ಸ್ವಾರ್ಥಿಗಳು ತಮಗಾಗಿ, ಸ್ವಾಭಿಮಾನಿಗಳು ಸಮಾಜಕ್ಕಾಗಿ ಬದುಕುತ್ತಾರೆ: ಜ್ಞಾನ ಪ್ರಕಾಶ್ ಸ್ವಾಮೀಜಿ

WhatsApp
Telegram
Facebook
Twitter
LinkedIn

ಬೆಂಗಳೂರು: ಸ್ವಾರ್ಥಿಗಳು ತಮಗಾಗಿ ಬದುಕುತ್ತಾರೆ, ಸ್ವಾಭಿಮಾನಿಗಳು ಸಮಾಜಕ್ಕೆ ಬದುಕುತ್ತಾರೆ. ಜನರ ಧ್ವನಿ ಸಂವಿಧಾನವಾಗಿದೆ. ಜಾತಿ, ಧರ್ಮ ವಿಲ್ಲದ ಇಲಾಖೆ ಎಂದರೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಒಂದೇ ಆಗಿದೆ ಎಂದು ಉರಿಲಿಂಗ ಪೇದ್ದೀಶ್ವರ ಮಹಾ ಸಂಸ್ಥಾನದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.

ನಗರದ ನಯನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಧಿಕಾರಿಗಳು ಮತ್ತು ನೌಕರರ ಐಕ್ಯತಾ ವೇದಿಕೆ ವತಿಯಿಂದ ನೂತನ ಸಂಘದ ಉದ್ಘಾಟನೆ ಮತ್ತು ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ಕೆ.ಎಸ್.ಆರ್.ಟಿ.ಸಿ.ಮತ್ತು ಬಿ.ಎಂ.ಟಿ.ಸಿ ಸಂಸ್ಥೆಗಳಿಗೆ ದೊಡ್ಡ ಇತಿಹಾಸವಿದೆ. ಇಲ್ಲಿನ ಅಧಿಕಾರ ಮತ್ತು ನೌಕರರ ಸಮಸ್ಯೆಗಳ ನಿವಾರಣೆಗಾಗಿ ವೇದಿಕೆ ಸ್ಥಾಪನೆಯಾಗಿದೆ. ಸಂಘ ಕಟ್ಟುವ ಬದಲು ಸಂಸ್ಥೆಗಳನ್ನು ಕಟ್ಟಿ ಎಂದು ಅಂಬೇಡ್ಕರ್ ಅವರು ಹೇಳಿದ್ದರು. ತಮಿಳುನಾಡು ಸರ್ಕಾರ ಸಾರಿಗೆ ನೌಕರರನ್ನ ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಲ್ಲ ಸೌವಲತ್ತು ನೀಡುತ್ತಿದೆ, ಅದರೆ ಕರ್ನಾಟಕದಲ್ಲಿ ಮಾತ್ರ ಸರ್ಕಾರಿ ನೌಕರರು ಎಂದು ಪರಿಗಣನೆ ಮಾಡುವುದಿಲ್ಲ. ಈ ಕಾರಣಕ್ಕೆ ಒಟ್ಟಾಗಿ ಹೋದರೆ ಉಳಿಯುತ್ತಿರ, ವಿಭಜನೆಯಾದರೆ ಹಾಳಾಗಿ ಹೋಗುತ್ತಿರ ಎಂದು ಅಂಬೇಡ್ಕರ್ ಅವರ ಮಾತಿನಂತೆ ಮುನ್ನಡೆಯಿರಿ.ಆಗ ಮಾತ್ರ  ಚಾಲಕರು, ನಿರ್ವಾಹಕರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ನುಡಿದರು.

ಕೆ.ಎಸ್.ಆರ್.ಟಿ.ಸಿ ಡ್ರೈವರ್ ಮಗ ಐಎಎಸ್ ಅಧಿಕಾರಿಯಾಗಿದ್ದಾನೆ. ಮನು ಸಂವಿಧಾನದಲ್ಲಿ ಡ್ರೈವರ್ ಮಗ ಡ್ರೈವರ್ ಆಗಬೇಕು ಎನ್ನುವುದಿದೆ. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಲ್ಲಿ ಡ್ರೈವರ್ ಮಗ ಐಎಎಸ್ ಅಧಿಕಾರಿಯಾಗಬಹುದು. ಅಂತಹ ಮಹಾನ್ ವಿಚಾರ ಸಂವಿಧಾನದಲ್ಲಿದೆ. ಕಸ ಗುಡಿಸುವ ಮಹಿಳೆಯ ಮಗಳು ಐಎಎಸ್ ಆಗಿದ್ದರೆ ಅದು ಸಂವಿಧಾನದದ ಕಾರಣದಿಂದ ಆಗಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರು ಮಹಿಳೆಯರಿಗೆ ವಿಶೇಷ ಮಸೂದೆ ಮಂಡಿಸಿದ್ದರು. ಮಹಿಳೆಯ ಪರ ಕಾನೂನು ರೂಪಿಸಿ ಸಾಮಾನತೆ ಸಾರಿದ್ದರು. ಕಾರ್ಮಿಕರಿಗೆ 8ಗಂಟೆ ಮಾತ್ರ ದುಡಿಯಬೇಕು ಎನ್ನುವ ನಿಯಮ ತಂದಿದ್ದರು. ಒಟ್ಟಾರೆ ಕಾನೂನುಗಳಿಗೆ ಅಂಬೇಡ್ಕರ್ ರವರು ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ರಾಷ್ಟ್ರಪತಿ ದೌಪ್ರದಿ ಮುರ್ಮುರವರು ಅಂಬೇಡ್ಕರ್ ಅವರನ್ನು ದೇವರ ಸಮಾನ ಎಂದು ಹೇಳಿದ್ದಾರೆ. ಆದ್ದರಿಂದ ನಮ್ಮ ಸಂವಿಧಾನ, ನಮ್ಮ ಹೆಮ್ಮೆ ಎಂದು ಎಲ್ಲರು ಉಳಿಸುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಬಿಎಂಟಿಸಿ ನಿರ್ದೇಶಕ ಅಬ್ದುಲ್ ಅಹಮದ್ ಅವರು ಮಾತನಾಡಿ, ಮನಸ್ಸಿನಲ್ಲಿ ಐಕ್ಯತೆ ಬರಬೇಕು ಆಗ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇದರ ಉದ್ದೇಶ ಐಕ್ಯತಾ ವೇದಿಕೆಗಿದೆ. ಸಂವಿಧಾನ ಬದ್ದವಾಗಿ ನಾವೆಲ್ಲರು ಒಂದೇ. ನಮ್ಮಲ್ಲಿ ಭೇದಬಾವವಿಲ್ಲ, ಎಲ್ಲರು ಸರಿಸಮಾನರು. ಯಾರಾದರೂ ಕೀಳಾಗಿ ಕಂಡರೆ ಕಾನೂನಿನ ಆನ್ವಯ ಅಪರಾಧವಾಗುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಬೇಕು. ಮುಸ್ಲಿಂ, ದಲಿತ ಸಮಾಜದವರು ಶಿಕ್ಷಣ ಪಡೆಯಬೇಕು ವಿದ್ಯಾವಂತರಾದರೆ ಮಾತ್ರ ಸಮಾಜದಲ್ಲಿ ಗೌರವ ಉಳಿಯುತ್ತದೆ ಎಂದರು.

ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್ ಅವರು ಮಾತನಾಡಿ ಪಕ್ಷಿ ಹಾರಬೇಕಾದ ರಕ್ಕೆ ಅವಶ್ಯಕತೆಯಿದೆ. ವಿದ್ಯೆ ಎನ್ನುವುದು ರಕ್ಕೆಯಂತೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಹೇಳಿದ್ದರು. ಬುದ್ದ, ಬಸವ ಅಂಬೇಡ್ಕರ್ ರವರ ಆದರ್ಶ ತತ್ವಗಳನ್ನು ಎಲ್ಲರು ಪಾಲಿಸಬೇಕು. ಇರುವವರು ಮತ್ತು ಇಲ್ಲದಿರುವವರ ಮದ್ಯ ಯುದ್ದ ಎಲ್ಲ ಕಾಲದಲ್ಲಿಯೂ ಇದೆ. ಒಟ್ಟಿನಲ್ಲಿ ಸಂವಿಧಾನ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕಿದೆ. ದಲಿತ ಸಮುದಾಯಕ್ಕೆ ಸಿಗಬೇಕಾದ ಉನ್ನತ ಸ್ಥಾನಮಾನ ಕೈತಪ್ಪಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಇಂತಹ ಸಮಸ್ಯೆಗಳು ಎದುರಿಸಲು ವಿಚಾರವಂತರಾಗುವುದು ಮುಖ್ಯ ಎಂದು ಹೇಳಿದರು.

ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್ ರೆಡ್ಡಿ ಅವರು ಮಾತನಾಡಿ, ಅಂಬೇಡ್ಕರ್ ಅವರು ಎಲ್ಲ ಜಾತಿ ಸಮುದಾಯದವರಿಗೆ ಸೇರಿದವರಾಗಿದ್ದಾರೆ. ಅವರು ರಚಿಸಿದ ಸಂವಿಧಾನದಿಂದ ನಮಗೆ ಮಾತನಾಡುವ ಹಕ್ಕು, ಮತದಾನದ ಹಕ್ಕು ಎಲ್ಲರು ಸಮಾನವಾಗಿ ಬದುಕುವ ಹಕ್ಕು ಸಿಕ್ಕಿದೆ, ನಾವು ಬದುಕುವ ಸ್ವಾತಂತ್ರ್ಯ ಸಿಕ್ಕಿದೆ. ದೇಶದಲ್ಲಿ ಸಹಬಾಳ್ಮೆಯಿಂದ ಬದುಕುತ್ತಿರುವುದು ಸಂವಿಧಾನದಿಂದಲೇ ಎಂದು ಹೇಳಿದರು.

ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಐಕ್ಯತಾ ವೇದಿಕೆಯ ರಾಜ್ಯದ್ಯಕ್ಷ ಯಲ್ಲಪ್ಪ. ಪಿ, ಕಾರ್ಯಾಧ್ಯಕ್ಷ ರಮೇಶ್. ವಿ, ಪ್ರಧಾನ ಕಾರ್ಯದರ್ಶಿ ನಿಂಗಪ್ಪ ತಡಿಬಿಡಿ, ಖಜಾಂಚಿ ದೇವರಾಜ್, ಪದಾಧಿಕಾರಿಗಳಾದ ನಂಜುಂಡೇಗೌಡ, ರಮೇಶ್ ಬಾಬು, ಸಂಜೀವ್ ಕುಮಾರ್, ಮಂಜುಳನಾಯಕ್, ರೇಖಾ ಮಾದರ್, ಓಂಕಾರಪ್ಪ, ಜಗದೀಶ್, ಹೆಚ್.ಕೆ.ಸುರೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon