ಬೆಂಗಳೂರು: ಕರ್ನಾಟಕದ ಮುಸ್ಲಿಂ ಸಮುದಾಯದ ಮುಖಂಡರನ್ನು ಕಾಂಗ್ರೆಸ್ ಪಕ್ಷ ಗುರಿಯಾಗಿಸಿಕೊಂಡು ಅವರ ವಿರುದ್ಧ ಕ್ರಮಕೈಗೊಳ್ಳುವುದು ಸರಿಯಲ್ಲ, ವಿಧಾನ ಪರಿಷತ್ ಸದಸ್ಯ ಜಬ್ಬಾರ್ ಖಾನ್ ಮತ್ತು ನಜೀರ್ ಅಹಮ್ಮದ್ ಅವರ ವಿರುದ್ಧ ಕೈಗೊಂಡಿರುವ ಕ್ರಮವನ್ನು ವಾಪಾಸ್ ಪಡೆಯದಿದ್ದರೆ ಇಡೀ ಮುಸ್ಲಿಂ ಸಮುದಾಯ ಭಾರಿ ದೊಡ್ಡ ಪ್ರಮಾಣದ ಹೋರಾಟ ನಡೆಸಲಿದೆ ಎಂದು ರಾಜ್ಯ ಉಲೇಮಾ ಮಂಡಳಿ ಎಚ್ಚರಿಕೆ ನೀಡಿದೆ.
ಬುಧವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಉಲೇಮಾ ಮಂಡಳಿ ಸಂಯೋಜಕ ಅಬ್ದುಲ್ ರಜಾಕ್, ಮೌಲಾನ ಶಾಕೀರ್ ಉಲ್ಲಾ, ಮೌಲಾನ ಸಲ್ಲಾವುದ್ದೀನ್, ಮುಸ್ಲಿಂ ಧರ್ಮದ ಗೌರವ, ಹೊಣೆಗಾರಿಕೆ ಮತ್ತು ಸ್ಪಷ್ಟ ರಾಜಕೀಯ ನಿಲುವಿನ ಒಟ್ಟುಗೂಡಿದ ಅಭಿವ್ಯಕ್ತಿಯನ್ನು
ಎಲ್ಲ ಜಿಲ್ಲೆಗಳ ಉಲೇಮಾ, ಇಮಾಮರು, ಖತೀಬರು ಮತ್ತು ಸಂಸ್ಥೆಗಳ ನಾಯಕರು ಒಟ್ಟಾಗಿ ಸೇರಿ ಪ್ರತಿಭಟಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಇರುವುದು ಮುಸ್ಲಿಂರಿಂದ ಮುಸ್ಲಿಂರು ಕಾಂಗ್ರೆಸ್ ಪಕ್ಷದ ಹಿಂದೆ ಇಲ್ಲ ಎಂದು ಹೇಳಿದರು.
ಕೆಲ ಮುಸ್ಲಿಂ ನಾಯಕರ ವಿರುದ್ಧ ನಡೆದ ಕ್ರಮಗಳು ಸಾಮಾನ್ಯ ಆಡಳಿತಾತ್ಮಕ ಕ್ರಮಗಳಲ್ಲ. ಇದು ಒಂದು ದೊಡ್ಡ ಷಡ್ಯಂತ್ರದ ಮಾದರಿಯನ್ನು ತೋರಿಸುತ್ತದೆ. ಮುಸ್ಲಿಂ ನಾಯಕರನ್ನು ಗುರಿಯಾಗಿಸುವುದು, ಅವರ ಅವಕಾಶಗಳನ್ನು ಕಡಿಮೆ ಮಾಡುವುದು, ಮತ್ತು ಕೊಟ್ಟ ಭರವಸೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ, ನಾವು ಪ್ರೇಕ್ಷಕರು ಅಲ್ಲ, ಪಾಲುದಾರರು ಎಂದು ತಿಳಿಸಿದರು.
ಈ ರಾಜ್ಯದ ಅನೇಕ ಚುನಾವಣೆಗಳ ಪಲಿತಾಂಶದಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಪ್ರಮುಖವಾಗಿದೆ. ಆ ನಂಬಿಕೆ ಈಗ ಕುಗ್ಗುತ್ತಿದೆ. ಪಕ್ಷದಿಂದ ತೆಗೆದ ಮುಸ್ಲಿಂ ನಾಯಕರನ್ನು ತಕ್ಷಣ ವಾಪಾಸ್ ಪಕ್ಷಕ್ಕೆ ಕರೆಸಿಕೊಳ್ಳಬೇಕು, ಈ ಹಿಂದೆ ಕೊಟ್ಟ ಭರವಸೆಗಳ ಬಗ್ಗೆ ಹೊಣೆಗಾರಿಕೆ ತೆಗೆದುಕೊಳ್ಳಬೇಕು. ಸುಮಾರು 3 ವರ್ಷಗಳಾದರೂ ಹಿಜಾಬ್ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ, ಶೇ4%ರಷ್ಟು ಮೀಸಲಾತಿ ವಿಚಾರ ಇನ್ನೂ ಬಾಕಿ ಇದೆ, ಗೋಹತ್ಯೆ ಮತ್ತು ಮತಾಂತರ ಕುರಿತ ಕಾನೂನುಗಳನ್ನು ತಕ್ಷಣ ಪರಿಶೀಲಿಸಿ ಸರಿಪಡಿಸಬೇಕು ಎಂದು ಹೇಳಿದರು.
ಸಮುದಾಯವನ್ನು ವಿಭಜಿಸಲು ಯಾವುದೇ ಪ್ರಯತ್ನ ಮಾಡುವುದು ಸರಿಯಲ್ಲ, ನಾವು ಅದನ್ನು ದೃಢವಾಗಿ ಎದುರಿಸುತ್ತೇವೆ. ನಾವು ಎಲ್ಲರೂ ಒಂದಾಗಿದ್ದೇವೆ. ಇದು ಅನಗತ್ಯ ಸಂಘರ್ಷವಲ್ಲ. ಈ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ನಾವು ನಮ್ಮ ರಾಜಕೀಯ ನಿಲುವನ್ನು ಮರುಪರಿಶೀಲಿಸಲು ಹಿಂದೆ ಮುಂದೆ ನೋಡುವುದಿಲ್ಲ. ಉಲೇಮಾಗಳ ತೀರ್ಮಾನವನ್ನು ಮುಂದಿನ ತಿಂಗಳು ನಡೆಯಲಿನರುವ ಆಲ್ ಕರ್ನಾಟಕ ಉಲಮಾ ಸಮ್ಮೇಳನದಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದರು.















