ಕೇಂದ್ರೀಯ ವಿದ್ಯಾಲಯದ ಪ್ರವೇಶಾತಿ ಅರ್ಜಿಗಳು ಆನ್‌ಲೈನ್‌ನಲ್ಲಿ ಲಭ್ಯ

WhatsApp
Telegram
Facebook
Twitter
LinkedIn

ನವದೆಹಲಿ: 2026-27ನೇ ಸಾಲಿನ ಕೇಂದ್ರೀಯ ವಿದ್ಯಾಲಯದ 1ನೇ ತರಗತಿ ಮತ್ತು ನರ್ಸರಿ ಪ್ರವೇಶಾತಿ ಅರ್ಜಿಗಳು ಮಾರ್ಚ್ 20 ರಿಂದ ಆನ್‌ಲೈನ್‌ನಲ್ಲಿ ಲಭ್ಯವಿವೆ. ಏಪ್ರಿಲ್ 2 ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿದೆ.

2026ರ ಮಾರ್ಚ್ 31 ಕ್ಕೆ ಮಗುವಿಗೆ 6 ವರ್ಷ ವಾಗಿರಬೇಕು. ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ಆದ್ಯತೆ ಇರುತ್ತದೆ. ಆಯ್ಕೆ ಪಟ್ಟಿ ಏಪ್ರಿಲ್ 8 ಅಥವಾ 9 ರಂದು ಬಿಡುಗಡೆಯಾಗಲಿದೆ. ಉಳಿದ ಸೀಟುಗಳನ್ನು ವಿವಿಧ ಕೋಟಾಗಳು ಮತ್ತು ಸರ್ಕಾರದ ಮೀಸಲಾತಿ ನಿಯಮಗಳ ಅಡಿಯಲ್ಲಿ ಭರ್ತಿ ಮಾಡಲಾಗಲಿದೆ. ಪ್ರವೇಶಾತಿಯ ಸಂಬಂಧ ಏಪ್ರಿಲ್  16 ರಂದು ಬಿಡುಗಡೆಯಾಗುವ ಎರಡನೇ ಪಟ್ಟಿ ಮತ್ತು ಏಪ್ರಿಲ್ 21 ರಂದು ಬರುವ ಮೂರನೇ ಪಟ್ಟಿಯನ್ನು ಗಮನಿಸಬಹುದಾಗಿದೆ.

ಕೇವಲ ಒಂದನೇ ತರಗತಿಗೆ ಮಾತ್ರ ಆನ್‌ಲೈನ್‌ ಅರ್ಜಿಗಳು ಲಭ್ಯವಿವೆ. 2ನೇ ತರಗತಿಯಿಂದ 9ನೇ ತರಗತಿಯವರೆಗೆ (11ನೇ ತರಗತಿ ಹೊರತುಪಡಿಸಿ) ಪ್ರವೇಶ ಪಡೆಯಲು ಆಯಾ ಶಾಲೆಗಳಲ್ಲಿ ಖಾಲಿ ಇರುವ ಸೀಟುಗಳ ಆಧಾರದ ಮೇಲೆ ಏಪ್ರಿಲ್ 2 ರಿಂದ 8 ರವರೆಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ತರಗತಿಗಳ ಆಯ್ಕೆ ಪಟ್ಟಿ ಏಪ್ರಿಲ್ 13 ರಂದು ಪ್ರಕಟವಾಗಲಿದ್ದು, ಏಪ್ರಿಲ್ 15 ರಿಂದ 20 ರ ನಡುವೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.

ಹತ್ತನೇ ತರಗತಿಯ ಫಲಿತಾಂಶ ಬಂದ 10 ದಿನಗಳ ನಂತರ 11ನೇ ತರಗತಿಯ ನೋಂದಣಿ ಆರಂಭವಾಗಲಿದೆ. ಒಟ್ಟಾರೆ ಪ್ರವೇಶಾತಿ ಪ್ರಕ್ರಿಯೆಯು ಜೂನ್ 30 ಕ್ಕೆ ಮುಕ್ತಾಯಗೊಳ್ಳಲಿದ್ದು, ವಿಶೇಷ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ವಿವೇಚನೆಯ ಮೇರೆಗೆ ಜುಲೈ 7 ರವರೆಗೆ ಸೀಟುಗಳನ್ನು ಭರ್ತಿ ಮಾಡಲು ಅವಕಾಶವಿದೆ.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon