ಸರ್ಕಾರಿ ಹುದ್ದೆಯಲ್ಲಿ ಸಕ್ರಮಗೊಳಿಸಿ: ಪರವಾನಗಿ ಭೂ ಮಾಪಕರ ಸಂಘ ಆಗ್ರಹ 

WhatsApp
Telegram
Facebook
Twitter
LinkedIn

ಬೆಂಗಳೂರು: ತಮ್ಮನ್ನು ಸರ್ಕಾರಿ ಹುದ್ದೆಯಲ್ಲಿ ಸಕ್ರಮಗೊಳಿಸಬೇಕೆಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘ ಆಗ್ರಹಿಸಿದೆ.

ಬುಧವಾರ ಈ ಕುರಿತು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತಿರುಮಲೇ ಗೌಡ, 2002 ರಿಂದ 23 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದು, ಸರ್ಕಾರಿ ಭೂಮಾಪಕರು ನಿರ್ವಹಿಸುತ್ತಿರುವ ಕೆಲಸಕ್ಕೆ ಸರಿ ಸಮಾನಾದ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ ಸರ್ಕಾರಿ ಭೂಮಾಪಕರಿಗೆ ನೀಡುವಂತ ತರಬೇತಿಗೆ ಸರಿ ಸಮನಾದ ತರಬೇತಿ ಪಡೆದಿದ್ದೇವೆ, ವಿದ್ಯಾರ್ಹತೆ ಇಬ್ಬರಿಗೂ ಒಂದು ಸಮಾನವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಭೂಮಾಪನ ದಿನಚಾರಣೆಯಂದು ನೀಡಿದ ಆಶ್ವಾಸನೆಯಂತೆ ಪರವಾನಗಿ ಭೂಮಾಪಕರಿಗೆ ಒಂದು ಬಾರಿ ವಿಶೇಷ ನೇಮಕಾತಿ ಅಡಿಯಲ್ಲಿ ಸರ್ಕಾರಿ ಭೂಮಾಪಕರಾಗಿ ಸಕ್ರಮಗೊಳಿಸಿಕೊಂಡು ಇಲಾಖೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಶೀರ್ಷಿಕೆ ಅಡಿಯಲ್ಲಿ ಸಂಭಾವನೆಯನ್ನು ಸರಿದೊಗಿಸಿ ಅವಕಾಶ ಕಲ್ಪಿಸುವಂತೆ ವಿನಂತಿಸಲಾಗಿದೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿಯನ್ನು ನೆಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಪ್ರಸನ್ನ ಕುಮಾರ್ ಡಿ.ಎಂ ಮಾತನಾಡಿ, ಪರವಾನಗಿ ಭೂಮಾಪಕರನ್ನು ಸರ್ಕಾರಿ ಹುದ್ದೆಯಲ್ಲಿ ವಿಲಿನಗೊಳ್ಳಿಸಲು ವಿಶೇಷ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಶೀರ್ಷಿಕೆ ಅಡಿಯಲ್ಲಿ ಕ್ರಮ ವಹಿಸಬೇಕು. ಪರವಾನಗಿ ಭೂಮಾಪಕರನ್ನು 2000 ರಲ್ಲಿ ಕೆ.ಎಲ್.ಆರ್ ಆಕ್ಟ್ 46 ರ ತಿದ್ದುಪಡಿಯಂತೆ ಇಲಾಖೆಗೆ ಪರಿಚಯಿಸಲಾಗಿದ್ದು,  ಇದರ ಅಡಿಯಲ್ಲಿ 2022 ರಿಂದ ಸುಮಾರು 800 ರಿಂದ 1000 ಪರವಾನಗಿ ಭೂಮಾಪಕರು ನಿಯಮಾನುಸಾರ ಕೆಲಸ ಮಾಡಿದ್ದಾರೆ ಎಂದರು.

ಪ್ರಧಾನ ಕಾರ್ಯದರ್ಶಿ ಸಿದ್ಧರಾಜು ಎನ್. ಕೆ ಮಾತನಾಡಿ, 2021 ರಲ್ಲಿ ಕೆ.ಎಲ್.ಆರ್ ಆಕ್ಟ್ ತಿದ್ದುಪಡಿ ಮಾಡಿ ಸರ್ಕಾರಿ ಭೂಮಾಪಕರು ನಿರ್ವಹಿಸಬಹುದಾದ ಎಲ್ಲಾ ಕೆಲಸವನ್ನು ಪರವಾನಗಿ ಪಡೆದ ಭೂಮಪಕರು ನಿರ್ವಹಿಸಲು ಅವಕಾಶ ಮಾಡಿ ಕೊಡಲಾಗಿದ್ದು, ಅದರಂತೆ ವಿಭಾಗ, ದಾನ, ಕ್ರಯ, ಇದಕ್ಕೆ ಸಂಬಂಧಪಟ್ಟಂತೆ 11- ಇ ನಕ್ಷೆ ಮತ್ತು ತತ್ಕಾಲ್ ಪೋಡಿ ಮಾಡಲು ಅಲಿನೇಷನ್ ಪೂರ್ವ ನಕ್ಷೆ ತಯಾರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಸಹ ಕಾರ್ಯದರ್ಶಿ ದ್ವಾರಕೀಶ್ ಎಂ, ಸಂಘಟನಾ ಕಾರ್ಯದರ್ಶಿ ಕೋದಂಡರಾಮ ಎಲ್, ಖಜಾಂಚಿ ನಟೇಶ್ ಪ್ರಭುರಾಜ್ ಜಿ.ಎಸ್, ಸದಸ್ಯರಾದ ರಾಜಣ್ಣ ಎಂ.ಕೆ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon