ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ, ಭ್ರಷ್ಟರ ವಿರುದ್ಧ ಹೋರಾಟ ನಿರಂತರ: ಇದು ಪ್ರಜಾ ನೆರಳು ಶಪಥ

WhatsApp
Telegram
Facebook
Twitter
LinkedIn

ಬೆಳಗಾವಿ,: ಪ್ರಜಾ ನೆರಳು ದಿನಪತ್ರಿಕೆಯ ಪ್ರತಿಷ್ಠೆ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಭ್ರಷ್ಟರಿಗೆ ಆತಂಕ ಹೆಚ್ಚಾಗತೊಡಗಿದೆ. ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಕ್ರಮಗಳನ್ನು ಆಗಾಗ ಬಯಲಿಗೆ ಎಳೆಯುತ್ತಿರುವ ಪ್ರಜಾ ನೆರಳು ಪತ್ರಿಕೆಯು ಜನಮಾನಸದಲ್ಲಿ ಗೌರವದ ಸ್ಥಾನಮಾನ ಪಡೆದುಕೊಂಡಿದೆ. ಆದರೆ ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಯ ಭ್ರಷ್ಟ ಅಧಿಕಾರಿಗಳು ಪತ್ರಿಕೆಯ ವಿರುದ್ಧ ಇಲ್ಲಸಲ್ಲದ, ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.ತಾವು ಮಾಡಿರುವ ಅಕ್ರಮಗಳು ಬಯಲಿಗೆ ಬಂದು ಬಿಡುತ್ತವೆ ಎಂಬ ಭಯದಿಂದ ಈ ಭ್ರಷ್ಟರು ಪತ್ರಿಕೆಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಆಧಾರವಿಲ್ಲದೆ ಕಪೋಲಕಲ್ಪಿತ ಆರೋಪಗಳನ್ನು ಇವರು ಮಾಡುತ್ತಿದ್ದಾರೆ. ಇಂಥ ಭ್ರಷ್ಟರ ಆರೋಪಗಳಿಗೆ ಪತ್ರಿಕೆಯು ಜಗ್ಗದೆ, ಬಗ್ಗದೆ ನಿರಂತರವಾಗಿ ಹೋರಾಡಲಿದೆ ಎಂದು ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇವೆ. ಈಗಾಗಲೇ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿರುವ ಪ್ರಜಾ ನೆರಳು ದಿನಪತ್ರಿಕೆಯ ತನ್ನ ಹೋರಾಟವನ್ನು ಮತ್ತಷ್ಟು ಜಿದ್ದಿನಿಂದ ಮಾಡಲಿದೆ. ಅತ್ಯಂತ ಶಕ್ತಿಶಾಲಿಯಾಗಿರುವ ಮಾಧ್ಯಮದ ಮೂಲಕ ಸಮಾಜದಲ್ಲಿ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಬೆಳೆದು ನಿಂತಿರುವ ಪ್ರಜಾ ನೆರಳು ದಿನಪತ್ರಿಕೆಯ ಅಗಾಧ ಪರಿಣಾಮವನ್ನು ಸಹಿಸದ ಭ್ರಷ್ಟರು ಅವರು ದೊಡ್ಡವರು ಇವರು ಚಿಕ್ಕವರು ಎಂದು ಹೇಳುತ್ತ ಸಮಾಜದಲ್ಲಿ ಭೇದಭಾವ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದೇನೇ ಇರಲಿ.. ಈ ಭ್ರಷ್ಟರ ವಿರುದ್ಧ ಪತ್ರಿಕೆಯು ಕಾನೂನಾತ್ಮಕವಾಗಿ ಹೋರಾಡಲಿದೆ ಹಾಗೂ ಇವರ ವಿರುದ್ಧ ಮಾನಹಾನಿ ಮೊಕದ್ದಮೆಯನ್ನು ಕೂಡ ದಾಖಲಿಸಲಿದೆ.

ನಾಯಿ ಬೊಗಳುತ್ತಿರಲಿ.. ನಮ್ಮ ಗುರಿ ಸ್ಪಷ್ಟವಾಗಿದೆ. ಭ್ರಷ್ಟರ ವಿರುದ್ಧ ಹೋರಾಟ ಇನ್ನಷ್ಟು ಜೋರಾಗಿ ಮುಂದುವರಿಯಲಿದೆ. – ಶ್ರೀ ಸಾಗರ ಕೋಳೇಕರ, ಸಂಪಾದಕರು, ಪ್ರಜಾ ನೆರಳು ದಿನ ಪತ್ರಿಕೆ, ಬೆಳಗಾವಿ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon