ಎನ್.ಹೆಚ್.ಪಿ.ಸಿ ಯಿಂದ ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp
Telegram
Facebook
Twitter
LinkedIn

ಫರೀದಾಬಾದ್: ರಾಷ್ಟ್ರೀಯ ಜಲ ವಿದ್ಯುತ್ ನಿಗಮದ ವತಿಯಿಂದ 81 ಟ್ರೈನಿ ಇಂಜಿನಿಯ‌ರ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ 50,000-1,60,000 ಪೇ ಬ್ಯಾಂಡ್ ಅನ್ವಯ ವೇತನ ದೊರೆಯಲಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 6 ಕೊನೆಯ ದಿನವಾಗಿದೆ.

30 ವರ್ಷದೊಳಗಿನವರು ಈ ಹುದ್ದೆಗಳಿಗೆ ಅರ್ಹರಾಗಿದ್ದು, ಅಭ್ಯರ್ಥಿಗಳ ಆಯ್ಕೆಯು ಮುಖ್ಯವಾಗಿ ಗೇಟ್-2024 ಅಥವಾ 2025 ರ ಅಂಕಗಳು, ಗ್ರೂಪ್ ಡಿಸ್ಕಶನ್ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.

ಎಸ್.ಸಿ, ಎಸ್.ಟಿ ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ, ಆದರೆ ಇತರ ಅಭ್ಯರ್ಥಿಗಳು 708 ರೂಪಾಯಿಗಳನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕಿದೆ. ಅಭ್ಯರ್ಥಿಗಳು ಎನ್.ಹೆಚ್ ಪಿ.ಸಿ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

 

 

 

 

 

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon