ಬೆಂಗಳೂರು: ವಿಜಯನಗರದ ಬಂಟರ ಸಂಘದಲ್ಲಿ 2026-2029ನೇ ಸಾಲಿನ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರುಗಳ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ದೀಪಕ್ ಶೆಟ್ಟಿರವರು ಮತ್ತು ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ, ಮಹಿಳಾ ಮೀಸಲು ಉಪಾಧ್ಯಕ್ಷರಾಗಿ ಸೌಮ್ಯ ಶ್ರೀ ಹೆಗ್ಗಡೆ ಆಯ್ಕೆಯಾದರು.
ಈ ಸಂದರ್ಭದಲ್ಲಿ ದೀಪಕ್ ಶೆಟ್ಟಿ ಮಾತನಾಡಿ ನಮ್ಮ ಬಂಟರ ಸಂಘ ನನಗೆ ಅವಕಾಶ ನೀಡಿದೆ, ನಮ್ಮ ಮೇಲೆ ನಿರೀಕ್ಷೆ ಹೆಚ್ಚಿದೆ. ಕಾಯ, ವಾಚ ಮನ್ಸಸಿನಿಂದ ಸಮುದಾಯ ಮತ್ತು ಸಮಾಜದ ಅಭಿವೃದ್ದಿಗೆ ಕೆಲಸ ಮಾಡುತ್ತೇನೆ. ಇನ್ನು ರಾಜ್ಯ ಸರ್ಕಾರ ತುಳು ಭಾಷೆಗೆ ಎರಡನೇಯ ಆಡು ಭಾಷೆ ಸ್ಥಾನ ನೀಡಿರುವುದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಂಟರ ಸಂಘದಲ್ಲಿ ಐದು ಅಂಶಗಳ ಯೋಜನೆ ರೂಪಿಸಲಾಗಿದೆ ನಮ್ಮ ಎರಡು ಶಿಕ್ಷಣ ಸಂಸ್ಥೆ ಅಭಿವೃದ್ದಿಗಾಗಿ ಮತ್ತು ಉದ್ಯೋಗ ಮತ್ತು ಆರೋಗ್ಯ ಕುರಿತು ಆದ್ಯತೆ ನೀಡಲಾಗಿದೆ ಈಗಾಗಲೇ ಸಾವಿರಾರು ಜನರನ್ನು ಭೇಟಿ ಮಾಡಿ ಅವರ ಸಲಹೆ ಮಾರ್ಗದರ್ಶನ ಕೇಳಲಾಗಿದೆ ಎಂದು ಹೇಳಿದರು.
ಸಂಘದ ವ್ಯಾಪ್ತಿಯಲ್ಲಿರುವ ಎರಡು ಶೈಕ್ಷಣಿಕ ಸಂಸ್ಥೆಗಳು ಹಾಗೂ ವಸತಿನಿಲಯಗಳ ನಿರ್ವಹಣೆಯೊಂದಿಗೆ, ಪಂಚಮುಖಿ ಕಾರ್ಯಸಿದ್ಧಿ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ ವೈದ್ಯಕೀಯ ಹಾಗೂ ಕಾನೂನು ನೆರವು ನೀಡುವುದು ಸದ್ಯದ ಮುಖ್ಯ ಆದ್ಯತೆಯಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೃಹತ್ ಅಂತರದಿಂದ ಪದಾಧಿಕಾರಿಯಾಗಿ ಆಯ್ಕೆಯಾದ ಡಿ.ವಿ. ಪ್ರತಾಪ್ ಶೆಟ್ಟಿ ಮಾತನಾಡಿ, ಬೆಂಗಳೂರು ಬಂಟರ ಸಂಘದಲ್ಲಿ ಪ್ರತ್ಯೇಕವಾಗಿ ಗೆಲ್ಲುವುದು ಅತ್ಯಂತ ಸವಾಲಿನ ಕೆಲಸವಾಗಿದ್ದರೂ ಸದಸ್ಯರು ತಮ್ಮ ಸೇವೆಯನ್ನು ಗುರುತಿಸಿ ಆಶೀರ್ವದಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಂಘದಲ್ಲಿ ನಿರಂತರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಮತದಾರರು ನೀಡಿದ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ಚುನಾವಣೆಯ ಸಂದರ್ಭದಲ್ಲಿ ಆರೋಪ-ಪ್ರತ್ಯಾರೋಪಗಳು ಬರುವುದು ಸಹಜವಾಗಿದ್ದು, ಎಲ್ಲವನ್ನೂ ಬದಿಗೊತ್ತಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಕೈಜೋಡಿಸಿ ಸಂಘದ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಬಂಟರ ಸಂಘ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ:
ಅಧ್ಯಕ್ಷ- ದೀಪಕ್ ಶೆಟ್ಟಿ
ಉಪಾಧ್ಯಕ್ಷ- ಮಧುಕರ್ ಶೆಟ್ಟಿ.
ಮಹಿಳಾ ಮೀಸಲು ಉಪಾಧ್ಯಕ್ಷೆ- ಸೌಮ್ಯ ಶ್ರೀ ಹೆಗಡೆ
ಕಾರ್ಯದರ್ಶಿ- ಅಮರನಾಥ್ ಶೆಟ್ಟಿ,
ಜಂಟಿ ಕಾರ್ಯದರ್ಶಿ- ಸುರೇಶಾ ಶೆಟ್ಟಿ
ಖಜಾಂಚಿ- ರಮೀತ್ ಬಿ.ಶೆಟ್ಟಿ
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆನಿತಾ ಚಂದ್ರಶೇಖರ್ ಶೆಟ್ಟಿ, ಶಕುಂತಲ ಶೆಟ್ಟಿ, ಮಾಲತಿ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಕಿಶೋರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಕಿರ್ತನ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ, ಡಿ.ಬಿ.ಪ್ರತಾಪ್ ಶೆಟ್ಟಿ, ರಾಮದಾಸ್ ಶೆಟ್ಟಿ, ಹೀರಾ ಅನೂಪ್ ಹೆಗಡೆ, ಉಮೇಶ್, ನಿತ್ಯಾರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ














