ಕಲಾಸೇವೆಯ ಜವಾಬ್ದಾರಿ ಹೆಚ್ಚಿಸಿದ ಕರ್ನಾಟಕ ಕಲಾಶ್ರೀ: ಡಾ. ಸಂಜಯ್ ಶಾಂತಾರಾಂ

WhatsApp
Telegram
Facebook
Twitter
LinkedIn

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ನೀಡಲಾಗುವ 2026-27ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಡಾ. ಸಂಜಯ್ ಶಾಂತಾರಾಂ ಭಾಜನರಾಗಿದ್ದಾರೆ.

ದಂತವೈದ್ಯರಾಗಿರುವ ಡಾ. ಸಂಜಯ್ ಶಾಂತಾರಾಂ ಅವರು ನರ್ತಕ, ನೃತ್ಯ ಸಂಯೋಜಕ, ನೃತ್ಯಗುರು, ಗಾಯಕ ಹಾಗೂ ಕೃತಿರಚನಕಾರರಾಗಿ ಗುರುತಿಸಿಕೊಂಡಿದ್ದಾರೆ. ದೂರದರ್ಶನದ ಎ ಶ್ರೇಣಿ ಕಲಾವಿದರಾಗಿರುವ ಅವರು ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ 325ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನೃತ್ಯ ಪ್ರದರ್ಶನ, ಉಪನ್ಯಾಸ ಹಾಗೂ ಕಾರ್ಯಾಗಾರಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ಅವರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಕೊಡಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ತಂಡದ ವತಿಯಿಂದ ನೃತ್ಯ ರೂಪ ಕೂಡ ಪ್ರದರ್ಶನಗೊಂಡಿದ್ದು, ಅದು ಕೂಡ ಜನಮೆಚ್ಚುಗೆಗೆ ಪಾತ್ರವಾಗಿರುವುದು ವಿಶೇಷವಾಗಿತ್ತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಸಂಜಯ್ ಶಾಂತಾರಾಂ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ನನಗೆ ಮಾತ್ರವಲ್ಲದೆ, ಹಲವು ಹಿರಿಯ ಕಲಾವಿದರಿಗೂ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಪ್ರಶಸ್ತಿಗಳು ಕಲಾವಿದರಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತವೆ. ಈ ಪ್ರಶಸ್ತಿ ಗೌರವದ ಜತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ನಮ್ಮ ಕಲಾಸೇವೆ ಯಾವುದೇ ಕಾರಣಕ್ಕೂ ನಿಲ್ಲಬಾರದು ಎನ್ನುವುದು ಈ ಪ್ರಸ್ತಿಯಿಂದ ಇನ್ನಷ್ಟು ದೃಢವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಮಟ್ಟದಲ್ಲಿ ಕಲಾಸೇವೆ ಮುಂದುವರಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ನಮ್ಮನ್ನು ಪ್ರೋತ್ಸಾಹಿಸಿ ಈ ಪ್ರಶಸ್ತಿ ನೀಡಿದೆ. ನನಗೆ ವಹಿಸಿರುವ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಈ ಪ್ರಶಸ್ತಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಮುಂದೆಯೂ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon