ಬೆಂಗಳೂರು: ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಗೆ ನಡೆದ ಚುನಾವಣಾ ಪ್ರಕ್ರಿಯೆ ಅಕ್ರಮವಾಗಿದ್ದು, ಕೂಡಲೇ ಮತ ಎಣಿಕೆಯನ್ನು ನಿಲ್ಲಿಸಿ ಪಾರದರ್ಶಕ ಪುನರ್ ಚುನಾವಣೆ ನಡೆಸಬೇಕು ಎಂದು ಆಲ್ ಇಂಡಿಯಾ ಅಡ್ವೋಕೇಟ್ಸ್ ಅಸೋಸಿಯೇಷನ್ ಆಗ್ರಹಿಸಿದೆ.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಎ.ಇ.ಎ.ಎ ಅಧ್ಯಕ್ಷ ಭಕ್ತವತ್ಸಲ, ಈ ವರ್ಷದ ಮಾರ್ಚ್ 11 ರಂದು ಕರ್ನಾಟಕ ವಕೀಲರ ಪರಿಷತ್ತಿಗೆ ನಡೆದ ಚುನಾವಣೆ ಅಕ್ರಮದಿಂದ ಕೂಡಿದ್ದು, ಸೂಕ್ತ ರಕ್ಷಣೆ, ಬಂದೋಬಸ್ತ್ ಪಾರದರ್ಶಕತೆ ಇಲ್ಲದೆ ನಡೆದಿದೆ ಎಂದು ದೂರಿದರು.
ಅನೇಕ ವಕೀಲರ ಮಿತ್ರರಿಗೂ, ಅಭ್ಯರ್ಥಿಗಳಿಗೂ ಈ ಚುನಾವಣೆ ಅಸಮಾಧಾನ ತಂದಿದೆ. ಮಾರ್ಚ್ 26 ರಲ್ಲೇ 3 ಬಾರಿ ಹೈ ಪವರ್ ಕಮಿಟಿ ಗೆ ದೂರು ಕೊಟ್ಟರೂ, ಸಿ.ಸಿ.ಟಿ.ವಿ ಫೂಟೇಜ್ ಗಳನ್ನು ಕೊಟ್ಟಿಲ್ಲ, ಮತ್ತು ಯಾವುದೇ ಶಿಸ್ತು ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಈ ಚುನಾವಣೆ ಅಕ್ರಮವಾಗಿರುವುದರಿಂದ, ಕೂಡಲೇ ಮತಎಣಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇತರ ಚುನಾವಣೆಗೆಗಳಿಗೆ ಮಾದರಿಯಾಗಿ ರಾಷ್ಟ್ರದ, ರಾಜ್ಯ mದ ಒಳಿತಿಗಾಗಿ ಇಡೀ 31 ಜಿಲ್ಲೆಗಳ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಪಾರದರ್ಶಕವಾದ ಪುನರ್ ಚುನಾವಣೆಗೆ ವ್ಯವಸ್ಥೆ ಮಾಡಬೇಕೆಂದು ಹೈ ಪವರ್ ಕಮಿಟಿಗೆ, ಸರ್ಕಾರಕ್ಕೆ, ರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ಮನವಿ ಮಾಡುತ್ತೇವೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಮುನಿಯಪ್ಪ ಕೋರಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರು ಚುನಾವಣಾ ಅಭ್ಯರ್ಥಿ ಬಿ.ವಿ.ರಾಮಮೂರ್ತಿ, ಹಲವು ಮಹಿಳಾ ಅಭ್ಯರ್ಥಿಗಳು ಹಾಜರಿದ್ದರು.














