ಬೆಂಗಳೂರು: ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಅಗ್ರ 25ರಲ್ಲಿ 10 ರ್ಯಾಂಕ್ ದೀಕ್ಷಾ ವೇದಾಂತದ ಪಾಲಾಗಿವೆ.
ಜೆಇಇ, ನೀಟ್ ಮತ್ತು ಕೆಸಿಇಟಿಯಂತಹ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಜತೆಗೆ ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿಯೂ ದೀಕ್ಷಾ ವೇದಾಂತು ತನ್ನ ಯಶೋಗಾಥೆ ಮುಂದುವರಿಸಿದೆ. ವಿಜ್ಞಾನ ವಿಭಾಗದ 21 ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿಭಾಗದ 4 ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿರುವುದು ಉಲ್ಲೇಖನೀಯವಾಗಿದೆ.
ವಿಜ್ಞಾನ ವಿಭಾಗದ ಟಾಪರ್ಸ್:
ದೀಕ್ಷಾ ವೇದಾಂತು ಇಂದಿರಾನಗರದ ಸಂಜನಾ ಕಾರ್ತಿಕ್, ಮುಖ್ಯ ಕ್ಯಾಂಪಸ್ ನ ಸುಘೋಷ್ ಜೋಶಿ 596 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದುಕೊಂಡರೆ, ಇದೇ ಕ್ಯಾಂಪಸ್ನ ಕನ್ಯಾಕಾಂತಿ ಶ್ರೀ ಮೌಕ್ತಿ 595 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ್ದಾರೆ.
ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು:
ಇನ್ನು ದೀಕ್ಷಾ ವೇದಾಂತು, ಕನಕಪುರ ರಸ್ತೆಯ ಅನಘಾ ರಾಧಾಕೃಷ್ಣ ಶಾನಭೋಗ್ ಮತ್ತು ಮುಖ್ಯ ಕ್ಯಾಂಪಸ್ ನ ಸ್ಪಂದನಾ ರವೀಂದ್ರ ಭಟ್ 595/600 ಪಡೆದು 5ನೇ ರ್ಯಾಂಕ್ ಪಡೆದಿದ್ದಾರೆ. ದೀಕ್ಷಾ ವೇದಾಂತು, ಮಹಾಲಕ್ಷ್ಮಿಪುರಂ, ಯಲಹಂಕ, ಕನಕಪುರ, ಎಲೆಕ್ಟ್ರಾನಿಕ್ ಸಿಟಿಯ ಸೃಜನ್ ಬಿ. ಎಸ್, ಸಿರಿ ಜಿ. ಎಂ, ಬಿ ಪ್ರಾರ್ಥನಾ ಭಟ್, ದಿಯಾ ವಿ ನಾಯರ್ ಕ್ರಮವಾಗಿ 594/600 ಅಂಕ ಪಡೆದು 6ನೇ ರ್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಸಂಸ್ಥಾಪಕರಿಂದ ಶ್ಲಾಘನೆ:
ಉಳಿದಂತೆ ಇಂದಿರಾನಗರ ಕ್ಯಾಂಪಸ್ ನ ಶ್ರೇಯಸ್ ಪೈ 592 ಅಂಕ ಗಳಿಸಿ 8ನೇ ರ್ಯಾಂಕ್ ಗಳಿಸಿದ್ದು, ಉಳಿದಂತೆ ಹಲವು ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ 9 ನೇ ಮತ್ತು 10 ನೇ ರ್ಯಾಂಕ್ ಪಡೆದಿದ್ದಾರೆ. ಎಲ್ಲರ ಸಾಧನೆಗೆ ದೀಕ್ಷಾ ವೇದಾಂತುವಿನ ಸಂಸ್ಥಾಪಕ ಡಾ. ಶ್ರೀಧರ್ ಜಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅಧ್ಯಾಪಕರ ಶ್ರಮವನ್ನು ಶ್ಲಾಘಿಸಿದ್ದಾರೆ.















