ಬೆಂಗಳೂರು: ಉನ್ನತ ಶಿಕ್ಷಣ ಮತ್ತು ಉದ್ಯೋಗ ಕುರಿತು ಮಾಹಿತಿ ನೀಡುವ ಕರ್ನಾಟಕ ಎಜುಕೇಶನ್ ಸರ್ವಿಸ್ ಸಂಸ್ಥೆಯಿಂದ ನೂತನ ಆರಂಭವಾಗಿರುವ ಕರ್ನಾಟಕ ಶಿಕ್ಷಣ ಮತ್ತು ಕೆರಿಯರ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಜೆಪಿ ನಗರದಲ್ಲಿ ಚಾಲನೆ ನೀಡಲಾಯಿತು. ಈ ಕುರಿತ ಮಾಹಿತಿ ಕಾರ್ಯಾಗಾರ ಕೂಡ ಮಂಗಳವಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ, ಅಭಿಯಾನ ಮತ್ತು ವೆಬ್ ಸೈಟ್ ಗೆ ಚಾಲನೆ ನೀಡಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ್, ಶಹನಾ ಅವರು ಆರಂಭಿಸಿರುವ ಶಿಕ್ಷಣ ಕುರಿತು ಮಾಹಿತಿ ನೀಡುವ ವೆಬ್ ಸೈಟ್ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿದೆ. ಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದ ಸ್ಕಾಲರ್ ಶಿಪ್ ವಿವರವನ್ನು ವೆಬ್ ಸೈಟ್ ಮೂಲಕ ತಿಳಿದುಕೊಳಬಹುದಾಗಿದೆ. ಸ್ಕಾಲರ್ ಶಿಪ್ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಮಾಹಿತಿ ಕೂಡ ಇಲ್ಲಿ ಪಡೆಯಬಹುದಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾಭ್ಯಾಸಕ್ಕಾಗಿ ಅನೇಕ ರೀತಿಯ ಸಾಲ ಸೌಲಭ್ಯ ಒದಗಿಸಿರುವ ಮಾಹಿತಿ ಕೂಡ ಇಲ್ಲಿದೆ ಎಂದು ತಿಳಿಸಿದರು.
ಪುಟ್ಟೇನಹಳ್ಳಿ ಪೋಲಿಸ್ ಠಾಣೆಯ ಇನ್ಸ್ ಸ್ಪೆಕ್ಟರ್ ಕಾರ್ಯಕ್ರಮದಲ್ಲಿ ಮಾತನಾಡಿ, ಕಡು ಬಡತನದಿಂದ ಒದುತ್ತಿರುವ ವಿದ್ಯಾರ್ಥಿಗಳಿಗೆ ಈ ವೆಬ್ ಸೈಟ್ ಅನುಕೂಲವಾಗಲಿದೆ. ಉದ್ಯೋಗ ಮಾಹಿತಿ, ಸ್ಕಾಲರ್ ಶಿಪ್, ಮೀಸಲಾತಿ ವಿವರ, ಶಿಕ್ಷಣ ಸಾಲದ ಕುರಿತ ಮಾಹಿತಿಗಳ ವಿವರ ಒಂದೇ ಕಡೆ ಸಿಗುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು
ಅಭಿಯಾನದ ಮುಖ್ಯಸ್ಥೆ ಶಹನಾ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗ ಕುರಿತು ಮಾಹಿತಿ ನೀಡಲು ಕರ್ನಾಟಕ ಶಿಕ್ಷಣ ಸರ್ವಿಸ್ ಸಂಸ್ಥೆಯಿಂದ ಈ ಅಭಿಯಾನ ಆರಂಭಿಸಲಾಗಿದೆ. ಆನ್‌ಲೈನ್ ವೆಬ್ ಸೈಟ್ ನಲ್ಲಿ ಎಲ್ಲಾ ಮಾಹಿತಿ ಉಚಿತವಾಗಿ ದೊರೆಯುತ್ತದೆ. ವಿದ್ಯಾರ್ಥಿಗಳು ಈ ವೆಬ್ ಸೈಟ್ ನಲ್ಲಿ ಶಿಕ್ಷಣ ಕುರಿತು ಸಮಗ್ರ ಮಾಹಿತಿ ಪಡೆಯಬಹುದಾಗಿದೆ. ಉನ್ನತ ಶಿಕ್ಷಣ ಪಡೆಯಲು ಬೇಕಾದ ಶುಲ್ಕ ಮಾಹಿತಿ, ವಿದ್ಯಾರ್ಥಿ ವೇತನ, ಮೀಸಲಾತಿ ವಿವರ, ಉದ್ಯೋಗ ಮಾಹಿತಿಯನ್ನು ಇದರ ಮೂಲಕ ತಿಳಿದುಕೊಳ್ಳಬಹುದಾಗಿದೆ. ನಮ್ಮ ಹೊಸ ಅಧಿಕೃತ ವೆಬ್ಸೈಟ್ ಮೂಲಕ ಎಲ್ಲಾ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕರ್ನಾಟಕ ಶಿಕ್ಷಣ ಸರ್ವಿಸ್ ಸಂಸ್ಥೆಯ ಅಭಿಯಾನದ ಕಾರ್ಯಾಗಾರದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.















