ಇಂದು ಸುಲೈಮಾನ್ ಖತೀಬ್ ಅವರ ಕೇವ್ಡೆ ಕಾ ಬನ್ ನಾಟಕ ಪ್ರದರ್ಶನ

WhatsApp
Telegram
Facebook
Twitter
LinkedIn

ಬೆಂಗಳೂರು: ಸುಲೈಮಾನ್ ಖತೀಬ್ ಅವರ ಸಾಹಿತ್ಯ ಮತ್ತು ಸಾಮಾಜಿಕ ಸಂದೇಶವನ್ನು ರಂಗದ ಮೇಲೆ ಕಟ್ಟಿಕೊಡಲಿರುವ ಖ್ಯಾತ ದಖನಿ ಉರ್ದು ಕವಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಲೈಮಾನ್ ಖತೀಬ್ ಅವರ ಕಾವ್ಯ, ಚಿಂತನ ಮತ್ತು ಸಾಮಾಜಿಕ ಸಂದೇಶಗಳಿಂದ ಪ್ರೇರಣೆ ಪಡೆದ ವಿಶಿಷ್ಟ ಸಂಗೀತ ನಾಟಕ ‘ಕೇವ್ಡೆ ಕಾ ಬನ್’ ಪ್ರದರ್ಶನ ಕೋಣನಕುಂಟೆ ಕ್ರಾಸ್ ನ ಪರ್ಫಾರ್ಮಿಂಗ್ ಆರ್ಟ್ಸ್ ವೇದಿಕೆಯಲ್ಲಿ ಇಂದು ಸಂಜೆ ಪ್ರದರ್ಶನಗೊಳ್ಳಲಿದೆ.

ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ನಿರ್ದೇಶಕ ಅಲಿ ಅಹಮ್ಮದ್, ಸುಲೈಮಾನ್ ಖತೀಬ್ ಅವರ ಸಾಹಿತ್ಯಕ್ಕೆ ಜನರಿಂದ ದೊರೆತಿರುವ ಅಪಾರ ಮೆಚ್ಚುಗೆಗೆ ಸಾಕ್ಷಿಯಾಗಿ ಅವರ ಕವನ ಸಂಕಲನ ಈಗಾಗಲೇ 16 ಆವೃತ್ತಿಗಳನ್ನು ಕಂಡಿದೆ. ಹಾಸ್ಯ, ವ್ಯಂಗ್ಯ ಹಾಗೂ ಭಾವನಾತ್ಮಕ ನಿರೂಪಣೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದ  ಸಾಹಿತ್ಯವನ್ನು ರಂಗಭೂಮಿಯ ಮೂಲಕ ಮತ್ತಷ್ಟು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ನಾಟಕವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

‘ಕೇವ್ಡೆ ಕಾ ಬನ್’ ಮೂಲಕ ದಖನಿ ಉರ್ದು ಭಾಷೆ, ಸಾಹಿತ್ಯ ಮತ್ತು ರಂಗಭೂಮಿಯನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ. ಗುಣಮಟ್ಟದ ಉರ್ದು ನಾಟಕ, ಜಾನಪದ ಸಂಗೀತ ಹಾಗೂ ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಹೊಸ ತಲೆಮಾರಿನ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನವೂ ಇದಾಗಿದೆ. ಹಾಸ್ಯ ಮತ್ತು ವ್ಯಂಗ್ಯದ ಮೂಲಕ ಗಂಭೀರ ಸಾಮಾಜಿಕ ವಿಚಾರಗಳನ್ನು ಪ್ರೇಕ್ಷಕರ ಮುಂದಿಡುವ ನಾಟಕವು ಮನರಂಜನೆಯ ಜೊತೆಗೆ ಚಿಂತನೆಗೂ ಅವಕಾಶ ಕಲ್ಪಿಸಲಿದೆ ಎಂದರು.

ನಾಟಕದಲ್ಲಿ ಸಾಮಾಜಿಕ ಅಸಮಾನತೆ, ರೈತರು ಮತ್ತು ಕಾರ್ಮಿಕರ ಸಂಕಷ್ಟ ಹಾಗೂ ಶೋಷಣೆ, ವರದಕ್ಷಿಣೆ ಪದ್ಧತಿಯಿಂದ ಮಹಿಳೆಯರ ಮೇಲಿನ ದೌರ್ಜನ್ಯ, ನೈತಿಕ ಮೌಲ್ಯಗಳ ಕುಸಿತ, ಶಿಕ್ಷಣದ ಮಹತ್ವ ಮತ್ತು ಮಾನವೀಯ ಮೌಲ್ಯಗಳಂತಹ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಇದರ ಜೊತೆಗೆ ಸಾಮಾಜಿಕ ಸುಧಾರಣೆ, ಕೋಮು ಸೌಹಾರ್ದತೆ, ದೇಶಭಕ್ತಿ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಸಾಮರಸ್ಯದ ಸಂದೇಶಗಳನ್ನು ಸಾರುವ ಪ್ರಯತ್ನ ಮಾಡಲಾಗಿದೆ. ಬುಕ್ ಮೈ ಶೋ ನಲ್ಲಿ ಸುಲಲಿತವಾಗಿ ಟಿಕೆಟ್ ಪಡೆದು ಇಡೀ ಸಂಸಾರ ಸಮೇತ ಬಂದುನೋಡಿ ಆನಂದಿಸಬಹುದಾದ ನಾಟಕ ಇದಾಗಿದೆ ಎಂದು ಹೇಳಿದರು.

ನಿರ್ಮಾಪಕ ಖಾಜಾ ಖತೀಬ್, ವ್ಯವಸ್ಥಾಪಕ ನಿರ್ಮಾಪಕ ಖುತಬ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon