ರಾಜ್ಯದ ಆರ್ಥಿಕತೆಯನ್ನು ಸಮರ್ಪಕವಾಗಿ ನಿಭಾಯಿಸಿದೆ: ಸಿಎಂ ಸಿದ್ದರಾಮಯ್ಯ

WhatsApp
Telegram
Facebook
Twitter
LinkedIn

ಬೆಂಗಳೂರು: ರಾಜ್ಯದ ಆರ್ಥಿಕತೆಯನ್ನು ಸಮರ್ಪಕವಾಗಿ ನಿಭಾಯಿಸಿದೆ. ಸರ್ಕಾರ ನೀಡುತ್ತಿರುವ ಅಂಕಿ-ಅಂಶಗಳು ನಿಖರ ಮತ್ತು ವಾಸ್ತವವಾಗಿದೆ. ಜಿಎಸ್‍ಟಿ ಪರಿಹಾರ ಹಾಗೂ ಕೇಂದ್ರದಿಂದ ಅನುದಾನ ಬಂದಿಲ್ಲ. ಇವೆಲ್ಲದ್ದರಿಂದ ಬಜೆಟ್ ರೆವಿನ್ಯೂ  ಡೆಪಿಸಿಟ್ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ವಿಧಾನಪರಿಷತ್ತಿನಲ್ಲಿ 2026-27ನೇ ಸಾಲಿನ ಆರ್ಥಿಕ ವರ್ಷಕ್ಕೆ ಮಂಡಿಸಿರುವ ಆಯವ್ಯಯದ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ನೀಡಿದ ಅವರು, ವಿರೋಧಪಕ್ಷದ ನಾಯಕರು ಸೇರಿದಂತೆ ಒಟ್ಟು 26 ಸದಸ್ಯರು ಸುಮಾರು 14 ಗಂಟೆ 40 ನಿಮಿಷಗಳ ಕಾಲ  ಮಾತನಾಡಿದ್ದಾರೆ. ಸದಸ್ಯರುಗಳ ಟೀಕೆ, ವಿಮರ್ಶೆ ಸಲಹೆಗಳನ್ನು ಅಭಿನಂದಿಸುತ್ತೇನೆ ಎಂದರು.

ವಿರೋಧಪಕ್ಷದವರು ಈ ಬಾರಿಯ ಬಜೆಟ್ ರೆವಿನ್ಯೂ ಡೆಫಿಸಿಟ್ ಎಂದು ಟೀಕಿಸುತ್ತಾರೆ. ಆದರೆ ಇದಕ್ಕೆ ಮೂಲ ಕಾರಣ, ಕೇಂದ್ರ ಸರ್ಕಾರವು ಹಣಕಾಸಿನ ಆಯೋಗದಲ್ಲಿ ರಾಜ್ಯಕ್ಕೆ ಮಾಡಿದ ಅನ್ಯಾಯ, ಜಿಎಸ್ ಟಿ ಪರಿಷ್ಕರಣೆಯಿಂದ 10 ಸಾವಿರ ಕೋಟಿ ಕಡಿಮೆ ಆದಾಯ, ಜೆಜೆಎಂ ನಲ್ಲಿ 15 ಸಾವಿರ ಕೋಟಿ ಖೋತಾ, ಜಿಎಸ್ ಟಿ ಪರಿಹಾರ ಸ್ಥಗಿತ ಮಾಡಿರುವುದರಿಂದ ಆಗಿದೆ ಸ್ಪಷ್ಟಪಡಿಸಿದರು.

ಕರ್ನಾಟಕಕ್ಕೆ 14 ನೇ ಹಣಕಾಸಿನ ಆಯೋಗದಲ್ಲಿ 4.713 ರಷ್ಟು ಪಾಲು ದೊರೆಕಿತ್ತು. ಆದರೆ 15 ನೇ ಹಣಕಾಸಿನ ಆಯೋಗದಲ್ಲಿ 3.647 ರಷ್ಟಾಗಿ 1.1 ರಷ್ಟ್ಟು ಕಡಿಮೆಯಾಗಿ ಅನ್ಯಾಯವಾಗಿದೆ. ಇದರಂತೆ 11495 ಕೋಟಿ ರಾಜ್ಯಕ್ಕೆ ಖೋತಾ ಆಗಿದೆ. ಕೇಂದ್ರ ಸರ್ಕಾರ 2023-24 ರಲ್ಲಿ ಭದ್ರಾ ಮೇಲ್ದಂಡೆಗೆ ಘೋಷಿಸಿದ 5300 ಕೋಟಿ ಅನುದಾನವನ್ನು ಇದುವರೆಗೂ ಬಿಡುಗಡೆ ಮಾಡಲಿಲ್ಲ. ಆಗಿದ್ದ ರಾಜ್ಯದ ಬಿಜೆಪಿ ಸರ್ಕಾರವೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವುದಾಗಿ ತಿಳಿಸಿದರು. ಆದರೆ ಈ ಯಾವ ಘೋಷಣೆಗಳು ಫಲ ಕಾಣಲಿಲ್ಲ. ಆದ್ದರಿಂದ ಸರ್ವಪಕ್ಷದ ನಿಯೋಗದಲ್ಲಿ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಮನವಿ ಮಾಡಿಕೊಳ್ಳಬೇಕಿದೆ ಎಂದರು.

ತೆರಿಗೆ ಸಂಗ್ರಹದ ಗುರಿಗಳು ಅವೈಜ್ಞಾವಿಕವಾಗಿದೆ ಎಂದು ಟೀಕೆ ಬಂದಿದೆ. 2025-26 ರಲ್ಲಿ ಗುರಿಯು 120,000 ಕೋಟಿ, 2026-27 ರಲ್ಲಿ 1,25,000 ಕೋಟಿ, 2025-26 ರಲ್ಲಿ ಅಬಕಾರಿ ತೆರಿಗೆ 40 ಸಾವಿರ ಕೋಟಿ, 2026-27 ಕ್ಕೆ 45 ಸಾವಿರ ಕೋಟಿ, ನೋಂದಣಿ ಇಲಾಖೆಯಡಿ 2026-27 ಕ್ಕೆ 29,000 ಕೋಟಿ, ಮೋಟಾರು ವಾಹನ ತೆರಿಗೆಗೆ 15,500 ಕೋಟಿ ರೂ.ಗಳ  ಗುರಿಯನ್ನು ನೀಡಲಾಗಿದ್ದು, ಅವೈಜ್ಞಾನಿಕ ಗುರಿ ನಿಗದಿ ಮಾಡಿಲ್ಲ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಸಾಲ ಮಾಡಬೇಕಾಗಿ ಬಂದಿದೆ ಎಂದು ಟೀಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಶಕ್ತಿ ತುಂಬಲಾಗಿದೆ. ಸಮಾಜದ ಮನುವಾದದ ಪ್ರಕಾರ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಶಿಕ್ಷಣ ಶಕ್ತಿ ದೊರೆತಿರಲಿಲ್ಲ. ಪ್ರಧಾನಿ ಮೋದಿ ಅವರು ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಮಾಡಿದ್ದಾರೆ. ನಾವು ಸಂಪನ್ಮೂಲ ಕ್ರೋಡೀಕರಣಕ್ಕೆ ಕೆಲವೊಂದು ಬೆಲೆ ಏರಿಸಿದ್ದರೂ ಕೂಡ, ವಿವಿಧ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ದರ ಏರಿಕೆ ಕಡಿಮೆಯೇ ಇದೆ ಎಂದರು.

ಗ್ಯಾರಂಟಿಗಳಿಗೆ 2026-27 ರಲ್ಲಿ  51,286 ಕೋಟಿ ನಿಗದಿಪಡಿಸಲಾಗಿದೆ. ಮಾರ್ಚ್ 2026ರವರೆಗೆ 1,31,000 ಕೋಟಿ ಗ್ಯಾರಂಟಿಗಳಿಗೆ ನೀಡಲಾಗಿದೆ. ಇದರಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಟೀಕಿಸುತ್ತಾರೆ. ಆದರೆ 2025-26 ರಲ್ಲಿ ಬಂಡವಾಳ ವೆಚ್ಚ 83,200 ಕೋಟಿ ಇಡಲಾಗಿದ್ದು, 2026-27 ರಲ್ಲಿ ಸುಮಾರು 84,567 ಕೋಟಿ ಗಳನ್ನು ಬಂಡವಾಳ ವೆಚ್ಚಕ್ಕೆ ಇಡಲಾಗಿದೆ. ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ನಮಗಿಂತ ಕಡಿಮೆ ಬಂಡವಾಳ ವೆಚ್ಚವಿದೆ. ನಮ್ಮ ಸರ್ಕಾರ ಅಭಿವೃದ್ಧಿಯ ನೀರಾವರಿ, ಸಮಾಜ ಕಲ್ಯಾಣ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಿಗೆ ಅನುದಾನವನ್ನು ಕಡಿಮೆ ಮಾಡಿಲ್ಲ. ನಮ್ಮ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು, ನಮ್ಮ ಗ್ಯಾರಂಟಿಗಳನ್ನೇ ಇತರೆ ರಾಜ್ಯಗಳಲ್ಲಿ ಅನುಸರಿಸಿದ್ದಾರೆ ಎಂದು ಹೇಳಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon