ಅ.30ರಿಂದ ಸ್ಕೂಲ್ಸ್ ಆಫ್ ಇಂಡಿಯಾ ಎಜುಕೇಶನ್ ಸಮಿಟ್: ಅಂಕಿತ್ ವರ್ಮಾ

WhatsApp
Telegram
Facebook
Twitter
LinkedIn

ಬೆಂಗಳೂರು: ಭಾರತದ ಶಾಲಾ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಹೊಸ ಸವಾಲುಗಳು, ಅವಕಾಶಗಳು ಹಾಗೂ ಬದಲಾಗುತ್ತಿರುವ ಶೈಕ್ಷಣಿಕ ಪ್ರವೃತ್ತಿಗಳ ಕುರಿತು ಚರ್ಚಿಸಲು ಮೂರು ದಿನಗಳ ರಾಷ್ಟ್ರೀಯ ಮಟ್ಟದ ದಿ ಸ್ಕೂಲ್ಸ್ ಆಫ್ ಇಂಡಿಯಾ ಎಜುಕೇಶನ್ ಸಮಿಟ್ 2026 ಮಹಾರಾಷ್ಟ್ರದ ಖೋಪೋಲಿಯಲ್ಲಿ ಅ.30ರಿಂದ ನ.1ರವರೆಗೆ ನಡೆಯಲಿದೆ ಎಂದು ಸಂಸ್ಥಾಪಕ ಅಂಕಿತ್ ಪುಷ್ಪರಾಜ್ ವರ್ಮಾ ತಿಳಿಸಿದರು.

ಈ ಕುರಿತು ಬುಧವಾರ ನಗರದ ಪ್ರೆೆಸ್ ಕ್ಲಬ್ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಿಟ್‌ಲ್ಲಿ ದೇಶದ ವಿವಿಧ ಭಾಗಗಳ ಶಿಕ್ಷಣ ತಜ್ಞರು, ಶಾಲಾ ಸಂಸ್ಥಾಪಕರು, ಪ್ರಾಂಶುಪಾಲರು, ನೀತಿ ರೂಪಿಸುವವರು, ಸಂಶೋಧಕರು ಹಾಗೂ ಕೃತಕ ಬುದ್ಧಿಮತ್ತೆೆ ಮತ್ತು ಶೈಕ್ಷಣಿಕ ತಂತ್ರಜ್ಞಾನ ಕ್ಷೇತ್ರದ ಪರಿಣತರು ಭಾಗವಹಿಸಲಿದ್ದಾರೆ. ಭಾರತದ ಶಾಲಾ ಶಿಕ್ಷಣದ ಭವಿಷ್ಯದ ಕುರಿತು ವಿಚಾರ ವಿನಿಮಯ ನಡೆಸುವುದು ಸಮಿಟ್‌ನ ಪ್ರಮುಖ ಉದ್ದೇಶವಾಗಿದೆ ಎಂದರು.

ಸಾಂಪ್ರದಾಯಿಕ ಶೈಕ್ಷಣಿಕ ಮೌಲ್ಯಗಳೊಂದಿಗೆ ಆಧುನಿಕ ತಂತ್ರಜ್ಞಾನ ಸಂಯೋಜಿಸುವುದು, ತರಗತಿಗಳಲ್ಲಿ ಎಐ ಬಳಕೆ ಹಾಗೂ ಗುಣಮಟ್ಟದ ಮತ್ತು ಸಮಾನ ಶಿಕ್ಷಣವನ್ನು ಹೆಚ್ಚಿನ ಮಕ್ಕಳಿಗೆ ತಲುಪಿಸುವ ಮಾರ್ಗಗಳ ಕುರಿತು ಸಮಿಟ್‌ನಲ್ಲಿ ಚರ್ಚೆ ನಡೆಯಲಿದೆ. ಸಮಿಟ್ ಕೇವಲ ವಿಚಾರ ವಿನಿಮಯಕ್ಕೆೆ ಸೀಮಿತವಾಗದೆ ಶಾಲಾ ಆಡಳಿತ ಹಾಗೂ ತರಗತಿ ಮಟ್ಟದಲ್ಲಿ ಅನುಷ್ಠಾನಗೊಳಿಸಬಹುದಾದ ಪ್ರಾಯೋಗಿಕ ಪರಿಹಾರಗಳು ಮತ್ತು ಕಾರ್ಯತಂತ್ರಗಳ ಕುರಿತು ಚರ್ಚೆಗೆ ವೇದಿಕೆಯಾಗಲಿದೆ ಎಂದು ಹೇಳಿದರು

ಬದಲಾಗುತ್ತಿರುವ ಬೋಧನಾ ವಿಧಾನ, ಕಲಿಕೆಯಲ್ಲಿ ನಾವೀನ್ಯತೆ, ಶಾಲಾ ನಾಯಕತ್ವ ಮತ್ತು ನಿರ್ವಹಣೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಹಾಗೂ ಸಮಗ್ರ ಬೆಳವಣಿಗೆ ಪ್ರಮುಖ ಚರ್ಚಾ ವಿಷಯಗಳಾಗಿವೆ. ಎಐಯನ್ನು ಸುರಕ್ಷಿತವಾಗಿ, ಜವಾಬ್ದಾರಿಯುತವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸುವ ಕುರಿತು ವಿಶೇಷ ಅಧಿವೇಶನಗಳು ಮತ್ತು ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎಂದು ಅಂಕಿತ್ ಪುಷ್ಪರಾಜ್ ವರ್ಮಾ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಧ್ರುವ್ ಗ್ಲೋಬಲ್ ಸ್ಕೂಲ್‌ನ ನಿರ್ದೇಶಕಿ ಅನಿಶ್ಕಾ ಮಲ್ಪಾನಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon