ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ; ಆಸ್ಪತ್ರೆ ಮುಖ್ಯಸ್ಥನ ವಿರುದ್ಧ ಎಫ್ಐಆರ್ ದಾಖಲು

WhatsApp
Telegram
Facebook
Twitter
LinkedIn

ಬೆಂಗಳೂರು: ಮಹಿಳಾ ಉದ್ಯೋಗಿಯೊಂದಿಗೆ ಲೈಂಗಿಕತೆಯ ರೀತಿಯಲ್ಲಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಯ ಮುಖ್ಯಸ್ಥನ ವಿರುದ್ಧ ಎಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 ವರ್ಷದ ಮಹಿಳೆ ನೀಡಿದ ದೂರು ಆಧರಿಸಿ ಡಾ.ಹೀಲ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವೈದ್ಯ ರಾಕೇಶ್ ಜಯಪ್ರಕಾಶ್ ಎನ್ನುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಲೈಂಗಿಕ ಅಪರಾಧ ಹಾಗೂ ಮಹಿಳೆ ಗೌರವಕ್ಕೆ ಧಕ್ಕೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಎಚ್.ಎಸ್.ಆರ್ ಲೇಔಟ್ ನಲ್ಲಿರುವ ಡಾ.ಹೀಲ್ ಆಸ್ಪತ್ರೆಯಲ್ಲಿ ಕಳೆದ 9 ತಿಂಗಳಿಂದ ದೂರುದಾರ ಮಹಿಳೆಯು ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಕೇಶ್ ಕೆಲಸ ವೇಳೆ ಮಹಿಳೆಯೊಂದಿಗೆ ಲೈಂಗಿಕವಾಗಿ ಮಾತನಾಡಿ ಅನುಚಿತ ವರ್ತನೆ ತೋರಿದ್ದ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.

ಆಸ್ಪತ್ರೆಯ ಸಮವಸ್ತ್ರ ಧರಿಸಿ ಕೆಲಸ ಮಾಡುವಾಗ ನಿನ್ನ ಎದೆಭಾಗ ನೋಡಲು ಆಗುತ್ತಿಲ್ಲ. ಬ್ಲೇಸರ್ ಹಾಕಿಕೊಂಡು ಬರುವಂತೆ ಹೇಳುತ್ತಿದ್ದ. ಕೆಲಸ ಮುಗಿಸಿ ಮನೆಗೆ ಹೋದರೂ ಮಿಸ್ ಯೂ ಎಂದು ವಾಟ್ಸಾಪ್ ನಲ್ಲಿ ಸಂದೇಶ ರವಾನಿಸುತ್ತಿದ್ದ. ಏ.3ರಂದು ಪತಿ ಜೊತೆ ಮನೆಗೆ ಹೋಗುವಾಗ ಕರೆ ಮಾಡಿ ನಿನ್ನ ಲುಕ್ ಸೂಪರ್ ಆಗಿದೆ ಎಂದು ಅನುಚಿತವಾಗಿ ಮಾತನಾಡಿದ್ದ. ಈ ರೀತಿ ಮಾತನಾಡದಂತೆ ಹಲವು ಬಾರಿ ಎಚ್ಚರಿಸಿದ್ದೆ. ಆದರೆ ನಂತರವೂ ಲೈಂಗಿಕವಾಗಿ ಮಾತನಾಡುವುದನ್ನು ಮುಂದುವರೆಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಷಯ ಪತಿಗೆ ತಿಳಿದು ಜಗಳವಾಗುತ್ತಿತ್ತು, ತದನಂತರ ಕೆಲಸ ತೊರೆದೆ. ಆದರೆ ತನ್ನೊಂದಿಗೆ ಲೈಂಗಿಕ ರೀತಿ ಅನುಚಿತವಾಗಿ ಮಾತನಾಡಿ ಹೆಣ್ಣಿನ ಗೌರವಕ್ಕೆ ಧಕ್ಕೆ ತಂದಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon