ರಾಷ್ಟ್ರಮಟ್ಟದ ಸಾಧನೆ ಮಾಡಿದ ಕು. ಆರಾಧ್ಯ ಸದಾಶಿವ ಕಟ್ಟಿಮನಿ ಗೆ ಸನ್ಮಾನ

WhatsApp
Telegram
Facebook
Twitter
LinkedIn

ಬೆಳಗಾವಿ: ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, ಅಂಡರ್-14 ವಿಭಾಗದಲ್ಲಿ ದೇಶಕ್ಕೆ ದ್ವಿತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ ಡಿ ವೈ ಎಸ್‌ ಪಿ ಶ್ರೀ ಸದಾಶಿವ ಕಟ್ಟಿಮನಿ ಅವರ ಸುಪುತ್ರಿ ಕುಮಾರಿ ಆರಾಧ್ಯ ಸದಾಶಿವ ಕಟ್ಟಿಮನಿ ಅವರನ್ನು ಪ್ರೋತ್ಸಾಹ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಆರಾಧ್ಯ ಅವರ ಈ ಸಾಧನೆ ಬೆಳಗಾವಿ ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವ ಮೂಲಕ ಭವಿಷ್ಯದಲ್ಲಿ ಭಾರತವನ್ನು ಪ್ರತಿನಿಧಿಸುವ ಶ್ರೇಷ್ಠ ಕ್ರೀಡಾಪಟುವಾಗಿ ಬೆಳೆಯಲಿ ಹಾಗೂ ದೇಶಕ್ಕೆ ಕೀರ್ತಿ ತರಲಿ ಎಂದು ಪ್ರೋತ್ಸಾಹ ಫೌಂಡೇಶನ್ ಪದಾಧಿಕಾರಿಗಳು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಚರ್ಮಕಾರ  ಮಹಾ ಸಭಾದ ಅಧ್ಯಕ್ಷ ಭೀಮರಾವ ಪವಾರ ಪ್ರೋತ್ಸಾಹ ಫೌಂಡೇಶನ್ ಅಧ್ಯಕ್ಷ ವಾಸುದೇವ ದೊಡಮನಿ, ಪದಾಧಿಕಾರಿಗಳಾದ ಸಾಗರ ಕಿತ್ತೂರ, ಸಂತೋಷ ಹೊಂಗಲ, ಸುರೇಶ ಸಾಂಗಲಿ, ಹಿರಾಲಾಲ ಚವಾಣ್, ಪ್ರಕಾಶ ಮಾನೆ, ಸಂಜಯ ಚೌಗುಲೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon