಈಗ ಇತರ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಪದವಿ, ಸ್ನಾತ್ತಕೋತ್ತರ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾಗಿದೆ. 4 ಹಂತಗಳಲ್ಲಿ ನಮ್ಮ ವಿಶ್ವವಿದ್ಯಾಲಯ ಕೋರ್ಸ್ ಗಳನ್ನು ವಿನ್ಯಾಸಗೊಳಿಸಿದ್ದು, ಯುಜಿಸಿ ಹೊಸ ನಿಯಮದ ಪ್ರಕಾರ ರೆಗ್ಯುಲರ್ ಕೋರ್ಸುಗಳ ಜೊತೆಗೆ ಮುಕ್ತ ವಿಶ್ವವಿದ್ಯಾಲಯದ ಪದವಿಯನ್ನು ಪಡೆಯಬಹುದಾಗಿದೆ. ಒಟ್ಟಾರೆಯಾಗಿ ಈ ಬಾರಿಯ ಪ್ರವೇಶಾತಿ ಶಿಕ್ಷಣವನ್ನು ಉನ್ನತೀಕರಿಸಿಕೊಳ್ಳಲು ಇಚ್ಛಿಸುವವರಿಗೆ ಸುವರ್ಣಾವಕಾಶವಾಗಿದೆ ಎಂದರು.
ನಮ್ಮ ಸ್ಟಡಿ ಸೆಂಟರ್ ಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಧವಾದ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಕೇವಲ ಥಿಯರಿ ವಿಷಯಗಳನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಹಾಜರಾತಿ ತರಗತಿಗಳಿಗೆ ಹಾಜರಾತಿ ವಿನಾಯಿತಿ ಕೊಡಲಾಗುತ್ತಿದೆ. ಪ್ರಾಯೋಗಿಕ ಪರೀಕ್ಷೆ ಇರುವ ಕೋರ್ಸುಗಳಿಗೆ ತರಗತಿಗಳಿಗೆ, ಪ್ರ್ಯಾಟಿಕಲ್ಸ ಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ. ಇವನ್ನು ಮನಸಿನಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳು ತಮಿಗಿಷ್ಟವಾದ, ವೃತ್ತಿಗೆ ಅನುಗುಣವಾಗಿ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮತ್ತೊಬ್ಬ ನಿರ್ದೇಶಕಿ ಡಾ ಕಸ್ತೂರಿ ಪೇಸಲಾ ತಿಳಿಸಿದರು.
ಈ ವೇಳೆ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಆರ್.ರಾಜ ಸೇರಿದಂತೆ ಪ್ರಾದೇಶಿಕ ಕೇಂದ್ರದ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.















