ವರ್ಲ್ಡ್ 10ಕೆ ಮ್ಯಾರಥಾನ್; ಈ ಬಾರಿ ಕಣದಲ್ಲಿರುವ ತಾರಾ ಅಥ್ಲೀಟ್‌ಗಳ ಪಟ್ಟಿ ಹೀಗಿದೆ

WhatsApp
Telegram
Facebook
Twitter
LinkedIn

ಬೆಂಗಳೂರು: 18ನೇ ಆವೃತ್ತಿಯ ವರ್ಲ್ಡ್ 10ಕೆ ಮ್ಯಾರಥಾನ್‌ಗಾಗಿ ವಿಶ್ವದ ಅತ್ಯುತ್ತಮ ಓಟಗಾರರು ಮತ್ತೊಮ್ಮೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬರಲಿದ್ದಾರೆ. ನಾಳೆ ನಡೆಯಲಿರುವ ರೇಸ್‌ನಲ್ಲಿ ಪುರುಷರ ವಿಭಾಗದಲ್ಲಿ ಉಗಾಂಡದ ಹರ್ಬರ್ಟ್ ಕಿಬೆಟ್, ಮಹಿಳಾ ವಿಭಾಗದಲ್ಲಿ ಸಾರಾ ಚೆಲಾಂಗಟ್ ಅವರುಗಳು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ಮಾನ್ಯತೆ ಪಡೆದಿರುವ ಈ ರೇಸ್ ಒಟ್ಟು 2,10,000 ಯುಎಸ್ ಡಾಲರ್ ಬಹುಮಾನದ ಮೊತ್ತ ಹೊಂದಿದೆ. ಪುರುಷರ ವಿಭಾಗದಲ್ಲಿ ಉಗಾಂಡದ 20 ವರ್ಷದ ಉದಯೋನ್ಮುಖ ತಾರೆ ಹರ್ಬರ್ಟ್ ಕಿಬೆಟ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ವರ್ಷ ಸ್ಪೇನ್‌ನ ಕ್ಯಾಸ್ಟೆಲೊನ್‌ನಲ್ಲಿ ನಡೆದ ರೇಸ್‌ನಲ್ಲಿ ಕಿಬೆಟ್ 26:39 ಸಮಯದಲ್ಲಿ ಗುರಿ ತಲುಪುವ ಮೂಲಕ ವಿಶ್ವದ ಗಮನ ಸೆಳೆದಿದ್ದರು.

ಇನ್ನು ​ಕಿಬೆಟ್‌ಗೆ ಇಥಿಯೋಪಿಯಾದ ಖೈರಿ ಬೆಜಿಗಾ (26:51), ಬುರುಂಡಿಯ ರೊಡ್ರಿಗಸ್ ಕ್ವಿಜೆರಾ ಮತ್ತು ಇಥಿಯೋಪಿಯಾದ ಗೆಮೆಚು ಡಿಡಾ ಅವರು ಪ್ರಬಲ ಪೈಪೋಟಿಯೊಡ್ಡಲಿದ್ದಾರೆ. ಇವರೊಂದಿಗೆ ಎರಡು ಬಾರಿಯ ವರ್ಲ್ಡ್ 5000 ಮೀಟರ್ ಚಾಂಪಿಯನ್ ಮುಕ್ತಾರ್ ಇದ್ರಿಸ್ ಕೂಡ ಕಣದಲ್ಲಿದ್ದಾರೆ.

ಬೆಂಗಳೂರಿನ ಹಾಲಿ ಕೋರ್ಸ್ ದಾಖಲೆಯಾದ 27:38 ಗಿಂತಲೂ ಕಡಿಮೆ ಸಮಯದಲ್ಲಿ ರೇಸ್ ಮುಗಿಸಿದ ದಾಖಲೆ ಹೊಂದಿರುವ 11 ಅಥ್ಲೀಟ್‌ಗಳು ಈ ಬಾರಿ ಸ್ಪರ್ಧಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಮಹಿಳಾ ವಿಭಾಗದಲ್ಲಿ ಹಾಲಿ ಚಾಂಪಿಯನ್, ಉಗಾಂಡದ ಸಾರಾ ಚೆಲಾಂಗಟ್ ಮತ್ತೊಮ್ಮೆ  ಪ್ರಶಸ್ತಿ ಗೆಲ್ಲಲು ಸಜ್ಜಾಗಿದ್ದಾರೆ.ಕಳೆದ ವರ್ಷ 31:07 ಸಮಯದಲ್ಲಿ ಗುರಿ ತಲುಪುವ ಮೂಲಕ ಅವರು ಚಾಂಪಿಯನ್ ಆಗಿದ್ದರು. ಒಂದು ವೇಳೆ ಈ ಬಾರಿಯೂ ಸಾರಾ ಗೆಲುವು ಸಾಧಿಸಿದರೆ ಅಗ್ನಸ್ ಟಿರೋಪ್ (2018-19) ನಂತರ ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಎರಡನೇ ಓಟಗಾರ್ತಿ ಎನಿಸಿಕೊಳ್ಳಲಿದ್ದಾರೆ.

ಸಾರಾಗೆ ಈ ಬಾರಿ ಕೀನ್ಯಾದ ಓಟಗಾರ್ತಿಯರಿಂದ ತೀವ್ರ ಪೈಪೋಟಿ ಎದುರಾಗಲಿದೆ. ಈವರೆಗೆ ನಡೆದ 15 ಮಹಿಳಾ ಟೈಟಲ್‌ಗಳಲ್ಲಿ 10 ಅನ್ನು ಕೀನ್ಯಾ ಆಟಗಾರ್ತಿಯರೇ ಗೆದ್ದಿದ್ದಾರೆ. ವ್ಯಾಲೆನ್ಸಿಯಾ 10K ವಿಜೇತೆ ಬ್ರೆಂಡಾ ಜೆಪ್‌ಚಿರ್ಚಿರ್ (29:25), 2024ರ ಬೆಂಗಳೂರು ಚಾಂಪಿಯನ್ ಲಿಲಿಯನ್ ರೆಂಗೆರುಕ್ ಕಾಸೈಟ್, ಮತ್ತು ವಿಶ್ವ ಸ್ಟೀಪಲ್‌ಚೇಸ್ ದಾಖಲೆ ಹೊಂದಿರುವ ಬಿಯಾಟ್ರಿಸ್ ಚೆಪ್‌ಕೋಚ್ ಈ ಬಾರಿ ಕಣದಲ್ಲಿರುವ ಇತರ ಪ್ರಮುಖರಾಗಿದ್ದಾರೆ. ಕಳೆದ ಬಾರಿ ಬೆಳ್ಳಿ ಪದಕ ಗೆದ್ದಿದ್ದ ಸಿಂಥಿಯಾ ಕೂಡ ಈ ಬಾರಿ ರೇಸ್‌ನ ಮೆರುಗನ್ನ ಮತ್ತಷ್ಟು ಹೆಚ್ಚಿಸಲಿದ್ದಾರೆ.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon