ನಮ್ಮ ಮೆಟ್ರೋ- ಐಪಿಎಲ್ ಟಿಕೆಟ್ ಏಕೀಕರಣಕ್ಕೆ ಉತ್ತಮ ಸ್ಪಂದನೆ: 22 ಸಾವಿರ ಮಂದಿ ಪ್ರಯಾಣ

WhatsApp
Telegram
Facebook
Twitter
LinkedIn

ಬೆಂಗಳೂರು: ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ನಗರದಲ್ಲಿನ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಸಹಯೋಗದಲ್ಲಿ ರೂಪಿಸಿದ್ದ ಮೆಟ್ರೋ–ಪಂದ್ಯ ಟಿಕೆಟ್ ಏಕೀಕರಣ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವೆ ನಡೆದ ಉದ್ಘಾಟನಾ ಪಂದ್ಯದ ದಿನ ಒಟ್ಟು 22 ಸಾವಿರಕ್ಕೂ ಹೆಚ್ಚು ಜನ ನಮ್ಮ ಮೆಟ್ರೋ ಸೇವೆ ಬಳಸಿದ್ದಾರೆ.

ಪಂದ್ಯ ಮುಗಿದ ಬಳಿಕ ಒಟ್ಟು 39 ರೌಂಡ್ ಟ್ರಿಪ್‌ಗಳನ್ನು ನಡೆಸಲಾಗಿದ್ದು (ಪರ್ಪಲ್ ಲೈನ್-18, ಗ್ರೀನ್ ಲೈನ್-15, ಮತ್ತು ಯಲ್ಲೋ ಲೈನ್-6). ಮೆಜೆಸ್ಟಿಕ್‌ನಿಂದ ಕೊನೆಯ ರೈಲು ರಾತ್ರಿ 1:45ಕ್ಕೆ ಮತ್ತು ಆರ್.ವಿ ರಸ್ತೆಯಿಂದ 2:05ಕ್ಕೆ ಹೊರಡುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರೇಕ್ಷಕರು ತಮ್ಮ ಮನೆಯ ಹತ್ತಿರದ ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲ್ಲಿಸಲು ದ್ವಿಚಕ್ರ ವಾಹನಗಳಿಗೆ 30/- ಮತ್ತು ನಾಲ್ಕು ಚಕ್ರದ ವಾಹನಗಳಿಗೆ 60/- ದರ ನಿಗದಿಪಡಿಸಲಾಗಿತ್ತು.

ಈ ಬಾರಿಯ ಐಪಿಎಲ್ ಪಂದ್ಯದ ಟಿಕೆಟ್ ಗಳನ್ನು ಖರೀದಿಸುವವರಿಗೆ ಅದರ ಜೊತೆಗೆ ಮೆಟ್ರೋ ಪ್ರಯಾಣದ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದಾಗಿ ಪ್ರೇಕ್ಷಕರು ಯಾವುದೇ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಅಥವಾ ಎಂಜಿ ರಸ್ತೆ ನಿಲ್ದಾಣಗಳವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಪಂದ್ಯ ಮುಗಿದ ನಂತರವೂ ಅದೇ ಟಿಕೆಟ್ ಬಳಸಿ ಮರಳಿ ಪ್ರಯಾಣಿಸುವ ಸೌಲಭ್ಯವನ್ನು ನೀಡಲಾಗಿತ್ತು.​ಬಿಎಂಆರ್‌ಸಿಎಲ್ ಮತ್ತು ಆರ್‌ಸಿಬಿ ಫ್ರಾಂಚೈಸಿಯ ಸಹಯೋಗದೊಂದಿಗೆ ನೀಡಲಾಗಿದ್ದ ಈ ಅವಕಾಶದ ಸದುಪಯೋಗವನ್ನ ಬಹುತೇಕ ಪ್ರೇಕ್ಷಕರು ಬಳಸಿಕೊಂಡಿದ್ದರು.

ಸಾಮಾನ್ಯವಾಗಿ ಈ ಮಾರ್ಗದಲ್ಲಿ 8 ಸಾವಿರದಿಂದ 10 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ ಐಪಿಎಲ್ ಮೊದಲ ಪಂದ್ಯದ ದಿನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದು,​ ಪಂದ್ಯ ಮುಗಿದ ಕೇವಲ 50 ನಿಮಿಷಗಳಲ್ಲಿ ಅಷ್ಟೂ ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಜನರು ಸ್ವಂತ ವಾಹನ ಬಿಟ್ಟು ಮೆಟ್ರೋ ಪ್ರಯಾಣ ಅವಲಂಬಿಸಿದ್ದರಿಂದ ಕೇಂದ್ರ ವ್ಯಾಪಾರ ವಲಯದಲ್ಲಿ ವಾಹನ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮುಂದಿನ ಪಂದ್ಯಗಳಿಗೂ ಇದೇ ರೀತಿ ಮೆಟ್ರೋ ಬಳಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon