ಬೆಳಗಾವಿ, ಮೇ ೨೨- ೨೦೨೫ನೇ ಶೈಕ್ಷಣಿಕ ಸಾಲಿಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಚಿಕ್ಕೋಡಿಯಲ್ಲಿ ಐ.ಟಿ.ಐ ಕಾಲೇಜ ಪ್ರವೇಶಾತಿಗಾಗಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಫಿಟ್ಟರ್, ಇಲೇಕ್ಟ್ರೀಷಿಯನ್, ಮೆಕ್ಯಾನಿಕ್ ಇಲೇಕ್ಟ್ರಿಕ್ ವೆಹಿಕಲ್, ಸಿ.ಎನ್.ಸಿ ಮಷೀನಿಂಗ್ ಟೆಕ್ನಿಷಿಯನ್, ವರ್ಚ್ಯುವಲ್ ಅನಲೈಸಿಸ್ ಡಿಸೈನರ್, ಇಂಡಸ್ಟ್ರೀಯಲ್ ರೊಬೊಟಿಕ್ಸ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್, ಇಂಜಿನಿಯರಿಂಗ ಡಿಸೈನ್ ಟೆಕ್ನಿಷಿಯನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಆಟೋಮೆಷನ್ ಟೆಕ್ನಿಷಿಯನ್ ವೃತ್ತಿಗಳಿಗಾಗಿ ಮೇ.೨೮, ೨೦೨೫ರ ಒಳಗಾಗಿ ಇಲಾಖೆ ವೆಬಸೈಟ್: www.cite.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯಯರ ಕಾರ್ಯಾಲಯ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಚಿಕ್ಕೋಡಿ ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಚಿಕ್ಕೋಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
