75 ವರ್ಷಗಳ ಸೇವಾ ಪಯಣವನ್ನು ಟಿಎಎಐ ಸಂಭ್ರಮಿಸುತ್ತಿದೆ: ಸುನಿಲ್ ಕುಮಾರ್

WhatsApp
Telegram
Facebook
Twitter
LinkedIn

ಬೆಂಗಳೂರು: ಭಾರತದ ಪ್ರಮುಖ ಹಾಗೂ ಪ್ರತಿಷ್ಠಿತ ಪ್ರವಾಸೋದ್ಯಮ ಸಂಸ್ಥೆಯಾದ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಯಶಸ್ವಿ 75 ವರ್ಷಗಳ ಸೇವಾ ಪಯಣವನ್ನು ಸಂಭ್ರಮಿಸುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಾಲ್ಕು ವರ್ಷಗಳ ನಂತರ ಅಂದರೆ 1951 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಇಂದು ದೇಶದ ಪ್ರವಾಸೋದ್ಯಮ ಉದ್ಯಮದಲ್ಲಿ ಬಹುದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ಟಿಎಎಐ ರಾಷ್ಟ್ರೀಯ ಅಧ್ಯಕ್ಷ ಸುನಿಲ್ ಕುಮಾರ್ ಆರ್ ತಿಳಿಸಿದರು.

ಗಾಂಧಿನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಟ್ರ್ಯಾವಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ 75 ಸಂಭ್ರಮ ವರ್ಷಗಳ ಕಾರ್ಯಕ್ರಮದ ವೇಳೆ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಪ್ರಸ್ತುತ ಸಂಸ್ಥೆಯು ದೇಶಾದ್ಯಂತ 2,500ಕ್ಕೂ ಹೆಚ್ಚು ಸಂಸ್ಥೆಗಳನ್ನು ತನ್ನ ಸದಸ್ಯರನ್ನಾಗಿ ಹೊಂದಿದೆ. ಪ್ರಮುಖ ಟ್ರಾವೆಲ್ ಸಂಸ್ಥೆಗಳು, ವಿಮಾನಯಾನ ಸಂಸ್ಥೆಗಳು, ಹೋಟೆಲ್ ಉದ್ಯಮಗಳು, ವಿವಿಧ ರಾಜ್ಯ ಹಾಗೂ ದೇಶಗಳ ಪ್ರವಾಸೋದ್ಯಮ ಮಂಡಳಿಗಳು, ಟ್ರಾವೆಲ್ ತಂತ್ರಜ್ಞಾನ ಕಂಪನಿಗಳು ಮತ್ತು ಪ್ರವಾಸೋದ್ಯಮ ಶಿಕ್ಷಣ ಸಂಸ್ಥೆಗಳು ಟಿಎಎಐನಲ್ಲಿ ಸಕ್ರಿಯ ಸದಸ್ಯತ್ವವನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.

ದೇಶದ ವಿವಿಧ ಭಾಗಗಳಲ್ಲಿ ಒಟ್ಟು 20 ಪ್ರಾದೇಶಿಕ ಘಟಕಗಳು ಪ್ರವಾಸೋದ್ಯಮದ ಬೆಳವಣಿಗೆಗೆ ಶ್ರಮಿಸುತ್ತಿವೆ. ಆದರೆ ಟಿಎಎಐ ಕರ್ನಾಟಕ ಘಟಕ ಸಂಸ್ಥೆಗೆ ಹೆಮ್ಮೆಯನ್ನು ತಂದಿದೆ. ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಲೋಕೇಶ್ ಹಾಗೂ ವ್ಯವಸ್ಥಾಪಕ ಸಮಿತಿ ಸದಸ್ಯ ಅಮೀಶ್ ದೇಸಾಯಿ ಅವರು ಕರ್ನಾಟಕ ಘಟಕವನ್ನು ಪ್ರತಿನಿಧಿಸುತ್ತಿದ್ದು, ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ 75ನೇ ವರ್ಷಾಚರಣೆಯ ಸವಿನೆನಪಿನ ಭಾಗವಾಗಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಭವ್ಯ ಸಮಾರೋಪ ಕಾರ್ಯಕ್ರಮ ಹಾಗೂ ಸಂಸ್ಥೆಯ 69ನೇ ರಾಷ್ಟ್ರೀಯ ಸಮಾವೇಶ ಇದೇ ಅಕ್ಟೋಬರ್ 26 ರಿಂದ ಮೂರು ದಿನಗಳ ಕಾಲ ಕಲ್ಕತ್ತಾದಲ್ಲಿ ನಡೆಯಲಿದೆ. ಈ ಮಹತ್ವದ ಸಮಾವೇಶಕ್ಕೆ ಪ್ರಪಂಚದ ನಾನಾ ಭಾಗಗಳಿಂದ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಮಂಡಳಿಗಳ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದರು.

ಸಂಸ್ಥೆಯ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಲೋಕೇಶ್ ಬೆಟ್ಟಯ್ಯ ಅವರು ಮಾತನಾಡಿ, ಕೋಲ್ಕತಾದಲ್ಲಿ ನಡೆಯಲಿರುವ ಸಮಾವೇಶದಲ್ಲಿ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಸಚಿವರು, ಮುಖ್ಯಮಂತ್ರಿಗಳು ಸೇರಿದಂತೆ ದೇಶದ ನಾನಾ ಭಾಗಗಳಿಂದ ಸುಮಾರು 800 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜೊತೆಗೆ, ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪ್ರಯತ್ನಿಸಲಾಗುತ್ತಿದ್ದು, ಅವರ ವೇಳಾಪಟ್ಟಿ ಲಭ್ಯವಾದಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದರು.

ಕರ್ನಾಟಕ ಹಾಗೂ ಬೆಂಗಳೂರಿಗೂ ಟಿಎಎಐ ಸಂಸ್ಥೆಗೂ ಐತಿಹಾಸಿಕ ಬಾಂಧವ್ಯವಿದೆ. 1951ರಲ್ಲಿ ಸಂಸ್ಥೆ ಸ್ಥಾಪನೆಯಾದಾಗ ದಕ್ಷಿಣ ಭಾರತದ ಮೊದಲ ಟ್ರಾವೆಲ್ ಏಜೆನ್ಸಿಯಾಗಿದ್ದ ಕೆಂಪೇಗೌಡ ರಸ್ತೆಯ ರಾಮ್ ಮೋಹನ್ ಅಂಡ್ ಕಂಪನಿ ಟಿಎಎಐನ ಸಂಸ್ಥಾಪಕ ಸದಸ್ಯ ಸಂಸ್ಥೆಯಾಗಿತ್ತು. ಇಂದು ಬೆಂಗಳೂರು ಅತ್ಯಂತ ಪ್ರಮುಖ ಪ್ರವಾಸಿ ಕೇಂದ್ರವಾಗಿದ್ದು, ಕರ್ನಾಟಕ ಚಾಪ್ಟರ್ ಅತ್ಯಂತ ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನುಡಿದರು.

ದೇಶದ ಅರ್ಥವ್ಯವಸ್ಥೆಯಲ್ಲಿ ಪ್ರವಾಸೋದ್ಯಮದ ಪಾತ್ರ ಹಿರಿದಾಗಿದ್ದು, ಭಾರತದ ಒಟ್ಟು ಜಿಡಿಪಿಗೆ ಈ ಕ್ಷೇತ್ರವು ಶೇಕಡಾ 10ರಷ್ಟು ಕೊಡುಗೆ ನೀಡುತ್ತಿದೆ. ಅಲ್ಲದೆ ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶ ಕಲ್ಪಿಸುತ್ತಿದೆ. ಮರುಭೂಮಿ, ಸಮುದ್ರ ತೀರ, ಹಿಮಚ್ಛಾದಿತ ಪ್ರದೇಶ, ವಿಶಿಷ್ಟ ಸಂಸ್ಕೃತಿ ಹಾಗೂ ಅದ್ಭುತ ವಾಸ್ತುಶಿಲ್ಪಗಳ ಸಂಕಲನವನ್ನು ಹೊಂದಿರುವ ಭಾರತವು ವಿಶ್ವದಲ್ಲೇ ಅತ್ಯಂತ ವೈವಿಧ್ಯಮಯ ದೇಶವಾಗಿದ್ದು, ಸರ್ಕಾರದ ಜೊತೆಗೂಡಿ ಪ್ರವಾಸೋದ್ಯಮವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಟಿಎಎಐ ನಿರಂತರವಾಗಿ ಶ್ರಮಿಸಲಿದೆ ಎಂದು ಲೋಕೇಶ್ ಬೆಟ್ಟಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon