ಪಾಚಿ ಅಂಟಿದ ಕಲ್ಲುಗಳಂತಾಗಿರುವ ಬೆಳಗಾವಿ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು!

WhatsApp
Telegram
Facebook
Twitter
LinkedIn

ಸಾಗರ ಕೃಷ್ಣಾ ಕೋಳೆಕರ, ಸಂಪಾದಕರು

ಸರ್ಕಾರಿ ವ್ಯವಸ್ಥೆಯಲ್ಲಿ ಒಬ್ಬ ಅಧಿಕಾರಿಯ ಮೇಲೆ ಮತ್ತೊಬ್ಬ ಅಧಿಕಾರಿ, ಮತ್ತೊಬ್ಬರ ಮೇಲೆ ಮೇಲಧಿಕಾರಿ ಈ ವ್ಯವಸ್ಥೆ ರೂಪಿಸಿರುವ ಉದ್ದೇಶ ಕೆಳ ಹಂತದಲ್ಲಿ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಮೇಲಧಿಕಾರಿಗಳು ನಿಗಾ ವಹಿಸಬೇಕು ಎನ್ನುವುದಾಗಿದೆ. ಆದರೆ ಬೆಳಗಾವಿ ಜಿಲ್ಲಾ ಪಂಚಾಯತ್‌ನಲ್ಲಿ ಕೆಲವೊಂದು ವಿಚಾರಗಳಿಗೆ  ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇದು ನನ್ನ ಕೆಲಸವಲ್ಲ, ನನ್ನ ಹತ್ತಿರ ಇದಕ್ಕೆ ಉತ್ತರವಿಲ್ಲ ಎನ್ನುವ ಸಬೂಬುಗಳು ಕೇಳಿಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳ ನಿಖರ ಜವಾಬ್ದಾರಿ ಏನು ಅವರ ಅಧೀನದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಯಾರು ಪರಿಶೀಲಿಸಬೇಕು? ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಅಧಿಕಾರಿಗಳ ನಡುವಿನ ಸಮನ್ವಯದ ಜವಾಬ್ದಾರಿ ಯಾರದ್ದು? ಎನ್ನುವ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲದಾಗಿದೆ.

ಅಧಿಕಾರ, ಸರ್ಕಾರಿ ಸೌಲಭ್ಯ, ದೊಡ್ಡ ಕಚೇರಿ, ಅಧೀನ ಸಿಬ್ಬಂದಿ ಇವೆಲ್ಲವೂ ಸಾರ್ವಜನಿಕರ ತೆರಿಗೆಯ ಹಣದಿಂದಲೇ ನಡೆಯುವ ಆಡಳಿತ ವ್ಯವಸ್ಥೆಯ ಭಾಗವಾಗಿವೆ. ಹಾಗಿದ್ದಾಗ ಜವಾಬ್ದಾರಿ ಬಂದಾಗ ಮಾತ್ರ ಇದು ನನ್ನ ಕೆಲಸವಲ್ಲ ಎಂದು ಹೇಳುವುದು ಸರಿಯಾದ ಆಡಳಿತ ಪದ್ಧತಿಯೇ? ಎನ್ನುವ ಪ್ರಶ್ನೆ ಮೂಡುತ್ತಿದೆ. ಈ ಪ್ರಶ್ನೆ ಯಾರನ್ನೂ ವೈಯಕ್ತಿಕವಾಗಿ ಗುರಿಯಾಗಿಸುವುದ್ದಕ್ಕಾಗಿದೆ ಕೇಳಲಾಗುತ್ತಿಲ್ಲ. ಹುದ್ದೆಗೆ ಇರುವ ಜವಾಬ್ದಾರಿ ಮತ್ತು ಆ ಜವಾಬ್ದಾರಿಯ ಅನುಷ್ಠಾನದ ಬಗ್ಗೆ ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಯಾಗಿದೆ.

ಪಾಚಿ ಕಟ್ಟಿಕೊಂಡ ಕಲ್ಲು ನೀರು ಬಂದಾಗ ಜಾರಿಬೀಳುವಂತೆ, ಜವಾಬ್ದಾರಿ ಬಂದಾಗ ಅಧಿಕಾರಿಗಳೂ ಪರಸ್ಪರ ಜಾರಿಕೊಳ್ಳುತ್ತಿದ್ದರೆ ಆಡಳಿತ ವ್ಯವಸ್ಥೆಯ ಉತ್ತರದಾಯಿತ್ವ ಎಲ್ಲಿಗೆ ಹೋಗಿ ಮುಟ್ಟುತ್ತದೆ? ಬೆಳಗಾವಿ ಜಿಲ್ಲಾ ಪಂಚಾಯತ್‌ನ ಹಿರಿಯ ಅಧಿಕಾರಿಗಳು ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಬೇಕಾಗಿದೆ. ಸರ್ಕಾರಿ ಹುದ್ದೆ ಎಂದರೆ ಕೇವಲ ಕಚೇರಿಗೆ ಬಂದು ಕುಳಿತುಕೊಳ್ಳುವುದಲ್ಲ; ಹುದ್ದೆಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುವುದೂ ಅದರಷ್ಟೇ ಮುಖ್ಯ ಎನ್ನುವುದು ಪ್ರಜಾನೆರಳು ಪತ್ರಿಕೆಯ ಕಳಕಳಿಯಾಗಿದೆ.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon