ಸಮಗ್ರ ಪಾರ್ಶ್ವವಾಯು, ಎದೆನೋವು ಕೇಂದ್ರದ ಮಾನ್ಯತೆ ಪಡೆದ ಅಪೋಲೋ ಆಸ್ಪತ್ರೆೆ

WhatsApp
Telegram
Facebook
Twitter
LinkedIn

ಬೆಂಗಳೂರು: ಅಪೋಲೋ ಆಸ್ಪತ್ರೆೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ವತಿಯಿಂದ ಸಮಗ್ರ ಪಾರ್ಶ್ವವಾಯು ಹಾಗೂ ಎದೆನೋವು ಕೇಂದ್ರ ಎಂಬ ಎರಡು ಪ್ರತಿಷ್ಠಿತ ಪ್ರಮಾಣೀಕರಣ ಪಡೆದ ಭಾರತದ ಮೊದಲ ಆಸ್ಪತ್ರೆೆಯಾಗಿ ಹೊರಹೊಮ್ಮಿದೆ.

ಈ ಕುರಿತು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಇಂಟರ್‌ನ್ಯಾಷನಲ್ ಕಮಿಟಿಯ ನಿಯೋಜಿತ ಅಧ್ಯಕ್ಷ ಡಾ. ಡಿ.ಪಿ. ಸುರೇಶ್ ಮಾತನಾಡಿ, ಪಾರ್ಶ್ವವಾಯು ಮತ್ತು ಹೃದಯಾಘಾತದ ಸಂದರ್ಭದಲ್ಲಿ ಸಕಾಲಿಕ ಚಿಕಿತ್ಸೆೆ ಹಾಗೂ ಸಂಘಟಿತ ವೈದ್ಯಕೀಯ ಸೇವೆ ರೋಗಿಗಳ ಚೇತರಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಜೀವಕ್ಕೆೆ ಅಪಾಯಕಾರಿ ತುರ್ತು ಪರಿಸ್ಥಿತಿಗಳ ನಿರ್ವಹಣೆಯಲ್ಲಿ ಆಸ್ಪತ್ರೆೆಯ ಸನ್ನದ್ಧತೆ, ವೇಗದ ರೋಗನಿರ್ಣಯ, ಚಿಕಿತ್ಸೆೆ ಹಾಗೂ ಬಹುಶಿಸ್ತಿನ ವೈದ್ಯಕೀಯ ತಂಡಗಳ ಸಮನ್ವಯ ಸ್ವತಂತ್ರವಾಗಿ ಮೌಲ್ಯಮಾಪನ ಮಾಡಿದ ಬಳಿಕ ಈ ಮಾನ್ಯತೆ ನೀಡಲಾಗಿದೆ ಎಂದರು.

ಅಪೋಲೋ ಆಸ್ಪತ್ರೆೆಯ ತುರ್ತು ನಿಗಾ ವಿಭಾಗದ ಪ್ರಾಾದೇಶಿಕ ನಿರ್ದೇಶಕ ಡಾ.ಎ.ಎನ್. ವೆಂಕಟೇಶ್ ಮಾತನಾಡಿ, ತುರ್ತು ಪರಿಸ್ಥಿತಿಗಳಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯವಾಗಿದ್ದು, ಹಲವು ವರ್ಷಗಳಿಂದ ರೂಪಿಸಿಕೊಂಡಿರುವ ಪರಿಣಾಮಕಾರಿ ತುರ್ತು ಸ್ಪಂದನಾ ವ್ಯವಸ್ಥೆೆಯ ಫಲವಾಗಿ ಈ ಮಾನ್ಯತೆ ದೊರೆತಿದೆ. ಭಾರತದಲ್ಲಿ ಪಾರ್ಶ್ವವಾಯು ಸಾವಿನ ನಾಲ್ಕನೇ ಪ್ರಮುಖ ಕಾರಣವಾಗಿದ್ದು, ಹೃದಯ ಸಂಬಂಧಿ ಕಾಯಿಲೆ 30 ರಿಂದ 69 ವರ್ಷದೊಳಗಿನ ವಯಸ್ಕರ ಸಾವುಗಳಲ್ಲಿ ಶೇ.36ರಷ್ಟು ಪಾಲು ಹೊಂದಿವೆ. ಈ ಹಿನ್ನೆೆಲೆಯಲ್ಲಿ ತುರ್ತು ಆರೈಕೆಯ ಗುಣಮಟ್ಟ ಮತ್ತು ಚಿಕಿತ್ಸಾ ಸಮಯ ಕಡಿಮೆಗೊಳಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ  ಡಾ. ಡಿ.ಪಿ. ಸುರೇಶ್ ಅಪೋಲೋ ಆಸ್ಪತ್ರೆೆಗೆ ಅಮೆರಿಕನ್ ಹಾರ್ಟ್ ಅಸೋಸಿಯೇಷ್‌ನ್‌ನ ದ್ವಿತೀಯ ಪ್ರಮಾಣೀಕರಣ ಪತ್ರ ವಿತರಿಸಿದರು. ಈ ವೇಳೆ ಡಾ.ಎ.ಎನ್. ವೆಂಕಟೇಶ್ ಸೇರಿದಂತೆ ಇನ್ನಿತರರು ಇದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon