ಎಸ್.ಆರ್.ಟಿ ಡ್ಯಾನ್ಸ್, ಫಿಟ್‌ನೆಸ್ ಸ್ಟುಡಿಯೋ ದಿಂದ ಡ್ಯಾನ್ಸ್ ರಾಜಾ ಡ್ಯಾನ್ಸ್ ಕಾರ್ಯಕ್ರಮ

WhatsApp
Telegram
Facebook
Twitter
LinkedIn

ಬೆಂಗಳೂರು: ಎಸ್.ಆರ್.ಟಿ ಡ್ಯಾನ್ಸ್ ಅಂಡ್ ಫಿಟ್‌ನೆಸ್ ಸ್ಟುಡಿಯೋ ಹಾಗೂ ಎಸ್.ಆರ್.ಟಿ ಇವೆಂಟ್ಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಡ್ಯಾನ್ಸ್ ರಾಜಾ ಡ್ಯಾನ್ಸ್ ನೃತ್ಯ ಕಾರ್ಯಕ್ರಮವು ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಂಧು ಮಹೇಶ್ ಮಾತನಾಡಿ, ನನ್ನ ಬಿಡುವಿಲ್ಲದ ಶೂಟಿಂಗ್ ವೇಳಾಪಟ್ಟಿಯ ನಡುವೆಯೂ ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ನನ್ನ ಚಿಕ್ಕ ಮಗ ಕೂಡ ಇತ್ತೀಚೆಗಷ್ಟೇ ನೃತ್ಯ ತರಗತಿಗೆ ಸೇರಿಕೊಂಡಿದ್ದಾನೆ. ಮಕ್ಕಳಲ್ಲಿರುವ ನೃತ್ಯ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಇಂತಹ ವೇದಿಕೆಗಳು ನಿಜಕ್ಕೂ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ ಬಿಗ್ ಬಾಸ್ ಖ್ಯಾತಿಯ ಧನುಷ್ ಗೌಡ ಮಾತನಾಡಿ, ಗುರುವಿಗೆ ಗೌರವ ಸಲ್ಲಿಸುವ ಹಾಗೂ ಕಲಿತ ವಿದ್ಯೆಯನ್ನು ವೇದಿಕೆಯಲ್ಲಿ ಪ್ರದರ್ಶಿಸುವ ಇಂತಹ ಪ್ರಯತ್ನಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ. ಎಸ್.ಆರ್.ಟಿ ಡ್ಯಾನ್ಸ್ ತಂಡದ ಈ ಕಾರ್ಯಕ್ರಮವು ಯಾವುದೇ ಪ್ರಸಿದ್ಧ ರಿಯಾಲಿಟಿ ಶೋಗಳಿಗೂ ಕಡಿಮೆಯಿಲ್ಲದಂತೆ ಅದ್ಧೂರಿಯಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್.ಆರ್.ಟಿ ಡ್ಯಾನ್ಸ್ ಅಂಡ್ ಫಿಟ್‌ನೆಸ್ ಸ್ಟುಡಿಯೋದ ಸಿಇಒ ಮೋನಿಶಾ ಮಾತನಾಡಿ, ಕಳೆದ ಐದು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಸತತವಾಗಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಅವರ ಪೋಷಕರ ನಿರಂತರ ಬೆಂಬಲವೇ ಈ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸಲು ಅವಕಾಶ ಕಲ್ಪಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಎಸ್.ಆರ್.ಟಿ ಡ್ಯಾನ್ಸ್ ಅಂಡ್ ಫಿಟ್‌ನೆಸ್ ಸ್ಟುಡಿಯೋ ಹಾಗೂ ಎಸ್.ಆರ್.ಟಿ ಇವೆಂಟ್ಸ್ ಸಂಸ್ಥಾಪಕ ಮೇಘರಾಜ್ ಮಾತನಾಡಿ, ಅದ್ಧೂರಿಯಾಗಿ ನಡೆದ ಡ್ಯಾನ್ಸ್ ರಾಜಾ ಡ್ಯಾನ್ಸ್ ನೃತ್ಯ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಾರ್ಯಕ್ರಮದ ಯಶಸ್ಸಿನ ಹಿಂದೆ ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ಹಲವರ ನಿರಂತರ ಸಹಕಾರ ಪ್ರಮುಖ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಡ್ಯಾನ್ಸ್ ಕ್ಲಾಸ್ ಹಾಗೂ ಡ್ಯಾನ್ಸ್ ರಾಜಾ ಡ್ಯಾನ್ಸ್ ಕಾರ್ಯಕ್ರಮಕ್ಕೆ ಸದಾ ಬೆನ್ನೆಲುಬಾಗಿ ನಿಂತು ಬೆಂಬಲ ನೀಡಿದ ಮಣಿತ್ ಗೌಡ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ನಿರಂತರವಾಗಿ ಸಹಕರಿಸಿದ ಸಾನ್ವಿ ಗೌಡ, ಗೋಪಿಕಾ, ಸಂತೋಷ್, ಸಂದೀಪ್, ದರ್ಶನ್, ಖುಷಿಕ್ ಹಾಗೂ ಇಶಾ ಅವರ ಸಹಕಾರ ಮತ್ತು ಪರಿಶ್ರಮ ಸಾಕಷ್ಟಿದೆ. ಕಾರ್ಯಕ್ರಮದ ಯೋಜನೆ, ನಿರ್ವಹಣೆ ಹಾಗೂ ಯಶಸ್ವಿ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ ಈವೆಂಟ್ ಮ್ಯಾನೇಜರ್ ಅಜಯ್ ಬಿ.ಜೆ. ಅವರ ಸಮರ್ಪಣೆ, ಪರಿಶ್ರಮ ಹಾಗೂ ಜವಾಬ್ದಾರಿಯುತ ಕಾರ್ಯ ಶ್ಲಾಘನೀಯವಾಗಿದೆ. ಅವರ ಕೊಡುಗೆ ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕಾರಣವಾಗಿದೆ ಎಂದು ತಿಳಿಸಿದರು.

ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರೇರಣಾದಾಯಕ ಭಾಷಣಕಾರ್ತಿ ಡಾ. ಯೋಗಿತಾ ಎನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತುಂಬಿದರು. ಎಸ್.ಆರ್.ಟಿ ಡ್ಯಾನ್ಸ್ ಅಂಡ್ ಫಿಟ್‌ನೆಸ್ ಸ್ಟುಡಿಯೋದ ವಿದ್ಯಾರ್ಥಿಗಳು ವಿವಿಧ ಪ್ರಕಾರದ ನೃತ್ಯಗಳನ್ನು ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಿ, ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡರು. ವಿದ್ಯಾರ್ಥಿಗಳ ಅದ್ಭುತ ನೃತ್ಯ ಪ್ರದರ್ಶನ ಹಾಗೂ ಗಣ್ಯರ ಉಪಸ್ಥಿತಿಯೊಂದಿಗೆ ಡ್ಯಾನ್ಸ್ ರಾಜಾ ಡ್ಯಾನ್ಸ್ ಕಾರ್ಯಕ್ರಮವು ಅದ್ಧೂರಿಯಾಗಿ ಯಶಸ್ವಿಯಾಗಿ ಸಂಪನ್ನಗೊಂಡಿತು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon