ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ನಾವೀನ್ಯತೆಗೆ ಉತ್ತೇಜನ: ಎರಡು ದಿನಗಳ ಕ್ಲಿಕ್‌ಟ್ರೋನಿಕಾ-2026 ಪ್ರದರ್ಶನ

WhatsApp
Telegram
Facebook
Twitter
LinkedIn

ಬೆಂಗಳೂರು: ಕರ್ನಾಟಕದ ಪ್ರಮುಖ ಮೂರು ದಿನಗಳ ಎಲೆಕ್ಟ್ರಾನಿಕ್ಸ್ ಪ್ರದರ್ಶನ ಮತ್ತು ಸಮ್ಮೇಳನ ಕ್ಲಿಕ್‌ಟ್ರೋನಿಕಾ-2026 ಕ್ಕೆ ಗುರುವಾರ ನಗರದ ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಚಾಲನೆ ದೊರೆತಿದೆ.

ಕರ್ನಾಟಕ ಎಲೆಕ್ಟ್ರಾನಿಕ್ ಇಂಡಸ್ಟ್ರೀಸ್ ಕನ್ಸೋರ್ಟಿಯಂ ಆಯೋಜಿಸಿರುವ ಈ ಪ್ರದರ್ಶನ ಜುಲೈ 31 ಹಾಗೂ ಆಗಸ್ಟ್ 1ರವರೆಗೆ ನಡೆಯಲಿದೆ, ಸಮ್ಮೇಳನವನ್ನು ಕರ್ನಾಟಕ ಇನ್ನೋವೇಷನ್ ಅಂಡ್ ಟೆಕ್ನಾಲಜಿ ಸೊಸೈಟಿ  ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ಉದ್ಘಾಟಿಸಿದರು. ಎಂಎಸ್‌ಎಂಇ ನಿರ್ದೇಶಕ  ದೇವರಾಜ್ ಕೆ., ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಹಾಗೂ ಸಿಡ್ಬಿ ಸಹಾಯಕ ಮಹಾಪ್ರಬಂಧಕ ಎಲ್. ಆರ್. ನಾರಾಯಣ ಉಪಸ್ಥಿತರಿದ್ದರು. ನವ ನವೀನ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳು ಹಾಗೂ ಎಲೆಕ್ಟ್ರಾನಿಕ್ಸ್ ಪರಿಹಾರ ಮಳಿಗೆಗಳು ಪ್ರದರ್ಶನದಲ್ಲಿವೆ.

ಡಾ. ಅವಿನಾಶ್ ಮೆನನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಮೂಲಕ ನಾವೀನ್ಯತೆ ಆಧಾರಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸುಸ್ಥಿರ ಬೆಳವಣಿಗೆ ಹಾಗೂ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸಾಧಿಸಲು ಎಂಎಸ್‌ಎಂಇಗಳು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು  ಎಂದು ಕರೆ ನೀಡಿದರು.

ಸಿಎಲ್‌ಐಕೆ ಅಧ್ಯಕ್ಷ  ಮಾಧವ್ ಆರ್. ಬಡಶೇಶಿ ಮಾತನಾಡಿ, ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕೈಗಾರಿಕೆ, ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು ಹಾಗೂ ತಂತ್ರಜ್ಞಾನ ತಜ್ಞರನ್ನು ಒಂದೇ ವೇದಿಕೆಗೆ ತರುವ ಪ್ರಮುಖ ವೇದಿಕೆಯಾಗಿ ಕ್ಲಿಕ್‌ಟ್ರೋನಿಕಾ ರೂಪುಗೊಂಡಿದ್ದು, ನಾವೀನ್ಯತೆ, ಹೂಡಿಕೆ ಹಾಗೂ ಉದ್ಯಮ ಸಹಭಾಗಿತ್ವಕ್ಕೆ ಇದು ಉತ್ತೇಜನ ನೀಡಲಿದೆ ಎಂದು ಹೇಳಿದರು.

ಎಂಎಸ್‌ಎಂಇ ನಿರ್ದೇಶಕ ದೇವರಾಜ್ ಕೆ. ಮಾತನಾಡಿ, ತಂತ್ರಜ್ಞಾನ ಅಳವಡಿಕೆ, ಗುಣಮಟ್ಟದ ಉತ್ಪಾದನೆ ಹಾಗೂ ನಾವೀನ್ಯತೆಯೇ ಎಂಎಸ್‌ಎಂಇಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುವ ಪ್ರಮುಖ ಅಂಶಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಕೈಗಾರಿಕೆಗಳ ನಡುವಿನ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿ, ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಕರ್ನಾಟಕದಲ್ಲಿ ಉತ್ಪಾದನಾ ವಲಯದ ಬೆಳವಣಿಗೆಗೆ ವೇಗ ನೀಡಬೇಕೆಂದು ಹೇಳಿದರು.

ಸಿಎಲ್‌ಐಕೆ ಮಾಜಿ ಅಧ್ಯಕ್ಷೆ ಹಾಗೂ ಮುಖ್ಯ ಆಯೋಜಕರಾದ ಹೇಮಾ ಮಲಿನಿ ಮಾತನಾಡಿ, ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತೀಯ ಕೈಗಾರಿಕೆಗಳು ಮುಂಚೂಣಿಗೆ ಬರಬೇಕಾದರೆ ನಿರಂತರ ನಾವೀನ್ಯತೆ ಹಾಗೂ ಉತ್ಪಾದನಾ ಶ್ರೇಷ್ಠತೆ ಅತ್ಯಗತ್ಯ ಎಂದು ಹೇಳಿದರು.

ವಿಪ್ರೋ ರಿಸರ್ಚ್‌ನ ಮುಖ್ಯ ವಿಜ್ಞಾನಿ ಹಾಗೂ ಮುಖ್ಯಸ್ಥ ಶ ಸುಂದರರಾಮನ್ ಗಣಪತಿರಾಮನ್ ಮುಖ್ಯ ಭಾಷಣ ಮಾಡಿ, ಸುಧಾರಿತ ಎಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ ಹಾಗೂ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳ ಭವಿಷ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಂಶೋಧನೆ ಆಧಾರಿತ ನಾವೀನ್ಯತೆಯೇ ಮುಂದಿನ ತಲೆಮಾರಿನ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಅಭಿವೃದ್ಧಿಗೆ ಪ್ರಮುಖ ಆಧಾರವಾಗಲಿದೆ ಎಂದು ಹೇಳಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon