ಧೀ ಹಾಸ್ಪಿಟಲ್ಸ್, ಸ್ಮಿತಮ್ ಮತ್ತು ರೋಟರಿ ಸಹಯೋಗದಲ್ಲಿ ಡೇರ್ ರನ್- 2026

WhatsApp
Telegram
Facebook
Twitter
LinkedIn

ಬೆಂಗಳೂರು: ವಿಶ್ವ ಸಂಧಿವಾತ ದಿನದ ಅಂಗವಾಗಿ. ಚಲನೆಯೇ ಜೀವನ ಎಂಬ ಪ್ರಬಲ ಸಂದೇಶದೊಂದಿಗೆ ಡೇರ್ ರನ್ 2026 ಅನ್ನು ಧೀ ಹಾಸ್ಪಿಟಲ್ಸ್, ಸ್ಮಿತಮ್ ಮತ್ತು ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆ ಮಾಡಲಾಗಿತ್ತು.

ಸಂಧಿವಾತವು ಚಲನಶೀಲತೆ, ಸ್ವಾತಂತ್ರ್ಯ ಮತ್ತು ದೈನಂದಿನ ಜೀವನದ ಸರಳ ಸಂತೋಷಗಳನ್ನು ಕಿತ್ತುಕೊಳ್ಳುವ ರೋಗವಾಗಿ ಪರಿಣಮಿಸಿದ್ದು, ಇದರ ಕುರಿತು ಜಾಗೃತಿಗಾಗಿ ಮತ್ತು ಸಂಧಿವಾತ, ಕೀಲು ಆರೋಗ್ಯ ಮತ್ತು ಸಕ್ರಿಯವಾಗಿರುವುದರ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಲು ಸ್ಮಿತಮ್ ಎನ್‌ಜಿಡಿ ಮತ್ತು ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ಸ್ 3191, 3192 ಹಾಗೂ ಧೀ ಹಾಸ್ಪಿಟಲ್ಸ್ ಸಮುದಾಯ ಚಳುವಳಿ ಎನ್ನುವಂತೆ ಡೇರ್ ರನ್ 2026 ಆಯೋಜಿಸಿತ್ತು. ಇದರಲ್ಲಿ 6,000 ಕ್ಕೂ ಹೆಚ್ಚು ಜನರು ಪಾಲ್ಗೊಂಡರು. ಕಾಂತಾರ ಖ್ಯಾತಿಯ ನಟಿಯಾದ ಸಪ್ತಮಿ ಗೌಡ ಪಾಲ್ಗೊಂಡು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ವೃತ್ತಿಯ ಓಟಗಾರರಿಂದ ಹಿಡಿದು ಕುಟುಂಬಗಳು, ವೈದ್ಯರು, ಹಿರಿಯ ನಾಗರಿಕರು ಈ ಬೆಂಗಳೂರು ಓಟದಲ್ಲಿ ಪಾಲ್ಗೊಂಡರು. ಪ್ರತಿ ಹೆಜ್ಜೆಯೂ ಮುಖ್ಯವೆಂಬಂತೆ ಓಡಿದರು. ಇನ್ನು ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ವೈರ್‌ಲೆಸ್ ವಾಕಿಂಗ್ ಪಿಟೀಲು ವಾದಕ ಡಾ. ಅನೀಶ್ ವಿದ್ಯಾಶಂಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ರೋಟರಿ ಅಂತರರಾಷ್ಟ್ರೀಯ ಜಿಲ್ಲೆ (3192) ಜಿಲ್ಲಾ ಗವರ್ನರ್ ರವಿಶಂಕರ್ ಡಕೋಜು ಅವರು ಭಾಗಿಯಾಗಿದ್ದರು. ಓಟವು ಕನಕಪುರ ರಸ್ತೆಯಲ್ಲಿ 10 ಕೆ ಟೈಮ್ಡ್ ರನ್ ಮತ್ತು 5 ಕೆ ಟೈಮ್ಡ್ ರನ್ ಮತ್ತು 5 ಕೆ ಮೋಜಿನ ಓಟ ಎನ್ನುವ ಮೂರು ವಿಭಾಗಗಳಲ್ಲಿ ವಿಂಗಡನೆಗೊಂಡಿತ್ತು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon